ಅಂಕಣಗಳುವಾರ್ತೆ

ಸಂವಹನ

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಮುಂದುವರಿದ ಭಾಗ…
ಮಾತು ಮತ್ತು ಯೋಜನೆ:
ಕೆಲವರಲ್ಲಿ ಬಹಳಷ್ಟು ಮಾತನಾಡುವ ಪ್ರವೃತ್ತಿ ಇರುತ್ತದೆ. ತಾವು ಏನು ಮಾತನಾಡುತ್ತೆವೆಂಬುದನ್ನೇ ಅವರು ಯೋಚಿಸುವುದಿಲ್ಲ. ಯೋಚಿಸದೆ ಆಡುವ ಮಾತುಗಳು ಪ್ರಮಾದಗಳನ್ನು ಉಂಟು ಮಾಡುತ್ತವೆ. ಅಲ್ಲದೆ ಯೋಚಿಸದೆ ಆಡುವ ಮಾತುಗಳು ನೀರಸವಾಗುತ್ತದೆ. ಆ ರೀತಿಯ ಮಾತುಗಳು ಯಾರನ್ನೂ ತಲುಪುವುದಿಲ್ಲ. ಈ ರೀತಿಯ ಪ್ರವೃತ್ತಿ ಇದ್ದರೆ ಅದನ್ನು ಕೈಬಿಡಬೇಕು. ಸಾಮಾನ್ಯವಾಗಿ ಮೂರು ವರ್ಗದ ಜನರು ಇರುತ್ತಾರೆ. ಯೋಚಿಸಿ ಮಾತನಾಡುವವರು, ಯೋಚಿಸದೆ ಮಾತನಾಡುವವರು; ಆದರೆ ಮಾತನಾಡಿದ ನಂತರ ಯೋಚಿಸುವವರು; ಯೋಚಿಸದೆ ಮಾತನಾಡುವವರು; ಮಾತನಾಡಿದ ನಂತರವೂ ಯೋಚಿಸದೆ ಇರುವವರು. ಇದರಲ್ಲಿ ನಾವು ಮೊದಲನೆಯ ವರ್ಗದರವರಾಗಬೇಕು. ಕನಿಷ್ಠ ಪಕ್ಷ ಎರಡನೆಯ ವರ್ಗದವರಾದರೂ ಆಗಬೇಕು. ಮಾತನಾಡಿದ ನಂತರವಾದರೂ ಯೋಚಿಸಿದರೆ ನಿಧಾನವಾಗಿ ಮೊದಲನೆಯ ವರ್ಗಕ್ಕೆ ಸೇರಿಕೊಳ್ಳುವ ಸಾಮರ್ಥ್ಯ ಬರುತ್ತದೆ. ಯೋಚನೆ ಮಾಡಿ ಆಡುವ ಮಾತುಗಳಿಂದ ಪರಿಣಾಮಕಾರಿ ಸಂವಹನ ಸಾಧ್ಯವಾಗುತ್ತದೆ. ಯೋಚನೆ ಮಾಡಿ ಆಡುವ ಮಾತುಗಳಿಂದ ಪರಿಣಾಮಕಾರಿ ಸಂವಹನ ಸಾಧ್ಯವಾಗುತ್ತದೆ.
 
 
ಸಮರ್ಥನೆ ರಹಿತ ಮಾತುಗಾರಿಕೆ:
ಕೆಲವರ ಮಾತುಗಳನ್ನು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ. ಅಂತಹವರೊಂದಿಗೆ ಪರಿಣಾಮಕಾರಿ ಸಂವಹನ ಸಾಧ‍್ಯವಾಗುತ್ತದೆ. ಆದರೆ ಕೆಲವರಿರುತ್ತಾರೆ. ಅವರೂ ಕೂಡ ಮಾತನಾಡುತ್ತಲೇ ಇರುತ್ತಾರೆ. ಅಂತಹವರ ಮಾತುಗಳನ್ನು ಕೇಳುತ್ತಿದ್ದರೆ ಇವರು ಒಮ್ಮೆ ಮಾತನಾಡುವುದನ್ನು ನಿಲ್ಲಿಸಿದರೆ ಸಾಕಪ್ಪಾ ಎಂದು ಅನಿಸಲು ಶುರುವಾಗುತ್ತದೆ. ಯಾಕೆಂದರೆ ಇವರ ಮಾತಿನಲ್ಲಿ ಯಾವ ಸ್ವಾರಸ್ಯವೂ ಇರುವುದಿಲ್ಲ. ಸ್ವಾರಸ್ಯ ಇರಬೇಕಾದರೆ ಮಾತಿನಲ್ಲಿ ವಿಷಯಗಳಿರಬೇಕು. ವಿಷಯಗಳಿಗೆ ಸರಿಯಾದ ಸಮರ್ಥನೆ ಇರಬೇಕು. ಸಮರ್ಥನೆ ರಹಿತ ಮಾತುಗಾರಿಕೆಯ ಮಾತಿನ ಪರಿಣಾಮವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ವಿಷಯಗಳಿಲ್ಲದೆ ಮಾತನಾಡುವ ಪ್ರವೃತ್ತಿ ಯಾರಲ್ಲಾದರೂ ಇದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು.
 
 
 
ಸ್ವಯಂ ನಿಯಂತ್ರಣದ ಕೊರತೆ:
ಅನೇಕ ಸಂದರ್ಭಗಳಲ್ಲಿ ಮಾತುಗಾರಿಕೆಯು ಭಾವನೆಯನ್ನು ಪ್ರಚೋದಿಸುತ್ತದೆ. ಭಾವ ಪ್ರಚೋದನೆ ಉಂಟಾದಾಗ ಸ್ವಯಂ ನಿಯಂತ್ರಣವು ಬಹುವಾಗಿ ತಪ್ಪಿಹೋಗಿಬಿಡುತ್ತದೆ. ಸ್ವಯಂ ನಿಯಂತ್ರಣವು ದುರ್ಬಲವಾದರೆ ಸಂವಹನದ ಮೇಲಿನ ಹಿಡಿತ ತಪ್ಪಿ ಹೋಗುತ್ತದೆ. ಸಂವಹನದಲ್ಲಿ ಅಡೆತಡೆಗಳು ಉಂಟಾಗುತ್ತದೆ. ಆದ್ದರಿಂದ ಮಾತು ಭಾವನಾತ್ಮಕ ನಿಯಂತ್ರಣವು ಕೆಡಿಸದಂತೆ ನೋಡಿಕೊಳ್ಳಬೇಕು.
ಮುಂದುವರಿಯುವುದು…
ಅರವಿಂದ ಚೊಕ್ಕಾಡಿ
[email protected]

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here