ಸಂಭ್ರಮದ ಸ್ವಾತಂತ್ರೋತ್ಸವ ಸಪ್ತಾಹ

0
447

ವರದಿ: ಸುನೀಲ್ ಬೇಕಲ್
ಶ್ರೀಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಆಗಸ್ಟ್ 15 ರಂದು 1 ನೇ ತರಗತಿಯಿಂದ 10ನೇ ತರಗತಿಯ ವಿದ್ಯಾ‍ಥಿ-ವಿದ್ಯಾರ್ಥಿನಿಯರಿಗೆ 70 ನೇ ಸ್ವಾತಂತ್ರೋತ್ಸವವು ಸಂಭ್ರಮದಿಂದ ಜರುಗಿತು.
 
 
ಬೆಳಿಗ್ಗೆ 8.30 ಕ್ಕೆ ಧ್ವಜರೋಹಣ ಕಾರ್ಯಕ್ರಮವನ್ನು ಮಾಜಿ ಸೈನಿಕರರಾದ ಜೇಮ್ಸ ಕೆ.ವಿಯವರು ನಡೆಸಿಕೊಟ್ಟರು. ಮಕ್ಕಳು ಸಮವಸ್ತ್ರ ಧರಿಸಿಕೊಂಡು ಕಾರ್ಯಕ್ರಮದ ಸೌಂದರ್ಯವನ್ನು ದುಗುಣಗೊಳಿಸಿದರು.
 
 
 
ಮುಖ್ಯ ಅಭ್ಯಾಗತರಾಗಿ ಧರ್ಮಸ್ಥಳದ 46 ವರ್ಷ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಚೀಪ್ ಅಕೌಟೆಂಟ್ ಅಧಿಕಾರಿ ಕೃಷ್ಣರಾಜ್ ಶೆಟ್ಟಿ ಸಭಾಧ್ಯಕ್ಷರಾಗಿ ಆಗಮಿಸಿದ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ವಚ್ಚಾರಿತ್ಯ ಆಚಾರದಿಂದ ಮಕ್ಕಳು ಗುರುಹಿರಿಯನ್ನು ಗೌರವಿಸಿದಾಗ ನಮ್ಮ ಹಿರಿಯ ಸ್ವಾತಂತ್ರ ಹೋರಾಟಗಾರರಿಗೆ ನಿಜವಾದ ಗೌರವ ಸಿಗಲು ಸಾಧ್ಯಎಂದು ನುಡಿದರು.
 
 
 
ಮತ್ತೊಬ್ಬ ಅತಿಥಿಗಳಾದ ಸೇನೆಯಲ್ಲಿ 21 ವರ್ಷ ಸೇವೆಯನ್ನು ಪೂರ್ತಿಗೊಳಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕರಾದ ಜೇಮ್ಸ ಕೆ.ವಿ ಇವರು ತಮ್ಮ ಅತಿಥಿ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಹಿಂದುಸ್ಥಾನವು ಎಂದೂ ಮರೆಯದ ಭಾರತರತ್ನ ನಿವಾಗಬೇಕು ಎಂದು ಹಾರೈಸಿದರು ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಎಂ.ವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
ವೈವಿದ್ಯಮಯ ಸ್ಪರ್ಧೆಯನ್ನು ರಚಿಸಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲಾಯಿತು. ಕೆ.ಜಿ ಯಿಂದ ಹತ್ತನೆ ತರಗತಿಯವರೆಗೆ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಯಿತು. ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಪ್ತಾಹದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಸ್ವಾತಂತ್ರ್ಯ ದಿನಕ್ಕೆ ವೀಡಿಯೋ ಪ್ರದರ್ಶನ, ಸ್ರಜನಾತ್ಮಕ ಬರವಣಿಗೆ ವ್ಯೆಯಕ್ತಿಕ ಸ್ಪರ್ಧೆಯನ್ನು ಇಟ್ಟುಕೊಂಡು ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆಗೆ ಅವಕಾಶ ಕೊಡಲಾಯಿತು.
 
 
ಮಕ್ಕಳು ಭಾವೈಕ್ಯತೆಗೆ ಸಂಬಂಧಪಟ್ಟಂತಹ ಬಿತ್ತಿ ಪತ್ರದ ಪ್ರದರ್ಶನವನ್ನು ಸ್ಪರ್ಧಾತ್ಮಕವಾಗಿ ನಡೆಸಿಕೊಟ್ಟರು.ಒಟ್ಟಾರೆ ಸ್ವಾತಂತ್ರ್ಯ ಸಪ್ತಾಹವು ವೈವಿಧ್ಯಮಯವಾಗಿತ್ತು ಹಾಗೂ ಮಕ್ಕಳಲ್ಲಿ ಸ್ರಜನಾತ್ಮಕ ಬಾವೈಕ್ಯತೆಯನ್ನು ಉನ್ನತೀಕರಿಸಲು ಉತ್ತಮವಾದ ಅವಕಾಶವನ್ನು ನೀಡಲಾಗಿತ್ತು. ಕೃಪಾ ಎ.ನ್ 9ನೇ ತರಗತಿ ಸ್ವಾತಂತ್ರ್ಯ ಸಪ್ತಾಹವದ ವರದಿಯನ್ನು ವಿವರಿಸಿದಳು. ಸ್ವಾತಂತ್ರ ಸಪ್ತಾಹದಲ್ಲಿ ಸ್ಪರ್ಧೆಯನ್ನು ನಡೆಸಿ ಕೆ.ಜಿ ಯಿಂದ ಹತ್ತನೇ ತರಗತಿಯ ವಿಜೇತರಿಗೆ ಬಹುಮಾನವನ್ನು ಕೊಡಲಾಯಿತು.ಸಹ ಶಿಕ್ಷಕಿ ಸೌಮ್ಯ, ವಿಜೇತರಾದ ಸ್ಪರ್ಧಾಳುಗಳ ವಿವರದ ಪಟ್ಟಿಯನ್ನು ಮಂಡಿಸಿದರು.
ಅಕ್ಷತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಎಂ.ವಿ.ಮುಖ್ಯ ಅಭ್ಯಾಗತರನ್ನು ಸ್ವಾಗತಿಸಿದರು. ಸ್ವಾತಿ ಜೈನ್ ವಂದಿಸಿದರು.ಈ ಸಂದರ್ಭದಲ್ಲಿ ಪೋಷಕರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here