ಸಂಭಾಷಣೆ ಸಿಡಿ ರಿಲೀಸ್

0
209

ಬೆಂಗಳೂರು ಪ್ರತಿನಿಧಿ ವರದಿ
ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಬೆನ್ನಲ್ಲೇ ಅನಂತಕುಮಾರ್, ಯಡಿಯೂರಪ್ಪ ಸಂಭಾಷಣೆ ಸಿಡಿ ರಿಲೀಸ್ ಆಗಿದೆ. ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಸಿಡಿ ಬಿಡಿಗಡೆ ಮಾಡಿದ್ದಾರೆ.
ಸಿಡಿ ಬಿಡುಗಡೆ ಬಳಿಕ ಮಾತನಾಡಿದ ವಿ ಎಸ್ ಉಗ್ರಪ್ಪ ಹೈಕಮಾಂಡ್ ಗೆ ಹಣ ನೀಡಿದ ಬಗ್ಗೆ ಇಬ್ಬರಿಂದ ಮಾತುಕತೆ ನಡೆದಿದೆ. ಆದರೆ ಡೈರಿಯಲ್ಲಿ ಹಣ ನೀಡಿದ್ದರ ಬಗ್ಗೆ ದಾಖಲು ಆಗಿಲ್ಲ. ಯಡಿಯೂರಪ್ಪ ಹಗಲು ದರೋಡೆ ಮಾಡಿದ್ದ ಬಗ್ಗೆ ಸಾಕ್ಷಿ ಇದೆ ಹೇಳಿದ್ದಾರೆ. ಸಿಡಿಯಲ್ಲಿರುವ ಸಂಭಾಷಣೆಯ ವಿವರ ನೀಡಿದ್ದಾರೆ.
 
 
‘ಇಷ್ಟೊಂದು ಕೀಳುಮಟ್ಟಕ್ಕೆ ಬಿಎಸ್ ವೈ ಇಳಿದಿದ್ದು ಶೇಮ್ ಶೇಮ್’. ಬಿಎಸ್ ವೈ ಅಧಿಕಾರದಲ್ಲಿದ್ದಾಗ ಶೇ.31.75ರಷ್ಟು ಟೆಂಡರ್ ನ್ನು ಹಗಲು ದರೋಡೆ ಮಾಡಿದ್ದಾರೆ ಎಂದು ವಿಧಾನಸೌಧದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
 
 
ಸಿಡಿಯಲ್ಲಿರುವ ಅನಂತಕುಮಾರ್, ಬಿಎಸ್ ವೈ ಸಂಭಾಷಣೆ ವಿವರ:
‘ನೀವಿದ್ದಾಗಲೂ ಕೇಂದ್ರಕ್ಕೆ ದುಡ್ಡು ಕೊಟ್ಟಿದ್ದೀರಿ’ನಾನೂ ಕೊಟ್ಟಿದ್ದೀನಿ, ನಾನ್ ಕೊಟ್ಟಿಲ್ಲ ಅಂತ ಎಲ್ಲಿ ಹೇಳಿದ್ದೀನಿ..ಆದರೆ ಸಾವಿರ ಕೊಟ್ಟಿಲ್ಲ ಎಂದು ಅನಂತ ಕುಮಾರ್ ಹೇಳಿದ್ದಾರೆ.
‘ಕೊಟ್ಟಿರುತ್ತಾರೆ… ಆದರೆ ಬರೆದುಕೊಂಡು ಇಟ್ಟಿಕೊಳ್ಳುತ್ತಾರೆ?’ ಅನಂತ್ ಕುಮಾರ್ ಹೇಳಿಕೆಗೆ ಬಿ ಎಸ್ ಉಡಿಯೂರಪ್ಪ ಉತ್ತರಿಸಿದ್ದಾರೆ.
‘ಹರಳ್ ಬೀಸಿದ್ರೆ ಹತ್ಕೊಳ್ಳುತ್ತೆ…ಸಾವಿರ ಕೋಟಿ ಕೊಟ್ಟಿಲ್ಲ. ‘ಸಾವಿರ ಕೋಟಿ ಕೊಟ್ಟಿಲ್ಲ ಅಂತ ಯಾವನೂ ಒಪ್ಪಿಕೊಳ್ಳಲ್ಲ”ಕೊಟ್ಟಿದ್ದಾನೆ ಅಂತಾನೆ ಹೇಳೋದು. ಎಲೆಕ್ಷನ್ ತನಕ ಉತ್ತರ ಕೊಡ್ತಾ ತಿರುಗಬೇಕಾಗುತ್ತದೆ, ತಿರುಗಲಿ ಎಂದು ಬಿಎಸ್ ಯಡಿಯೂರಪ್ಪಗೆ ಅನಂತ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here