ಸಂಪರ್ಕಕ್ಕೆ ಸಿಗದ ನ್ಯಾನೋ ಉಪಗ್ರಹ

0
293

ರಾಷ್ಟ್ರೀಯ ಪ್ರತಿನಿಧಿ ವರದಿ
ಬೆಂಗಳೂರಿನ ಪೈಸ್ಯಾಟ್ ಉಪಗ್ರಹ ಇನ್ನೂ ಸಂಪರ್ಕಕ್ಕೆ ಸಿಗಲಿಲ್ಲ. ಪಿಇಎಸ್ ವಿವಿ ವಿದ್ಯಾರ್ಥಿಗಳು ತಯಾರಿಸಿದ ಪೈಸ್ಯಾಟ್ ನ್ಯಾನೋ ಉಪಗ್ರಹ ಇನ್ನೂ ಪಿಇಎಸ್ ವಿವಿ ಆವರಣದ ಉಪಗ್ರಹ ನಿಯಂತ್ರಣ ಕೇಂದ್ರದ ಸಂಪರ್ಕಕ್ಕೆ ಸಿಗಲಿಲ್ಲ.
 
 
ಪೈಸ್ಯಾಟ್ ನ್ಯಾನೋ ಉಪಗ್ರಹ ನಿನ್ನೆ ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶದಿಂದ ಉಡಾವಣೆಯಾಗಿತ್ತು. ಆದರೆ ಪೈಸ್ಯಾಟ್ ಇಂಡೋನೇಷ್ಯಾದ ನಿಯಂತ್ರಣ ಕೇಂದ್ರದ ಸಂಪರ್ಕಕ್ಕೆ ಸಿಕ್ಕಿತ್ತು. ಎರಡು ಬಾರಿ ಸಂಪರ್ಕಕ್ಕೆ ಸಿಕ್ಕಿದ್ದ ಪೈಸ್ಯಾಟ್, ಉಪಗ್ರಹ ಕಕ್ಷೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಇನ್ನೆರಡು ದಿನಗಳಲ್ಲಿ ಸಂಪರ್ಕಕ್ಕೆ ಲಭ್ಯವಾಗಲಿದೆ. ಆದರೆ ಅಮೆರಿಕಾ ವೆಬ್ ಸೈಟ್ ನಲ್ಲಿ ಉಪಗ್ರಹದ ಕಕ್ಷೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಪ್ರಕಟವಾದ ಬಳಿಕ ಪೈಸ್ಯಾಟ್ ಉಪಗ್ರಹದ ಸಂಪರ್ಕ ಕಳೆದುಕೊಂಡಿದೆ.
 
 
ನಿನ್ನೆ ಇಸ್ರೋ ಸಂಸ‍್ಥೆ ಬೆಂಗಳೂರಿನ ವಿವಿ ಉಪಗ್ರಹ ಸೇರಿ ಒಟ್ಟು 8 ಉಪಗ್ರಹ ನಭಕ್ಕೆ ಹಾರಿಸಿತ್ತು. 5 ವಿದೇಶಿ ಉಪಗ್ರಹವನ್ನು ಅಂತರಿಕ್ಷಕ್ಕೆಮತ್ತು ಮೂರು ಸ್ವದೇಶಿ ಉಪಗ್ರಹವನ್ನು ಕಕ್ಷೆಗೆ ಇಸ್ರೋ ಸೇರಿಸಿದೆ.

LEAVE A REPLY

Please enter your comment!
Please enter your name here