ಸಂತಾಪ

0
278

ಮೂಡುಬಿದಿರೆ: ಶತಾಯುಷಿ, ಸಾಹಿತಿ, ಕನ್ನಡದ ಹಿರಿಯ ಹೋರಾಟಗಾರ, ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಸಮಾಜ ಮಂದಿರ ಸಭಾದ ಅಧ್ಯಕ್ಷ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಾಟೀಲ ಪುಟ್ಟಪ್ಪ ಅವರು ಕನ್ನಡದ ಧ್ವನಿಯಾಗಿದ್ದರು. ಶ್ರೇಷ್ಠ ಹೋರಾಟಗಾರರಾಗಿ ಗೋಕಾಕ್ ಚಳುವಳಿಯಿಂದ ಕಾವೇರಿ ಹೋರಾಟದ ವರೆಗೂ ಸಕ್ರಿಯವಾಗಿ ಪಾಲ್ಗೊಂಡ ಅಪ್ಪಟ ಧೀಮಂತ ಕನ್ನಡಿಗರಾಗಿದ್ದರು. ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಹೈಕೋರ್ಟ್ ಪೀಠ, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣದ ಹಿನ್ನೆಲೆಯಲ್ಲಿ ಪಾಪು ಅವರ ಕೊಡುಗೆ ಮಹತ್ವದ್ದು. ಕನ್ನಡಿಗರ ಏಕೀಕರಣದ ಹೋರಾಟದಲ್ಲಿಯೂ ಪಾಟೀಲ ಪುಟ್ಟಪ್ಪ ಅವರ ಸೇವೆ ಮಹತ್ವದ್ದು ಎಂದು ಸಂತಾಪ ವ್ಯಕ್ತಪಡಿಸಿರುವ ಅಭಯಚಂದ್ರ ಪಾಟೀಲಪುಟ್ಟಪ್ಪ ಅವರು ಮೂಡುಬಿದಿರೆ ಸಮಾಜ ಮಂದಿರದೊಂದಿಗೂ ಸಾಹಿತ್ಯ, ಸಾಂಸ್ಕøತಿಕ ಬಾಂಧವ್ಯವನ್ನು ಹೊಂದಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here