ಸಂಡೇ ಸವಿಯಿರಿ ಮಸಾಲೆ ಕ್ಯಾಪ್ಸಿಕಂ…

0
354

ಮಸಾಲೆಗೆ ಬೇಕಾದ ವಸ್ತುಗಳು:
1 ದೊಡ್ಡ ಬೇಯಿಸಿದ ಆಲೂಗೆಡ್ಡೆ (ಸಿಪ್ಪೆ ಸುಲಿದಿರಬೇಕು),  2 ಈರುಳ್ಳಿ (ಕತ್ತರಿಸಿದ್ದು),  2-3 ಹಸಿ ಮೆಣಸಿನ ಕಾಯಿ ಪೇಸ್ಟ್,  2-3 ಎಸಳು ಬೆಳ್ಳುಳ್ಳಿ,  1 ಚಮಚ ಮೆಂತೆ ಕಾಳು, 1/2 ಚಮಚ ಕೊತ್ತಂಬರಿ ಪುಡಿ, 1/2 ಚಮಚ ಅರಿಶಿಣ ಪುಡಿ, ನಿಂಬೆ ರಸ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ರುಚಿಗೆ ತಕ್ಕ ಉಪ್ಪು, ಎಣ್ಣೆ
ಮಸಾಲೆ ತಯಾರಿಸುವ ವಿಧಾನ: 
ಆಲೂಗೆಡ್ಡೆಯ ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಹಿಸುಕಬೇಕು. ಬಾಣಲೆಯನ್ನು ಬಿಸಿ ಮಾಡಿ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಬೆಳ್ಳುಳ್ಳಿ ಎಸಳು ಮತ್ತು ಈರು, ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಈಗ ಅರಿಶಿಣ ಪುಡಿ, ಉಪ್ಪು, ಮೆಂತೆ (ಇದನ್ನು ಸ್ವಲ್ಪ ಪುಡಿ ಮಾಡಿದರೆ ಒಳ್ಳೆಯದು), ಕೊತ್ತಂಬರಿ ಪುಡಿ ಹಾಕಿ ಮಿಶ್ರ ಮಾಡಿ ಅದಕ್ಕೆ ಹಿಸುಕಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
ಮಸಾಲೆ ತುಂಬಿದ ಕ್ಯಾಪ್ಸಿಕಂಗೆ ಬೇಕಾಗುವ ಸಾಮಾಗ್ರಿಗಳು: 
* 3 ದೊಡ್ಡ ದುಂಡು ಮೆಣಸಿನ ಕಾಯಿ (ಕ್ಯಾಪ್ಸಿಕಂ), ಎಣ್ಣೆ, ಮಸಾಲೆ
ತಯಾರಿಸುವ ವಿಧಾನ:
ಅವನ್ ಅನ್ನು ಮುಂಚಿತವಾಗಯೇ 400 Fಗೆ ಬಿಸಿ ಮಾಡಬೇಕು. ನಂತರ ಬೇಯಿಸಬೇಕದ ಶೀಟ್ ಗೆ ಎಣ್ಣೆ ಸವರಬೇಕು. ದುಂಡು ಮೆಣಸಿನ ಕಾಯಿಯನ್ನು ಚೆನ್ನಾಗಿ ತೊಳೆದು ಅದರ ನೀರನ್ನು ಟಿಶ್ಯೂ ಪೇಪರ್ ನಿಂದ ಒರೆಸಿ ತೆಗೆಯಬೇಕು. ನಂತರ ದುಂಡು ಮೆಣಸಿನ ಕಾಯಿಯನ್ನು ಸಮವಾಗಿ ಎರಡು ತುಂಡು ಮಾಡಬೇಕು. ಅದರ ಒಳಗಿರುವ ಬೀಜವನ್ನು ಬಿಸಾಡಬೇಕು. ನಂತರ ಕ್ಯಾಪ್ಸಿಕಂನ ಒಳಗೆ ಮತ್ತು ಹೊರಗೆ ಎಣ್ಣೆ ಸವರಿ, ಸ್ವಲ್ಪ ಉಪ್ಪು ಚಿಮುಕಿಸಬೇಕು. ನಂತರ ಮಸಾಲೆಯನ್ನು ಇದರಲ್ಲಿ ತುಂಬಬೇಕು. ನಂತರ ಇದನ್ನು ಬೇಕಿಂಗ್ ಶೀಟ್ ನಲ್ಲಿಟ್ಟು ಮುಂಚಿತವಾಗಿ ಬಿಸಿ ಮಾಡಿದ ಅವನ್ ನಲ್ಲಿ 35-40 ನಿಮಿಷ ಇಟ್ಟು ಬೇಯಿಸಬೇಕು. ಕ್ಯಾಪ್ಸಿಕಂ ಬೆಂದ ರೀತಿ ಕಂಡಾಗ ಹೊರ ತೆಗೆಯಬೇಕು.

LEAVE A REPLY

Please enter your comment!
Please enter your name here