ಸಂಘಗಳ ಅವಲೋಕನ ಕಾರ್ಯಕ್ರಮ

0
281

ವರದಿ: ಸುನೀಲ್ ಬೇಕಲ್
ಶ್ರೀ.ಧ.ಮಂ.ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳ ಇಲ್ಲಿನ 2015-16 ನೇ ಸಾಲಿನ ಸಂಘಗಳ ಅವಲೋಕನ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು.
 
 
ಈ ಕಾರ್ಯಕ್ರಮದಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂಜೈವಿಕತಂತ್ರಜ್ನಾನ ವಿಭಾಗದ ಮುಖ್ಯಸ್ಥರಾದ ಪ್ರಾರ್ಥನಾರವರು ಆಗಮಿಸಿ ಶಾಲಾ-ಸಂಘಗಳ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
 
 
ಮುಂದಿನ ಶೈಕ್ಷಣಿಕ ವರ್ಷದಲ್ಲೂ ಇನ್ನೂ ಹೆಚ್ಚಿನ ಚಟುವಟಿಕೆಗಳು ಮೂಡಿಬರಲಿ ಹಾಗೂ ವಿದ್ಯಾರ್ಥಿಗಳು ಜೀವನದಲ್ಲಿ ವೈಜ್ನಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ನುಡಿದರು.
 
 
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಸಮೂಹಗಾನ, ಸಮೂಹನೃತ್ಯ ಹೀಗೆ ವಿವಿಧ ವಿನೋದಾವಳಿಗಳು ಅತ್ಯುತ್ತಮವಾಗಿ ಮೂಡಿಬಂದವು.

LEAVE A REPLY

Please enter your comment!
Please enter your name here