ಸಂಕ್ರಾತಿಗಾಗಿ ಹೆಚ್ಚುವರಿ ಬಸ್

0
306

ಬೆಂಗಳೂರು ಪ್ರತಿನಿಧಿ ವರದಿ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ 650 ಕೆಎಸ್ಆರ್ ಟಿಸಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಜನವರಿ 13 ಮತ್ತು 14ರಂದು ವಿಶೇಷ ಬಸ್ ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಚಾರ ನಡೆಸಲಿವೆ.
 
 
ಪ್ರಸ್ತುತ ಸಂಚಾರ ನಡೆಸುತ್ತಿರುವ ಬಸ್ ಗಳ ಜೊತೆಗೆ 650 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಜನವರಿ 15ರಂದು ರಾಜ್ಯದ ವಿವಿಧ ಪ್ರದೇಶಗಳಿಂದ ವಿಶೇಷ ಬಸ್ಸುಗಳು ಪುನಃ ಬೆಂಗಳೂರಿಗೆ ಆಗಮಿಸಲಿವೆ.

LEAVE A REPLY

Please enter your comment!
Please enter your name here