ಸಂಕೇತ್ ಮಿತ್ರರಿಂದ ಸ್ವಾತಂತ್ರ್ಯೋತ್ಸವ ಆಚರಣೆ

0
242

ವರದಿ: ವಿ ಸೀತಾರಾಮ್ ಬೇರಿಂಜ
ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ವರ್ಕಾಡಿ ಕಾವೀ ಕೃಪಾ ಸಂಕೇತ್ ಮಿತ್ರ ಮಂಡಳಿಯ ವತಿಯಿಂದ 70ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಂಡಳಿಯ ಕಛೇರಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ನ 4ನೇ ಪಾವಳ ವಾರ್ಡ್ ಸದಸ್ಯೆ ಪೂರ್ಣಿಮಾ ಎಸ್. ಬೇರಿಂಜ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿ ಸಾಂದರ್ಭಿಕವಾಗಿ ಮಾತಾನಾಡಿದರು.
 
 
ಸಮಾರಂಭದಲ್ಲಿ ಕಿಶೋರ್ ಕುಮಾರ್ ನಾಯ್ಕ್, ಭರತ್ ನಾಯ್ಕ್, ವಿವೇಕಾನಂದ ಶೆಟ್ಟಿ, ಗೋಪಾಲ್, ಮತ್ತಿತರರು ಉಪಸ್ಥಿತರಿದ್ದರು. ಮಂಡಳಿಯ ಅಧ್ಯಕ್ಷರಾದ ವಿ. ಸೀತಾರಾಂ ಬೇರಿಂಜ ಎಲ್ಲರನ್ನೂ ಸ್ವಾಗತಿಸಿದರು. ವರ್ಕಾಡಿ ಸೇವಾ ಸಹಕಾರಿ ಬೇಂಕ್ನ ನಿರ್ದೇಶಕರಲ್ಲೊಬ್ಬರಾದ ಕೃಷ್ಣಪ್ಪ ಮಡಿಕ ವಂದಿಸಿದರು.
 
 
ಮಂಡಳಿಯ ಕಾರ್ಯದರ್ಶಿ ರವೀಂದ್ರ ಕುಲಾಲ್ ಸಮಾರಂಭದ ಮುಂದಾಳುತ್ವ ವಹಿಸಿದ್ದರು. ಉತ್ತಮ ಸಂಖ್ಯೆಯಲ್ಲಿ ನೆರೆದ ಸಭಿಕರಿಗೆ ಲಘು ಉಪಹಾರ ನೀಡಿ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಮಿತ್ರರು ಹಂಚಿಕೊಂಡರು.

LEAVE A REPLY

Please enter your comment!
Please enter your name here