'ಸಂಕುಚಿತ ಸಂಕೋಲೆಗಳಿಂದ ಸಾಹಿತ್ಯ ಮುಕ್ತವಾಗಲಿ'

0
339

 
ವರದಿ: ಶಿವಮಲ್ಲಯ್ಯ ಬನ್ನಿಗನೂರು
ಚಿತ್ರ: ಚೈತನ್ಯಕುಡಿನಲ್ಲಿ
ಧರ್ಮಸ್ಥಳ ನ.28; ಜಾತಿಯ ಸಂಕುಚಿತ ಸಂಕೋಲೆಗಳಿಂದ ಸಾಹಿತ್ಯ ಮುಕ್ತವಾಗಬೇಕಿದೆ ಎಂದು ವಿಜಯವಾಣಿ ಪತ್ರಿಕೆಯ ಸಂಪಾದಕ ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟರು.
 
 
ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 84ನೇ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿದರು.
 
 
ಮಹಾಭಾರತ, ರಾಮಾಯಣ, ವಚನ, ದಾಸ ಸಾಹಿತ್ಯ ಲೋಕದ ಡೊಂಕುಗಳನ್ನು ಗುರುತಿಸಿದ್ದವು. ಆ ಮೂಲಕ ಸಾಮಾಜಿಕ ಕಳಕಳಿ ಅಭಿವ್ಯಕ್ತಿಸಿದ್ದವು. ಈಗ ಮಹಾಕಾವ್ಯಗಳನ್ನು ಸಂಕುಚಿತವಾಗಿ ಗ್ರಹಿಸಿ ಅರ್ಥೈಸಲಾಗುತ್ತಿರುವುದು ಖೇದಕರ ಎಂದರು.
 
 
ಯುದ್ದದ ಪರಿಣಾಮವಾಗಿ ಜಗತ್ತಿನ ಹಲವು ದೇಶಗಳು ನಾಶವಾಗಿವೆ. ಭಾರತದ ಮೇಲೆ ನಿರಂತರ ದಾಳಿ ನಡೆದರೂ ದೇಶದ ಸಂಸ್ಕೃತಿ, ಕಲೆ, ಆಧ್ಯಾತ್ಮಿಕ ಶಕ್ತಿ ಗಟ್ಟಿಯಾಗಿ ಉಳಿದಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರೂ ನಿರ್ವಹಿಸಬೇಕಿದೆ ಎಂದು ಹೇಳಿದರು.
 
 
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 84 ವರ್ಷಗಳಿಂದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಸೇವೆಗೈಯ್ಯುತ್ತಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 
 
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ಯೋಜನೆಗಳು ಸರಕಾರದ ಆಡಳಿತಕ್ಕೆ ಮಾದರಿಯಾಗಿವೆ. ಸಾಮಾಜಿಕ ಕಳಕಳಿ ಹಾಗೂ ಗ್ರಾಮೀಣ ಜನರ ಸ್ವಾವಲಂಬನೆಗೆ ವಿಶೇಷವಾದ ಒತ್ತು ನೀಡಿ ಕ್ರಾಂತಿಗೆ ಪೂರಕವಾಗಿವೆ ಎಂದರು.

LEAVE A REPLY

Please enter your comment!
Please enter your name here