ಶ‍್ರೀರಾಮಚಂದ್ರಾಪುರಮಠದಿಂದ ಮಂಗಲಗೋಯಾತ್ರೆ

0
131

ಗೋಕಿಂಕರ ಯಾತ್ರೆ

ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆಯ ಮಹಾಕಾರ್ಯದಲ್ಲಿ ಶ್ರೀರಾಮಚಂದ್ರಾಪುರಮಠವು  ನಿರತವಾಗಿದ್ದು, ಭಾರತೀಯ ಗೋಯಾತ್ರೆ, ಗೋಸಂಸತ್, ವಿಶ್ವಗೋಸಮ್ಮೇಳನ , ವಿಶ್ವಮಂಗಳ ಗೋಗ್ರಾಮಯಾತ್ರೆ ಮುಂತಾದ ಹತ್ತು ಹಲವು ಗೋಸಂಬಂಧಿ ಕಾರ್ಯಕ್ರಮಗಳ ಮೂಲಕ ಗೋಜಾಗೃತಿಯನ್ನು ಉಂಟುಮಾಡಿದೆ, ಇದೀಗ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಗೋತಳಿಗಳ ಸಂರಕ್ಷಣೆಯ ಮಹಾ ಅಭಿಯಾನವನ್ನು ಸಂಕಲ್ಪಿಸಿದ್ದು,  “ಮಂಗಲಗೋಯಾತ್ರೆ” ಸಂಪನ್ನವಾಗಲಿದೆ  ಎಂದು ಹೊಸನಗರ ಶ್ರೀರಾಮಚಂದ್ರಾಪುರಮಠದ   ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಶ್ರೀರಾಜಶೇಖರಾನಂದ ಸ್ವಾಮಿಗಳು, ವಜ್ರದೇಹಿ ಮಠ, ಮಂಗಳೂರು ಹಾಗೂ ಶ್ರೀ ಆರೂಢಭಾರತೀ ಸ್ವಾಮಿಜಿ ಸಿದ್ಧಾರೂಡ ಮಿಷನ್ ಅವರು ಉಪಸ್ಥಿತರಿದ್ದರು.
  • 2016 ರ ಸೆಪ್ಟೆಂಬರ್ 16 ರಿಂದ ನವೆಂಬರ್ 7 ನೇ ದಿನಾಂಕದವರೆಗೆ ನಡೆಯಲಿದೆ.
  • ಕರ್ನಾಟಕದ 224 ತಾಲೂಕುಗಳಿಗೆ ಯಾತ್ರೆ ತಲುಪಲಿದೆ.
  • ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಆಯ್ದ ಸ್ಥಾನಗಳಿಗೆ ಯಾತ್ರೆ ಭೇಟಿಕೊಡಲಿದೆ.
  • ಮಲೆನಾಡುಗಿಡ್ಡ, ಕಾಸರಗೋಡು ತಳಿ, ಬರಗೂರು, ಪುಂಗನೂರು, ಹಳ್ಳಿಕಾರು, ಓಂಗೋಲ್, ಅಮೃತಮಹಲ್, ಖಿಲಾರಿ, ಕೃಷ್ಣವ್ಯಾಲಿ, ಜವಾರಿ, ದೇವನಿ ಇಂತಹ ಹನ್ನೊಂದು ಭಾರತೀಯ ತಳಿಗಳ ಮೂಲಸ್ಥಾನಗಳಲ್ಲಿ ಯಾತ್ರೆ ಸಂಚರಿಸಲಿದೆ.
  • ಗೋಸೇವಕ ಸಂಘಟನೆ ಯಾತ್ರೆಯ ಮೂಲ ಉದ್ದೇಶ
  • ಆಯಾಯಾ ಪ್ರದೇಶದ ಸಂತರ ನೇತೃತ್ವದಲ್ಲಿ, ಗವ್ಯಾಧಾರಿತ ಕೃಷಿ ಕಾರ್ಯ ನಡೆಸುವ ರೈತರ ಸೇರುವಿಕೆಯಲ್ಲಿ, ಗೋಪ್ರೇಮಿ ಮಕ್ಕಳ ಪಾಲ್ಗೊಳ್ಳುವಿಕೆಯಲ್ಲಿ ಯಾತ್ರೆ ಜರುಗಲಿದೆ.

 

LEAVE A REPLY

Please enter your comment!
Please enter your name here