ಶ್ರೀ ಶಂಕರ ಜಯಂತಿ-ಆಚಾರ್ಯ ಸಂಸ್ಮರಣೆ

0
582

 
ವರದಿ/ಚಿತ್ರ:  ಶ್ಯಾಮ್ ಪ್ರಸಾದ್
ಶ್ರೀ ಆದಿಶಂಕರಾಚಾರ್ಯರು 1200 ವರ್ಷಗಳ ಹಿಂದೆ ಅವತರಿಸಿದ್ದು “ವೈಶಾಖ ಶುದ್ಧ ಪಂಚಮಿಯಂದು” ಪರಮಶಿವನ ಅವತಾರವಾದ ಅವರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಆಸೇತು ಹಿಮಾಚಲವನ್ನು ಸುತ್ತಿ ಜಗತ್ತಿಗೆ ವೇದಸಾರವುಳ್ಳ ಸ್ತೋತ್ರಸಾಹಿತ್ಯದ ಮೂಲಕ ಭಗಚ್ಚಿಂತನೆಯನ್ನು ತಿಳಿಸಿದವರು, ವೈದಿಕ ಧರ್ಮಕರ್ಮಾಚರಣೆಗಳಿಗೆ ರೂಪುರೇಖೆಗಳನ್ನು ನೀಡಿದವರು, ಅದ್ವೈತ ತತ್ವ ಪ್ರಸಾರದ ಮೂಲಕ ವಿಶ್ವಬ್ರಾತೃತ್ವಕ್ಕೆ ನಾಂದಿ ಹಾಡಿದರು.
 
 
ಆ ದಿನವನ್ನು ಶ್ರೀ ಶಂಕರ ಜಯಂತಿ ಎಂಬುದಾಗಿ ಆಚರಿಸುತ್ತಿದ್ದೇವೆ. `ಶ್ರೀ ಶಂಕರ ಜಯಂತಿ’ ಅಂಗವಾಗಿ ಅವರ ಜೀವನಚರಿತ್ರೆ – ವಿಚಾರಧಾರೆಯನ್ನು ತಿಳಿಯಪಡಿಸುವ ಈ ಸದ್ಗುರು ಸಂಸ್ಮರಣ ಕಾರ್ಯಕ್ರಮವು ಮೇ.20 ಶುಕ್ರವಾರದಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅಪರಾಹ್ಣ 2.30ಕ್ಕೆ ನಡೆಯಲಿರುವುದು. ಕುಳಮರ್ವ ಶಂಕರನಾರಾಯಣ ಭಟ್ಟರ ಅಧ್ಯಕ್ಷತೆಯಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ ವೇದಬ್ರಹ್ಮ ಶ್ರೀ ಮಂಜಳಗಿರಿ ವೆಂಕಟರಮಣ ಭಟ್ಟರು ಉಪನ್ಯಾಸಗೈಯಲಿರುವರು.
 
 
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂ ಪ್ರತಿಷ್ಠಾನ, ಅನೂಚಾನ ನಿಲಯ, ಇಡ್ಕಿದು, ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ರಿ. ಪೆರಡಾಲ, ಶ್ರೀ ಉದನೇಶ್ವರ ವಸಂತವೇದಪಾಠ ಶಾಲೆ ಹಾಗೂ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನಂ, ಮಂಗಳೂರು ಇವರು ಈ ಕಾರ್ಯಕ್ರಮದ ಆಯೋಜಕರಾಗಿರುತ್ತಾರೆ

LEAVE A REPLY

Please enter your comment!
Please enter your name here