ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ

0
632

ಮಾರ್ಚ್ 1- 5 ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

ಮೂಡುಬಿದಿರೆ: ದ.ಕ.ಜಿಲ್ಲೆ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಶ್ರೀನಿವಾಸಪುರ(ಗುಂಡ್ಯಡ್ಕ)ದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಮಂದಿರದಲ್ಲಿ ಶ್ರೀ ವಿಠೋಬ ರುಕುಮಾಯಿ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ಮಾರ್ಚ್1ರಿಂದ 5ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಪರಮಾನುಗ್ರಹದೊಂದಿಗೆ ಇಡೀ ಕಾರ್ಯಕ್ರಮಗಳು ನಡೆಯಲಿವೆ.

Advertisement


ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಮಂದಿರದಲ್ಲಿ ಮಾರ್ಚ್ 5 ಗುರುವಾರದಂದು 9ಗಂಟೆಗೆ ಶ್ರೀ ವಿಠೋಬ ರುಕುಮಾಯಿ ದೇವರ ಪುನಃಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕವನ್ನು ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ. 10ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀಗಳಿಂದ ಆಶೀರ್ವಚನ ಮಂತ್ರಾಕ್ಷತಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪದ್ಮಶ್ರೀ ಡಾ.ವಿ.ಆರ್. ಗೌರೀಶಂಕರ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮ ವಿವರ: ಫೆ.28 ಶುಕ್ರವಾರದಂದು ದೇಗುಲದಲ್ಲಿ ಪ್ರಾತಃ 8.30ರಿಂದ ದೇವತಾ ಪಾರ್ಥನೆ, ಗಣಪತಿ ಹವನ ನಡೆಯಲಿದೆ. ಪೂರ್ವಾಹ್ನ 10ಕ್ಕೆ ಮೂಡುಬಿದಿರೆ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ಫೆ.29 ಶನಿವಾರದಂದು ಪೂರ್ವಾಹ್ನ 10.30ಕ್ಕೆ ಶ್ರೀಸತ್ಯನಾರಾಯಣ ಪೂಜೆ ನಡೆಯಲಿದೆ. ಮಾರ್ಚ್1 ರವಿವಾರದಂದು ಪ್ರಾತಃ 8 ಗಂಟೆಯಿಂದ ದೇವತಾಪ್ರಾರ್ಥನೆ, ತೋರಣ ಮುಹೂರ್ತ, ಮಹಾಸಂಕಲ್ಪ, ಸ್ವಸ್ತಿ ವಾಚನ, ದೇವನಾಂದೀ, ಆಚಾರ್ಯಾದಿ ವರಣ, ಕಂಕಣ ಬಂಧನ, ಬ್ರಹ್ಮಕೂರ್ಚ ಹವನ, ಚತುವೇರ್ದ ಪಾರಾಯಣ ಆರಂಭ, ಅಥರ್ವಶೀರ್ಷ ಗಣಯಾಗ, ಭದ್ರದೀಪ ಸ್ಥಾಪನೆ , ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 4.30ರಿಂದ ವಿಶ್ವಕರ್ಮ, ಗೇಹ ಪ್ರತಿಗ್ರಹ, ಸಪ್ತಶುದ್ಧಿ, ಗೋಪೂಜೆ, ವಾಸ್ತುರಾಕ್ಷೋಘ್ನ ಹೋಮ, ಸುದರ್ಶನ ಹೋಮ, ವಾಸ್ತುಬಲಿ, ಪ್ರಾಸಾದ ಬಲಿ ನಡೆಯಲಿದೆ. ಮಾರ್ಚ್2 ಸೋಮವಾರ ಪ್ರಾತಃ 7ರಿಂದ ಗಣಪತಿ ಹೋಮ, ಪೂರ್ಣಗ್ರಹ ಶಾಂತಿ, ಮಹಾಮೃತ್ಯುಂಜಯ ಹೋಮ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಾಯಂಕಾಲ 4.30ರಿಂದ ಮಂಟಪ ಸಂಸ್ಕಾರ, ಅಗ್ನಿ ಜನನ, ಪಂಚಕುಂಡೀ ಹವನಾಂಗ ಅಗ್ನಿ ಪ್ರತಿಷ್ಠೆ, ಅಗ್ನಿ ಸಂಸ್ಕಾರ, ಅಘೋರಾಸ್ತ್ರ ಹೋಮ ನಡೆಯಲಿದೆ.


ಮಾರ್ಚ್3ರಂದು ಮಂಗಳವಾರ ಪ್ರಾತಃ 7 ಗಂಟೆಯಿಂದ ಗಣಪತಿ ಹೋಮ, ಆಶ್ಲೇಷಾಬಲಿ, ಸರ್ಪತ್ರಯ ಮಂತ್ರ ಹೋಮ, ಪಂಚಕುಂಡೀ ಹೋಮ, ಚಂಡಿಕಾ ಯಾಗ, ಕನ್ನಿಕಾ ಸುವಾಸಿನೀ ಆರಾಧನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಾಯಂಕಾಲ 4.30ರಿಂದ ದುರ್ಗಾನಮಸ್ಕಾರ ಪೂಜೆ, ಕಲಾಸಂಕೋಚ, ಬಿಂಬಶುದ್ಧಿ, ಬಿಂಬಶುದ್ಧಿ ಹೋಮ, ಜಲಾಧಿವಾಸ, ದೀಪದರ್ಶನ, ನೇತ್ರೋನ್ಮಿಲನ, ಶಯ್ಯಾ ಪೂಜೆ, ನ್ಯಾಸಾದಿಗಳು, ನಿದ್ರಾಕಲಶ, ಪ್ರತಿಷ್ಠಾಂಗ ಕಲಶ ಪೂಜೆ, ಅಧಿವಾಸ ಹೋಮ ನಡೆಯಲಿದೆ.


ಶೃಂಗೇರಿ ಶ್ರೀಗಳ ಆಗಮನ: ಮಾರ್ಚ್.4 ಬುಧವಾರದಂದು ಪ್ರಾತಃ 5ರಿಂದ 108 ಕಾಯಿ ಗಣಯಾಗ, ಪ್ರತಿಷ್ಠಾ ಹೋಮ, ದಾನಾದಿಗಳು, 7.45ರ ಮೀನ ಲಗ್ನ ಸುಮೂರ್ಹದಲ್ಲಿ ನೂತನ ಮಂದಿರದಲ್ಲಿ ದೇವರ ಬಿಂಬ ಪ್ರತಿಷ್ಠೆ, ಗೋದರ್ಶನ, ಮಂಗಳ ದ್ರವ್ಯ ದರ್ಶನ, ಕೂಷ್ಮಾಂಡ ಛೇದನ, ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ವಿಷ್ಣುಯಾಗ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5ರಿಂದ ಏಕಾಶೀತಿ ಕಲಶಪೂಜೆ, ಪರಿಕಲಶ ಸಹಿತ ಬ್ರಹ್ಮಕುಂಭ ಪೂಜೆ, ಅಧಿವಾಸ ಹೋಮ, ಬಲಿ ನಡೆಯಲಿದೆ. ಸಾಯಂಕಾಲ ಶ್ರೀಶ್ರೀ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಧೂಳೀ ಪಾದಪೂಜೆ ನಡೆಯಲಿದೆ. ರಾತ್ರಿ ಶ್ರೀಶ್ರೀಗಳಿಂದ ಶಾರದಾ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ. ಮಾರ್ಚ್5 ಗುರುವಾರದಂದು ಪ್ರಾತಃ 6 ಗಂಟೆಯಿಂದ ಗಣಪತಿ ಹೋಮ, ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಹವನ, 9ಕ್ಕೆ ಸಲುವ ಶುಭಲಗ್ನದಲ್ಲಿ ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಅಮೃತಹಸ್ತದಿಂದ ಶ್ರೀ ವಿಠೋಬ ರುಕುಮಾಯಿ ದೇವರಿಗೆ ಬ್ರಹ್ಮ ಕುಂಭಾಭಿಷೇಕ, ಶಿಖರ ಕಲಶಾಭಿಷೇಕ, ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಮಹಾಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ ನಡೆಯಲಿದೆ.


ಮಾರ್ಚ್ 5ರಂದು ಸಾಯಂಕಾಲ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಶ್ರೀಕೃಷ್ಣ ಭಟ್ ತಿರುಮಲ ವಹಿಸುವರು. ಅತಿಥಿಗಳಾಗಿ ಗಿರಿಧರ್ ಭಟ್ ಪರಾಡ್ಕರ್, ಪ್ರಭಾಕರ ಪರಾಡ್ಕರ್, ಸಂಸದ ನಳೀನ್ ಕುಮಾರ್ ಕಟೀಲು, ಮಾಜಿ ಸಚಿವ ಅಭಯಚಂದ್ರ ಜೈನ್, ಚಂದ್ರಶೇಖರ್ ಭಟ್ ಅಂಬೇಕರ್, ರೆ.ಫಾ.ಐವನ್ ಮೈಕಲ್ ರೊಡ್ರಿಗಸ್, ಕೇಶವ ಭಟ್ ಪರಾಡ್ಕರ್, ವೇ.ಮೂ. ಅರುಣ್ ಭಟ್ ಪರಾಡ್ಕರ್, ವೇ.ಮೂ.ಅರುಣ್ ಭಟ್ ಎಣ್ಣೆಹೊಳೆ, ವೇ.ಮೂ. ಸುಬ್ರಹ್ಮಣ್ಯ ಭಟ್ ಪರಾಡ್ಕರ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಪ್ರತಿದಿನ ಸಾಯಂಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಭಟ್ ಅಂಬೇಕರ್ , ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ವೇದಮೂರ್ತಿ ಗಿರಿಧರ್ ಭಟ್ ಪರಾಡ್ಕರ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಎನ್. ಪರಾಡ್ಕರ್ , ನ್ಯಾಯವಾದಿ ಕೆ.ಆರ್.ಪಂಡಿತ್ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಪರಾಡ್ಕರ್, ಕರಾಡ ಬ್ರಾಹ್ಮಣ ಸುಧಾರಕ ಸಂಘ ಗುಂಡ್ಯಡ್ಕ ಅಧ್ಯಕ್ಷ ಗಣಪತಿ ದೇವುಜಿ ಉಪಸ್ಥಿತರಿದ್ದರು.


ಸೂಚನೆ: ಫೆ.4 ಬುಧವಾರದಂದು ರಾತ್ರಿ 8.30ರಿಂದ ಹಾಗೂ ಫೆ.5 ಗುರುವಾರ ಪ್ರಾತಃ 10ರಿಂದ ಶೃಂಗೇರಿ ಜಗದ್ಗುರುಗಳ ಪಾದಪೂಜೆಗೆ ಅವಕಾಶವಿರುತ್ತದೆ. ಭಕ್ತಾಧಿಗಳು ಇದರ ಪ್ರಯೋಜನ ಪಡೆಯುವಂತೆ ಸಮಿತಿ ವಿನಂತಿಸಿದೆ.

LEAVE A REPLY

Please enter your comment!
Please enter your name here