ಶ್ರೀ ಭಾರತೀ ವಿದ್ಯಾಪೀಠದಲ್ಲಿ ವ್ಯೋಮ ವಿಜ್ಞಾನಿ

0
546

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಶ್ರೀಭಾರತೀ ವಿದ್ಯಾಪೀಠ ಬಬದಿಯಡ್ಕ ಹಾಗೂ ಶ್ರೀಭಾರತೀ ವಿದ್ಯಾಪೀಠ ಮುಜುಂಗಾವು ಇದರ ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳಿಗೆ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕಾರ್ಯಚಟುವಟಿಕೆಗಳನ್ನು ತಿಳಿದುಕೊಳ್ಳುವ ಅಪೂರ್ವ ಅವಕಾಶ ಲಭಿಸಿತು. ಇಸ್ರೋದ ನಿವೃತ್ತ ವಿಜ್ಞಾನಿ ಪ್ರೊ. ಪಿ.ಜೆ. ಭಟ್ `ಬಾಹ್ಯಾಕಾಶದಲ್ಲಿ ಭಾರತದ ಸಾಧನೆ’ ಎಂಬ ವಿಷಯದ ಕುರಿತು ಗುರುವಾರ ತಮ್ಮ ಸೆಮಿನಾರ್ ಮಂಡನೆ ಮೂಲಕ ಮಕ್ಕಳಿಗೆ ಅನೇಕ ಮಾಹಿತಿಗಳನ್ನು ಒದಗಿಸಿದರು.
 
 
 
ಭಾರತದಿಂದ ಕಳುಹಿಸಲ್ಪಟ್ಟ ಆರಂಭಿಕ ಉಪಗ್ರಹಗಳ ಕುರಿತು ಮಾಹಿತಿ ನೀಡಿದ ತಜ್ಞರು ಬಾಹ್ಯಾಕಾಶ ವಿಜ್ಞಾನಿ ಡಾ| ವಿಕ್ರಂಸಾರಾಭಾಯಿ ಅವರ ಕೊಡುಗೆಯನ್ನು ಸ್ಮರಿಸಿದರು. ಇಸ್ರೋ ಬೆಳೆದು ನಿಂತ ರೀತಿಯನ್ನು ವಿವರಿಸುತ್ತಾ ಈ ವರೆಗೆ ಎಷ್ಟು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ ಎಂಬ ಮಕ್ಕಳಲ್ಲಿ ಅಡಗಿದ ಕುತೂಹಲವನ್ನು ತಣಿಸಿದರು. ಉಡ್ಡಯನ ವಾಹನದ ವಿವರವಾದ ಮಾಹಿತಿಯನ್ನು ನೀಡಿದರು. ಬೆಳಗಿನ ಅವಧಿಯಲ್ಲಿ ಒಟ್ಟು ಎರಡೂವರೆ ಎರಡೂವರೆ ಗಂಟೆಗಳ ಕಾಲ ಮಾತನಾಡಿದ ಅವರು ಕೃತಕ ಉಪಗ್ರಹಗಳು ಪ್ರಾರಂಭಿಕ ಹಂತದಿಂದ ಈ ವರೆಗೆ ಯಾವ ರೀತಿ ಅಭಿವೃದ್ಧಿಗೊಳಿಸಲ್ಪಟ್ಟಿದೆ, ದೂರಸಂವೇದಿ ಉಪಗ್ರಹಗಳು ಯಾವ ರೀತಿ ನಮ್ಮ ದೇಶದ ಅಭಿವೃದ್ಧಿಯಲ್ಲಿ ಪಾತ್ರವಹಿಸಿದೆ ಎಂಬುದನ್ನು ಮಕ್ಕಳು ಅರ್ಥೈಸುವ ರೀತಿಯಲ್ಲಿ ಮನದಟ್ಟು ಮಾಡಿಕೊಟ್ಟರು.
 
 
ಮಕ್ಕಳು ತಮ್ಮ ಅನೇಕ ಸಂಶಯಗಳಿಗೆ ಸೂಕ್ತ ಉತ್ತರವನ್ನು ಪಡೆದುಕೊಂಡರು. ಕೊನೆಯ ಅವಧಿಯಲ್ಲಿ ಆರು ಸುತ್ತುಗಳ ಮೂಲಕ ಐದು ತಂಡಗಳಲ್ಲಿ ಕ್ವಿಜ್ ನಡೆಸಲಾಯಿತು. ಪ್ರಥಮ ದ್ವತೀಯ ಹಾಗೂ ತೃತೀಯ ತಂಡಗಳಿಗೆ ನಗದು ಬಹುಮಾನವನ್ನು ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು. ಈ ಉಪಯುಕ್ತ ಕಾರ್ಯಕ್ರಮವನ್ನು ಶಾಲಾ ಸೈನ್ಸ್ ಕ್ಲಬ್ ಆಯೋಜಿಸಿತ್ತು. ಮಕ್ಕಳಿಂದ ಸಂಗ್ರಹಿಸಲ್ಪಟ್ಟ ಲೇಖನಗಳು ಹಾಗೂ ಪತ್ರಿಕಾ ವರದಿಗಳನ್ನು ಭಿತ್ತಿಪತ್ರದ ಮೂಲಕ ಪ್ರದರ್ಶಿಸಲಾಯಿತು.

LEAVE A REPLY

Please enter your comment!
Please enter your name here