'ಶ್ರೀ ಪಡ್ರೆ'ಯವರಿಗೆ 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ' ಪ್ರಶಸ್ತಿ

0
152

 
ವರದಿ: ನಾ ಕಾರಂತ್
ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ‘ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಿರುವನಂತಪುರದ ಜಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಗಳು ಪ್ರಶಸ್ತಿಯ ಆಯೋಜಕರು.
 
ಶ್ರೀ ಪಡ್ರೆಯವರು ಹಲಸಿನ ಆಂದೋಳನಕ್ಕೆ ಶ್ರೀಕಾರ ಬರೆದವರು. 2009ರಂದೀಚೆಗೆ ‘ಅಡಿಕೆ ಪತ್ರಿಕೆ’ಯಲ್ಲಿ ದೇಶ, ವಿದೇಶದ ಹಲಸಿನ ಆಗು ಹೋಗುಗಳ ತಾಜಾ ಲೇಖನಗಳು ಪ್ರಕಟ. ವಿಶ್ವಾದ್ಯಂತ ಹಲಸು ಪ್ರೇಮಿಗಳೊಂದಿಗೆ ನಿರಂತರ ಸಂಪರ್ಕ, ಜಾಲತಾಣ ಗುಂಪುಗಳ ರೂಪೀಕರಣ. ಹಲಸು ಮೇಳಗಳಲ್ಲಿ ‘ಹಲಸಿನ ವಿಶ್ವದರ್ಶನ’ ಪ್ರಸ್ತುತಿ. ಹಲಸು ಮೇಳಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ.
 
 
ನೀರಿಂಗಿಸುವ ಯಶೋಗಾಥೆಯನ್ನು ಜನಮನದಲ್ಲಿ ಬಿತ್ತಿದವರು.  ಈಗ ಶ್ರೀ ಪಡ್ರೆಯವರಿಗೆ ‘ಹಲಸಿನ ಆಂತಾರಾಷ್ಟ್ರೀಯ ರಾಯಭಾರಿ’ ಪ್ರಶಸ್ತಿ. ಬುಧವಾರ ಸಂಜೆ ತಿರುವನಂತಪುರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ.

LEAVE A REPLY

Please enter your comment!
Please enter your name here