ಶ್ರೀರಾಮಚಂದ್ರಾಪುರಮಠದ ಆಡಳಿತಕ್ಕೆ ಐ.ಎಸ್.ಓ ಪ್ರಮಾಣಪತ್ರ

0
164

ನಮ್ಮ ಪ್ರತಿನಿಧಿ ವರದಿ
ಹೊಸನಗರ ಶ್ರೀರಾಮಚಂದ್ರಾಪುರಮಠದ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸುವ ಐ.ಎಸ್.ಓ ಪ್ರಮಾಣಪತ್ರ ದೊರಕಿದೆ.
 
 
ಶ್ರೀರಾಮಚಂದ್ರಾಪುರಮಠವು ಶ್ರೀಶಂಕರಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟ ಏಕೈಕ ಅವಿಚ್ಛಿನ್ನ ಪರಂಪರೆಯ ಪಾವಿತ್ರ್ಯತೆ ಹಾಗೂ ವೈಶಿಷ್ಟ್ಯವನ್ನು ಹೊಂದಿದ್ದು, ಪರಂಪರಾಗತ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಜೊತೆಜೊತೆಗೆ ದಕ್ಷ ಆಡಳಿತ ಹಾಗೂ ಹಣಕಾಸಿನ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಇಟ್ಟಿರುವ ಹೆಗ್ಗೆಳಿಕೆಯನ್ನೂ ಹೊಂದಿದೆ. ಹೊಸನಗರ ಶ್ರೀರಾಮಚಂದ್ರಾಪುರಮಠದ ಮಾದರಿ ಆಡಳಿತವನ್ನು ಈ ಐ.ಎಸ್.ಒ ಪ್ರಮಾಣಪತ್ರವು ಸ್ಥಿರೀಕರಿಸಿದೆ.
 
 
ಪ್ರಮಾಣ ಪತ್ರ ಸಿಕ್ಕಿದ್ದು ಹೀಗೆ..
ಹೊಸನಗರ ಶ್ರೀರಾಮಚಂದ್ರಾಪುರಮಠದ ಆಡಳಿತ ನಿರ್ವಹಣೆ, ಪೂಜಾ ವ್ಯವಸ್ಥೆ, ಸ್ವಚ್ಛತೆ, ಲೆಕ್ಕಪತ್ರ ನಿರ್ವಹಣೆ, ಸುರಕ್ಷೆ, ವಸತಿ ವ್ಯವಸ್ಥೆ ಹಾಗೂ ಪ್ರಸಾದ ಭೋಜನ ವ್ಯವಸ್ಥೆಗಳನ್ನು ಸಮಗ್ರವಾಗಿ ಅಭ್ಯಸಿಸಿ, ತಜ್ಞರ ಪರಿಶೋಧನೆಗೆ ಒಳಪಡಿಸಲಾಗಿತ್ತು. ಎಲ್ಲ ವ್ಯವಸ್ಥೆಗಳು ಮತ್ತು ಆಡಳಿತ ನಿರ್ವಹಣೆಯು, ISO 9001:2008 ಅರ್ಹತಾ ನಿಯಮಗಳಿಗೆ ಅನುಗುಣವಾಗಿರುವುದು ಖಾತರಿಯಾದ ಬಳಿಕ ಶ್ರೀಮಠಕ್ಕೆ ಐ.ಎಸ್.ಓ ಪ್ರಮಾಣಪತ್ರ ನೀಡಲಾಗಿದೆ.
 
 
ಉತ್ತಮ ಆಡಳಿತದ ಸ್ಥಿರೀಕರಣ:
ಶ್ರೀರಾಮಚಂದ್ರಾಪುರಮಠದ ಕುರಿತಾಗಿ ನಾಡಿನಾದ್ಯಂತ ಸದಭಿಪ್ರಾಯವಿದ್ದು, ಈಗ ದೊರೆತಿರುವ ಐ.ಎಸ್.ಒ ಪ್ರಮಾಣಪತ್ರವು ಶ್ರೀಮಠದ ಸುವ್ಯವಸ್ಥಿತ ಮಾದರಿ ಆಡಳಿತಕ್ಕೆ ಕೈಗನ್ನಡಿ ಹಾಗೂ ಪಾರದರ್ಶಕ ನಿರ್ವಹಣೆಗೆ ಸಾಕ್ಷಿಯಾಗಿದೆ.
 
 
ISO 9001:2008 ಬಗ್ಗೆ ಒಂದಿಷ್ಟು
* ಸಂಸ್ಥೆ ಅಥವಾ ವ್ಯಕ್ತಿಗಳು ತಮ್ಮ ಹಣಕಾಸು ನಿರ್ವಹಣೆ, ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ಸುಸೂತ್ರವಾಗಿ ಒಂದು ಚೌಕಟ್ಟಿನೊಳಗೆ ರೂಢಿಸಿಕೊಂಡಿರುವುದನ್ನು ಪ್ರಮಾಣೀಕರಿಸುವ ಪ್ರಮಾಣಪತ್ರ.
* ನಿತ್ಯ ವ್ಯವಹಾರಗಳನ್ನು ನಿಗದಿತ ಗುಣಮಟ್ಟದಲ್ಲಿ ಒಂದು ಚೌಕಟ್ಟಿನೊಳಗೆ ನಿರ್ವಹಿಸುವುದನ್ನು ಖಾತರಿ ಪಡಿಸುವುದು ಮತ್ತು ಅದನ್ನು ಎಲ್ಲ ರೀತಿಯಲ್ಲೂ ಸುಧಾರಿಸುವ ಕೆಲಸವನ್ನು ಹಂತ ಹಂತವಾಗಿ ನಿರಂತರವಾಗಿ ಮಾಡುವುದು.
* ಪ್ರಮಾಣೀಕರಿಸುವ ಕೆಲಸವನ್ನು ತೃತೀಯ ಸಂಸ್ಥೆಯೊಂದು ಮಾಡುವುದಾಗಿದ್ದು, ಅದು ಹಣಕಾಸು ನಿರ್ವಹಣೆ, ಆಡಳಿತ ಹಾಗೂ ಒಟ್ಟಾರೆ ವ್ಯವಸ್ಥೆಯ ಗುಣಮಟ್ಟದ ಮೌಲ್ಯಮಾಪನ ಮಾಡಿ ಬಳಿಕವಷ್ಟೇ ಪ್ರಮಾಣಪತ್ರ ಒದಗಿಸಲು ಶಿಫಾರಸು ಮಾಡುತ್ತದೆ

LEAVE A REPLY

Please enter your comment!
Please enter your name here