ವಾರ್ತೆ

ಶ್ರೀಮಾತಾ ಭಜನಾ ಸಂಘಕ್ಕೆ ತಬಲಾ ಕೊಡುಗೆ

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಗ್ರಾಮೋತ್ಥಾನ ಸೇವಾಸಮಿತಿ ಹಾಗೂ ರಾಮಾಯಣ ಮಾಸಾಚರಣಾ ಸಮಿತಿಯ ವತಿಯಿಂದ ಬದಿಯಡ್ಕ ನವಜೀವನ ಹೈಸ್ಕೂಲು ರಸ್ತೆಯ ರಾಮಲೀಲಾ ಕಟ್ಟಡದಲ್ಲಿ ನಡೆಯುತ್ತಿರುವ ರಾಮಾಯಣ ಮಾಸಾಚರಣಾ ಕಾರ್ಯಕ್ರಮದಲ್ಲಿ ಬದಿಯಡ್ಕ ಶ್ರೀಮಾತಾ ಹವ್ಯಕ ಭಜನಾ ಸಂಘದವರಿಂದ ಭಜನೆ ನಡೆಯಿತು.
 
badiyadka_srimata sangha
 
ತಬಲಾದಲ್ಲಿ ಶ್ರೀಧರ ರೈ ಕಾಸರಗೋಡು, ಹಾರ್ಮೋನಿಯಂನಲ್ಲಿ ಪ್ರಕಾಶ ಆಚಾರ್ಯ ಕುಂಟಾರು ಸಹಕರಿಸಿದರು. ಈ ಸಂದರ್ಭಲ್ಲಿ ಮುಂಬಯಿಯ ಡಿಪಾರ್ಟ್ ಮೆಂಟ್ ಆಫ್ ಅಟೋಮಿಕ್ ಎನರ್ಜಿಯ ನಿವೃತ್ತ ಇಂಜಿನಿಯರ್ ಬದಿಯಡ್ಕ ದಂಬೆಮೂಲೆ ನಿವಾಸಿ ಡಾ| ಶ್ರೀಕೃಷ್ಣ ಭಟ್ ಮನೆಯವರು ಶ್ರೀಮಾತಾ ಭಜನಾ ಸಂಘಕ್ಕೆ ತಬಲಾವನ್ನು ತಮ್ಮ ಕೊಡುಗೆಯಾಗಿ ನೀಡಿದರು. ಕುಸುಮ ಪೆರ್ಮುಖ ಅವರು ಪಡೆದುಕೊಂಡರು. ನಾರಾಯಣ ಭಟ್ ದಂಬೆಮೂಲೆ, ಮೈರ್ಕಳ ನಾರಾಯಣ ಭಟ್, ಪ್ರಭಾವತಿ ಕೆದಿಲ್ಲಾಯ ಮೊದಲಾದವರು ಉಪಸ್ಥಿತರಿದ್ದರು

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here