ಶ್ರೀಮಠದಿಂದ ಸಿಎಂಗೆ ಬಹಿರಂಗ ಪತ್ರ

0
391

ನಮ್ಮ ಪ್ರತಿನಿಧಿ ವರದಿ
ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮತ್ತು ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಮಠದಿಂದ ಮರಳಿ ಪಡೆಯುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಯನ್ನು ರಾಮಚಂದ್ರಾಪುರ ಮಠ ಸ್ವಾಗತಿಸಿದೆ. ಆದರೆ, ಈ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗಳು ಆರಂಭಿಸಿ ರುವ ಪ್ರಕ್ರಿಯೆ ಮತ್ತು ಅಡ್ವೋಕೇಟ್‌ ಜನರಲ್‌ ಹೈಕೋರ್ಟ್‌ಗೆ ನೀಡಿರುವ ಹೇಳಿಕೆ ಸರಕಾರದ ಗಮನಕ್ಕೆ ತಾರದೆ ನಡೆಸಿರುವ ಚಟುವಟಿಕೆಗಳೇ ಎಂದು ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
mata_vaarte
 
ಅಲ್ಲದೆ, ಈ ಎರಡೂ ಪ್ರಕರಣಗಳನ್ನು ಮುಕ್ತಾಯ ಗೊಳಿಸಲಾಗಿದೆ ಎಂಬ ಹಿಂಬರದ ನಿರೀಕ್ಷೆ ಯಲ್ಲಿ ಮಠ ಇರುವುದಾಗಿ ಹೇಳಿದ್ದಾರೆ. ರಾಮಚಂದ್ರಾಪುರ ಮಠಕ್ಕೆ ಉತ್ತರಾಧಿಕಾರಿ ನೇಮಕ ಪ್ರಸ್ತಾವ ಮತ್ತು ಮಠಕ್ಕೆ ಹಸ್ತಾಂತರಿಸಿರುವ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ವಾಪಸ್‌ ಪಡೆಯುವ ಕುರಿತು ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಈ ಎರಡೂ ಪ್ರಸ್ತಾವನೆಗಳು ಸರಕಾರದ ಮುಂದಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಮಠವು ಸರಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರಿಂದ ಇನ್ನಷ್ಟು ಸ್ಪಷ್ಟೀಕರಣ ಬಯಸಿದೆ.
 
ಬಹಿರಂಗ ಪತ್ರದಲ್ಲಿ ಈ ವಿಚಾರಗಳಿವೆ…
* ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ವಿಚಾರದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿಂದ ‍ಶ್ರೀಮಠಕ್ಕೆ ಐದು ಬಾರಿ ನೋಟಿಸ್‌ಗಳು ಬಂದಿವೆ.
* ಎರಡು ಬಾರಿ ಮುಖ್ಯ ಕಾರ್ಯದರ್ಶಿಗಳ ಸಮ್ಮುಖ ದಲ್ಲಿ ವಿಚಾರಣೆಗಳೂ ನಡೆದಿವೆ.
* ಈ ಪ್ರಕರಣದಲ್ಲಿ ಮಠಕ್ಕೆ ಪ್ರತಿಕೂಲವಾದ ಪ್ರಾಥಮಿಕ ಆದೇಶವೂ ಹೊರಬಿದ್ದಿದೆ.
* ಸೆ. 30ಕ್ಕೆ ನಿವೃತ್ತರಾಗಲಿದ್ದ ಮುಖ್ಯ ಕಾರ್ಯದರ್ಶಿ ಸೆ. 28ಕ್ಕೆ ವಿಚಾರಣೆ ನಿಗದಿಪಡಿಸಿ ಸೆ.26ಕ್ಕೆ ನೋಟಿಸ್‌ ನೀಡಿದರೆ ಭಕ್ತರಿಗೆ ಶಂಕೆ ಬಾರದೇ ಇರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here