ಶ್ರೀಮಂತ ಹುಡುಗ ವಿರಾಟ್ ಗೆ ಪಾಠ ಕಲಿಸಲು ಬರುತ್ತಿದ್ದಾಳೆ 'ನಿಹಾರಿಕಾ'

0
189

 
ಸಿನಿ ಪ್ರತಿನಿಧಿ ವರದಿ
ಈಗಾಗಲೇ ಹಲವು ರೀತಿಯ ಕಥೆಯುಳ್ಳ ಧಾರವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ಮತ್ತೊಂದು ವಿಭಿನ್ನ ರೀತಿಯ ಧಾರವಾಹಿಯನ್ನು ಕನ್ನಡ ವೀಕ್ಷಕರಿಗೆ ನೀಡಲು ರೆಡಿಯಾಗಿದೆ.
 
 
ವಿಭಿನ್ನ ರೀತಿಯ ಕನ್ನಡ ಧಾರಾವಾಹಿಗಳ ಸಾಲಿನಲ್ಲಿ ‘ನಿಹಾರಿಕಾ’ ಕೂಡ ಸೇರಲಿದೆ. ಈ ಧಾರವಾಹಿಯಲ್ಲಿ ಬೇರೆ ಧಾರವಾಹಿಯಂತೆ ಅತ್ತೆ-ಸೊಸೆ ಜಗಳ, ಅಣ್ಣ-ತಮ್ಮ, ಅಕ್ಕ-ತಂಗಿಯ ಕಿತ್ತಾಟ, ಹುಡುಗ-ಹುಡುಗಿಯ ಪ್ರೀತಿ-ಪ್ರೇಮ-ಪ್ರಣಯದ ಮಾಮೂಲಿ ಸೀರಿಯಲ್ ನಂತೆ ಅಲ್ಲವಂತೆ.
 
 
 
ಇದರಲ್ಲಿ ಸುಂದರಿಯೊಬ್ಬಳು ಶ್ರೀಮಂತ ಹುಡುಗ ಮಾಡಿದ ಕಠಿಣ ತಪ್ಪಿಗೆ ಸೇಡು ತೀರಿಸಿಕೊಳ್ಳುತ್ತಾಳೆ. ಶ್ರೀಮಂತ ಹುಡುಗ ವಿರಾಟ್‍ನ ದಾಹಕ್ಕೆ ಒಂದು ಕುಟುಂಬ ಸರ್ವನಾಶವಾಗಿರುತ್ತದೆ. ಆ ಸೇಡನ್ನು ತೀರಿಸಿಕೊಳ್ಳಲು ಬರುವ ಹುಡುಗಿ ನಿಹಾರಿಕಾ. ನಿಹಾರಿಕಾ ಎಂದರೆ ಜಗತ್ತಿನ ಅತ್ಯಂತ ಸುಂದರಿ. ಬುದ್ಧಿವಂತಿಕೆಯಿಂದ ದುಷ್ಟರನ್ನು ಹಿಮ್ಮೆಟ್ಟಿಸುತ್ತಾಳೆ. ತನ್ನ ಸೌಂದರ್ಯದಿಂದ ವಿರಾಟ್‍ನನ್ನು ಸೆಳೆದು ಅವನು ಮಾಡಿದ ಪಾಪಕ್ಕೆ ಪಾಠ ಕಲಿಸುತ್ತಾಳೆ.
 
 
ಒಂದೆಡೆ ಮಗನ ಮಾಡುತ್ತಿರುವ ತಪ್ಪೆಲ್ಲವನ್ನು ಮುಚ್ಚಿಹಾಕುವ ಅಮ್ಮ ಸಾಕ್ಷಿ, ಅವಳ ತಾಳಕ್ಕೆ ತಕ್ಕಂತೆ ಕುಣಿಯುವ ಗಂಡ ರಾಜನಾಥ್. ಹಣದಿಂದ ಸತ್ಯವನ್ನೂ ಕೊಂಡುಕೊಳ್ಳಬಹುದು ಎಂದುಕೊಂಡ ಶ್ರೀಮಂತ `ಯಾಜಿ’ ಮನೆತನಕ್ಕೆ ಒಬ್ಬ ಸಾಮಾನ್ಯ ಹುಡುಗಿ ನಿಹಾರಿಕಾ ಹೇಗೆ ಬುದ್ಧಿ ಕಲಿಸುತ್ತಾಳೆ, ಪ್ರತಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದಿರಿಸುತ್ತಾಳೆ ಎನ್ನುವ ಕಥೆ ಈ ಸೀರಿಯಲ್ ನಲ್ಲಿದೆ.
 
 
 
ಈಗಾಗಲೇ ಹಿರಿತೆರೆಯಲ್ಲಿ ಹೆಸರು ಮಾಡಿರುವ ತೇಜಸ್ವಿನಿ ಪ್ರಕಾಶ್ ಮೊದಲ ಬಾರಿಗೆ ನಿಹಾರಿಕಾ ಮೂಲಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರುತೆರೆಯ ಹೆಸರಾಂತ ನಟ ವಿರಾಟ್, ದೀಪಕ್ ಶೆಟ್ಟಿ, ಶಾಂತಲಾ ಕಾಮತ್, ಪ್ರದೀಪ್ ಚಂದ್ರ ಹೀಗೆ ನುರಿತ ಕಲಾವಿದರ ದಂಡೇ `ನಿಹಾರಿಕಾ’ದಲ್ಲಿದೆ.
 
 
ನಿರ್ದೇಶಕ ವಿನು ಬಳಂಜ ಈ ಧಾರಾವಾಹಿಯ ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಆರ್ ದೀಪಕ್ ಗೌಡ `ಲಿವಿಂಗ್ ರೂಂ’ ಪ್ರೊಡಕ್ಷನ್ ಅಡಿಯಲ್ಲಿ ‘ನಿಹಾರಿಕಾ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ಬರಹಗಾರ ಜೋಗಿ ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದಾರೆ. ಇದಕ್ಕೆ ರವಿ ಅವರ ಛಾಯಾಗ್ರಹಣ, ಮನು ಅವರ ಸಂಕಲನವಿದೆ.
`ನಿಹಾರಿಕಾ’ ಧಾರಾವಾಹಿ ಇದೇ ಡಿಸೆಂಬರ್ 12 ರಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿ ಮೂಲಕ ನಿಮ್ಮ ಮನೆಗಳಲ್ಲಿ ಮೂಡಿಬರಲಿದೆ.

LEAVE A REPLY

Please enter your comment!
Please enter your name here