ಶ್ರೀನಿವಾಸ್ ಹತ್ಯೆಗೆ ಕ್ಷಮೆಯಾಚಿಸಿದ ಟ್ರಂಪ್

0
598

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಅಮೆರಿಕಾ ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನ್ನ ಮೊದಲ ಭಾಷಣ ಮಾಡಿದ್ದಾರೆ. ಈ ವೇಳೆ ಟ್ರಂಪ್ ಕನ್ಸಾಸ್ ನಲ್ಲಿ ನಡೆದ ಶ್ರೀನಿವಾಸ್ ಹತ್ಯೆ ಪ್ರಕರಣ ಬಗ್ಗೆ ಪ್ರಸ್ತಾಪಿಸಿದ್ದಾರೆ. ಶ್ರೀನಿವಾಸ್ ಹತ್ಯೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಕ್ಷಮೆಯಾಚಿಸಿದ್ದಾರೆ.
 
 
ಜನಾಂಗೀಯ ಆಧಾರದಲ್ಲಿ ದ್ವೇಷ ಸಾಧನೆಗೆ ತೀವ್ರ ಖಂಡಿಸಿದ್ದಾರೆ. ಅಮೆರಿಕಾದ ಕನ್ಸಾಸ್ ನಲ್ಲಿ ಭಾರತೀಯ ಕೆ.ಶ್ರೀನಿವಾಸ್ ಹತ್ಯೆಯಾಗಿತ್ತು. ದುಷ್ಕರ್ಮಿಗಳು ಶ್ರೀನಿವಾಸ್ ನನ್ನು ಗುಂಡುಹಾರಿಸಿ ಹತ್ಯೆಗೈದಿದ್ದರು. ನಮ್ಮ ದೇಶ ಬಿಟ್ಟು ತೊಲಗು ಎಂದು ಹೇಳಿ ಹತ್ಯೆ ಮಾಡಲಾಗಿತ್ತು.
 
 
ಇಸ್ಲಾಮಿಕ್ ಉಗ್ರವಾದದ ವಿರುದ್ಧ ಹೋರಾಟ ಮುಂದುವರಿದಿದೆ ಎಂದು ಹೇಳಿದ ಟ್ರಂಪ್ ವೀಸಾ ನಿರ್ಬಂಧ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ISIS ನಿರ್ನಾಮಕ್ಕೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಅಮೆರಿಕಾದ ಭದ್ರತೆಗೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾದಕದ್ರವ್ಯ ಜಾಲವನ್ನು ಪೂರ್ಣವಾಗಿ ಮಟ್ಟಹಾಕಲಾಗುವುದು. ಜತೆಗೆ ಚುನಾವಣೆಗೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here