ಶ್ರೀನಿವಾಸ್ ಸ್ಮಾರಕ ಚಿನ್ನ ಬೆಳ್ಳಿ ಪದಕ ವಿತರಣೆ

0
238

 
ವರದಿ-ಚಿತ್ರ: ಸಂತೋಷ್ ಬಜಾಲ್
DYFI ನಾಯಕ ಶ್ರೀನಿವಾಸ್ ಬಜಾಲ್ ರವರ 14 ನೇ ವರ್ಷದ ಹುತಾತ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಬಜಾಲ್ ಸಂತ ಜೋಸೆಫರ ಫ್ರೌಡಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶ್ರೀನಿವಾಸ್ ಸ್ಮಾರಕ ಚಿನ್ನ ಹಾಗೂ ಬೆಳ್ಳಿ ಪದಕ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಲಾಯಿತು.
 
 
ಶ್ರೀನಿವಾಸ್ ಸ್ಮಾರಕ ಚಿನ್ನದ ಪದಕವನ್ನು ಕಿಟೆಲ್ ಮೊಮೋರಿಯಲ್ ಫ್ರೌಡಶಾಲೆ ಗೋರಿಗುಡ್ಡೆ ವಿದ್ಯಾರ್ಥಿ ಧೀಷ್ಣು ಇವರು ಪಡೆದಿರುತ್ತಾರೆ. ಶ್ರೀನಿವಾಸ್ ಸ್ಮಾರಕ ಬೆಳ್ಳಿಪದಕವನ್ನು ಸಂತ ಜೋಸೇಫರ ಫ್ರೌಡಶಾಲೆ ಬಜಾಲ್ ಇಲ್ಲಿನ ವಿದ್ಯಾರ್ಥಿ ತಿಲಕರಾಜ್ ಶೆಟ್ಟಿ ಹಾಗೂ ಆದರ್ಶ ಭಾರತಿ ಫ್ರೌಡಶಾಲೆ ಕರ್ಮಾರಿನ ವಿದ್ಯಾರ್ಥಿನಿ ರಕ್ಷಿತಾ.ಕೆ ಇವರುಗಳು ಪಡೆದಿರುತ್ತಾರೆ.
 
 
ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ವಿತರಣೆಯನ್ನು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರಾದ ಡಾ|| ಎನ್. ಉದಯಕಿರಣ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ನೆರವೇರಿಸಿದರು ಈ ವೇಳೆ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸುರೇಶ ಬಜಾಲ್, ರಿತೇಶ್, ಅಶೋಕ್ ಸಾಲ್ಯಾನ್ ಮತ್ತಿತ್ತರು ವೇದಿಕೆಯಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here