ಶ್ರೀಗೋಪಾಲಕೃಷ್ಣ ದೇವರ ಬಿಂಬ ಪ್ರತಿಷ್ಠೆ

0
353

ಮೂಡಬಿದಿರೆ ಪ್ರತಿನಿಧಿ ವರದಿ
ಮೂಡುವೇಣುಪುರದಲ್ಲಿ ಜೀರ್ಣೋದ್ಧಾರಗೊಂಡು ನವೀಕರಣೆಗೊಳಿಸಿದ ಕ್ಷೇತ್ರದಲ್ಲಿ ಎಡಪದವು ಬ್ರಹ್ಮಶ್ರೀ ಕೆ.ವೆಂಕಟೇಶ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್ ಇವರ ಸಹಭಾಗಿತ್ವದಲ್ಲಿ ಭಾನುವಾರ ಬೆಳಗ್ಗೆ 7.40ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀಗೋಪಾಲಕೃಷ್ಣ ದೇವರ ಬಿಂಬ ಪ್ರತಿಷ್ಠೆ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಿತು.
 
mood krishna
 
ಅಷ್ಟಬಂಧ ಲೇಪನ, ತತ್ತ್ವ ಹೋಮ, ಪರಿವಾರ ಪ್ರತಿಷ್ಠಾ ಕಾರ್ಯಗಳು ವಿಧಿವತ್ತಾಗಿ ನಡೆದವು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್, ಅನುವಂಶೀಯ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಅರ್ಚಕ ರಾಘವೇಂದ್ರ ಭಟ್, ಶಿವಾನಂದ ಪ್ರಭು, ಶ್ರೀವೆಂಕಟ್ರಮಣ ಮತ್ತು ಶ್ರೀ ಹನುಮಂತ ದೇವಸ್ಥಾನ ಮೂಡಬಿದಿರೆ ಇದರ ಆಡಳಿತ ಮೊಕ್ತೇಸರ ಜಿ ಉಮೇಶ್ ಪೈ ಸೇರಿದಂತೆ ಊರ ಸಮಸ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here