ಶ್ರೀಗಳು ಪೂಜೆ ಮಾಡದಂತೆ ತಡೆದದ್ದು ತಪ್ಪು- ಹೈ ಆದೇಶ

0
221

ನಮ್ಮ ಪ್ರತಿನಿಧಿ ವರದಿ
ಮುಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ಮೂಕಾಂಬಿಕೆಯ ಜನ್ಮಾಷ್ಟಮಿ ಯ೦ದು ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಪೂಜೆ ಮಾಡದಂತೆ ತಡೆ ಮಾಡಿದ್ದು ಧಾರ್ಮಿಕ ದತ್ತಿ ಇಲಾಖೆಯ ತಪ್ಪು ನಿರ್ಧಾರ – ಹೈ ಕೋರ್ಟ್ ಆದೇಶ
ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ಮೂಕಾಂಬಿಕೆಯ ಜನ್ಮಾಷ್ಟಮಿ ಯ೦ದು ಪ್ರತೀವರ್ಷ ಸ್ವತ: ರಾಮಚಂದ್ರಾಪುರ ಮಠದ ಪೀಠಾಧಿಪತಿಗಳನ್ನು ಆಮಂತ್ರಿಸಿ ಕರೆಸಿ, ದೇವಸ್ಥಾನದಲ್ಲಿ ಅವರಿಂದ ಶ್ರೀ ಮುಕಾಂಬಿಕೆಗೆ ವಿಶೇಷಪೂಜೆ ಮಾಡುತ್ತಿದ್ದರು.
 
 
 
ಇದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದ ವಾಡಿಕೆ. ಆದರೆ ಕಳೆದ ವರ್ಷ ಮೂಕಾಂಬಿಕೆಯ ಜನ್ಮಾಷ್ಟಮಿ ಯ೦ದು ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಪೂಜೆ ಮಾಡದಂತೆ ತಡೆಯುವ ಪ್ರಯತ್ನಗಳು ನಡೆದಿತ್ತು. ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಶ್ರೀ ಗಳನ್ನು ಕರೆಸಿ ಮಾಡುತ್ತಿದ್ದ ಪೂಜೆ, ಆಚರಣೆಗಳು ಮಾಡದಂತೆ ತಡೆಯೊಡ್ಡಿದ್ದರು. ಇದನ್ನು ಪ್ರಶ್ನಿಸಿ ಕೊಲ್ಲೂರು ದೇವಸ್ಥಾನದ ಪರಂಪರಾಗತ ಅರ್ಚಕರಾದ ನರಸಿಂಹ ಅಡಿಗರು ಧಾರ್ಮಿಕ ದತ್ತಿ ಇಲಾಖೆಯ ಆದೇಶ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
 
 
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಬ್ದುಲ್ ನಜೀರ್, ಸರಕಾರದ ಈ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತಮ್ಮ ಆದೇಶದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿರ್ಧಾರ ತಪ್ಪು ಎಂದು ಆದೇಶ ನೀಡಿದ್ದಾರೆ. ಶ್ರೀ ಗಳನ್ನು ಪದ್ದತಿಯಂತೆ ಕರೆಸಿ ಅವರಿಂದ ನಡೆಸುವ ಪೂಜೆ ಮಾಡುವ ಆಚರಣೆಯನ್ನು ನಿಲ್ಲಿಸುವಂತೆ ನೀಡಿದ ಧಾರ್ಮಿಕ ದತ್ತಿ ಇಲಾಖೆಯ ಆದೇಶಕ್ಕೆ ತಡೆ ಆಜ್ಞೆ ನೀಡಿದ್ದಾರೆ. ಇದರಿಂದ ಈ ವರ್ಷ ರಾಮಚಂದ್ರಾಪುರ ಮಠದ ಶ್ರೀಗಳನ್ನು ಕರೆಸಿಕೊಳ್ಳುವುದಕ್ಕೆ ಇದ್ದ ಸರಕಾರದ ಆದೇಶದ ತೊಡಕು ನಿವಾರಣೆಯಾಗಿದೆ.

LEAVE A REPLY

Please enter your comment!
Please enter your name here