ಪ್ರಮುಖ ಸುದ್ದಿರಾಜ್ಯವಾರ್ತೆವಿದೇಶ

ಶ್ರೀಗಳಿಗೆ ಜಯ: ಭಕ್ತರ ಹರ್ಷೋದ್ಘಾರ

ಬೆಂಗಳೂರು ಪ್ರತಿನಿಧಿ ವರದಿ
ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲಿನ ಅತ್ಯಾಚಾರ ಪ್ರಕರಣದಿಂದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ಮುಕ್ತಿ ಸಿಕ್ಕಿದೆ. ಅವರ ವಿರುದ್ಧದ ಆರೋಪವನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಗುರುವಾರ ಕೈಬಿಟ್ಟಿದೆ.
 
ಅತ್ಯಾಚಾರ ಪ್ರಕರಣದಿಂದ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಶ್ರೀಗಳು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅವರ ಪೀಠ ಶ್ರೀಗಳಿಗೆ ಗುರುವಾರ ಕ್ಲೀನ್ ಚಿಟ್ ನೀಡಿದೆ.
ನ್ಯಾಯಾಲಯ ಪ್ರಕರಣ ಕೈಬಿಟ್ಟ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಶ್ರೀಗಳು ಮತ್ತು ಗಾಯಕಿ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ 2014ರ ಮಧ್ಯಭಾಗದಲ್ಲಿ ಗಾಯಕಿ ಪ್ರೇಮಲತಾ ಅತ್ಯಾಚಾರ ಆರೋಪ ಮಾಡಿದ್ದರು. ನಂತರ ನ್ಯಾಯಾಲಯದಲ್ಲಿ ಅನೇಕ ವಾದ-ವಿವಾದಗಳು ನಡೆದಿದ್ದವು.
 
ರಾಘವೇಶ್ವರ ಶ್ರೀಗಳ ಪರ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಅವರ ಭಕ್ತವೃಂದದ ಹರ್ಷ ಮುಗಿಲು ಮುಟ್ಟಿದೆ. ಬೆಂಗಳೂರಿನ ಗಿರಿನಗರ ಹಾಗೂ ಶಿವಮೊಗ್ಗದ ಮಠದ ಮುಂದೆ ನೆರೆದಿದ್ದ ಸಾವಿರಾರು ಭಕ್ತರು ಸಂಭ್ರಮದಿಂದ ಸತ್ಯಮೇವ ಜಯತೇ ಎಂದು ಘೋಷಣೆ ಕೂಗಿದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here