ಶ್ರೀಕ್ಷೇತ್ರ ಕರಿಂಜೆ ಧಾರ್ಮಿಕ ಸಭಾ ಕಾರ್ಯಕ್ರಮ

0
131


ಸಮರ್ಪಣಾ ಭಾವದಿಂದ ಭಗವತ್ ಸೇವೆ ಮಾಡಬೇಕು: ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು

ಮೂಡುಬಿದಿರೆ: ಫಲಾಪೇಕ್ಷೆಯಿಲ್ಲದೆ ಸಮರ್ಪಣಾ ಭಾವದಿಂದ ಭಗವತ್ ಸೇವೆ ಮಾಡಬೇಕು. ನಿತ್ಯ ನಿರಂತರ ಭಗವಂತನ ಸ್ಮರಣೆ ಮಾಡುವುದರಿಂದ ನಮ್ಮೊಳಗಿನ ಪಾಪ, ಕಲ್ಮಷಗಳು ಕ್ಷಯವಾಗುತ್ತದೆ ಎಂದು ಶ್ರೀವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನಮ್, ಅರೆಮಾದನಹಳ್ಳಿ, ಅರಕಲಗೂಡು ಇಲ್ಲಿನ ಪರಮಪೂಜ್ಯ ಅನಂತಶ್ರೀ ವಿಭೂಷಿತ ಗುರು ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ನುಡಿದರು.

ಶ್ರೀ ಕ್ಷೇತ್ರ ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮೀ ಸನ್ನಿಧಿಯ ಬ್ರಹ್ಮಕಲಶೋತ್ಸವದ 6ನೇ ದಿನದ ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸನ್ಮಾರ್ಗದಲ್ಲಿ ನಡೆದು ಭಗವಂತನ ಸಾಕ್ಷಾತ್ಕಾರ ಮಾಡುವಲ್ಲಿ ನಾವಿದ್ದೇವೆಯೇ ಎಂಬ ಚಿಂತನೆ ಪ್ರತಿಯೊಬ್ಬರೂ ಮಾಡಬೇಕೆಂದು ತಿಳಿಸಿದರು. ತಮ್ಮನ್ನು ತಾವು ಭಗವಂತನಲ್ಲಿ ಸಮರ್ಪಣೆ ಮಾಡುವ ಮಾರುತಿಯ ರೀತಿಯಲ್ಲಿ ಭಗವಂತನ ಸೇವೆ ಪ್ರತಿಯೊಬ್ಬರೂ ಮಾಡುವಂತಾಗಬೇಕು. ನಿರಂತರ ಭಗವನ್ ನಾಮ ಸ್ಮರಣೆ ಮಾಡಬೇಕು. ಇದರಿಂದ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದವರು ಹೇಳಿದರು. ನಮ್ಮ ಸಂಸ್ಕøತಿ ಆಚಾರ ವಿಚಾರ ಉಳಿಸುವತ್ತ ನಾವು ಚಿಂತಿಸಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ನಮ್ಮ ಮತ್ತು ನಮ್ಮ ನವ ಪೀಳಿಗೆಯವರಿಗೆ ಸನ್ಮಾರ್ಗ ತೋರುವ ಕಾರ್ಯ ಆಗಬೇಕೆಂದ ಶ್ರೀಗಳು ಆಧುನಿಕ ಜಗತ್ತಿನ ಆಕರ್ಷಣೆ ಇಂದು ಸಣ್ಣ ತೊಟ್ಟಿಲಿನಿಂದ ಆರಂಭವಾಗುತ್ತಿರುವುದು ಬೇಸರದ ಸಂಗತಿ ಎಂದರು. ಧರ್ಮದ ಅರಿವು ಉಳಿಸುವ ಜವಾಬ್ದಾರಿ ನಮ್ಮ ಮತ್ತು ನಮ್ಮ ನವ ಪೀಳಿಗೆಯ ಕೈಯಲ್ಲಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕೆಂದರು.

Advertisement

ಸುಬ್ರಹ್ಮಣ್ಯ ಅವದಾನಿ, ಗುಂಡಿಬೈಲು ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭ ಸುಬ್ರಹ್ಮಣ್ಯ ಅವದಾನಿಯವರನ್ನು ಕ್ಷೇತ್ರದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕರಿಂಜೆ ಮುಕ್ತಾನಂದ ಶ್ರೀಗಳು, ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಡಾ. ಕೆ.ಆರ್. ಪ್ರಸಾದ್, ಬಡಕೋಡಿಗುತ್ತು, ಉದ್ಯಮಿ ಶ್ರೀಪತಿ ಭಟ್, ಕೃಷ್ಣರಾಜ ಹೆಗ್ಡೆ, ಶಶಿಧರ್ ಶೆಟ್ಟಿ ಬರೋಡ, ಸದಾನಂದ ಹೆಗ್ಡೆ, ರಾಮ ಶೆಟ್ಟಿ ತೋಡಾರು, ಯಾದವ ಕೋಟ್ಯಾನ್ ಪೆರ್ಮುದೆ,ನಿಲ್ ಶೆಟ್ಟಿ ಏಳಿಂಜೆ, ದಯಾನಂದ ಶೆಟ್ಟಿ, ಶರತ್ ಹೆಗ್ಡೆ, ರಘು ಕೌಟಿಲ್ಯ, ದೇವೇಂದ್ರ ಹೆಗ್ಡೆ, ನಂಜಪ್ಪ, ಜಗನ್ನಾಥ ಶೆಟ್ಟಿ, ಚಾವಡಿಮನೆ ನಿಡ್ಡೋಡಿ, ಸತೀಶ್ಚಂದ್ರ ಸಾಲ್ಯಾನ್, ಪಾಣಿಲ, ಇರುವೈಲು, ಎಂ ನಾಗೇಂದ್ರಪ್ಪ, ಜಯಂತ ಕೋಟ್ಯಾನ್ ಮರೋಡಿ, ಎಂ. ನಾಗರಾಜ್, ರತ್ನಾಕರ ಪೊಸೆರೆ, ಸದಾನಂದ, ಸಿ.ಗೆ.ಮಂಜುನಾಥ್, ವಿ.ನಾಗರಾಜು, ಕೆ.ವಿ.ಅಮರನಾಥ್, ಎಚ್.ಎಸ್. ವೆಂಕಟೇಶ್, ದಯಾನಂದ,ದೇವಿಪ್ರಸಾದ್ ಶೆಟ್ಟಿ,
ಅಶೋಕ್ ಶೆಟ್ಟಿ ಬೇಲೊಟ್ಟು ಸದಾನಂದ ಸಾಲ್ಯಾನ್ ಕೆರ್ವಾಶೆ ಉಪಸ್ಥಿತರಿದ್ದರು.
ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರ್ವಹಿಸಿದರು. ಚೇತನ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಕಾಶ್ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here