ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಅಡುಗೆ

0
550

ವಾರ್ತೆ ರೆಸಿಪಿ
ಕೋಡುಬಳೆ
ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು – ಸ್ವಲ್ಪ, ಚಿರೋಟಿ ರವೆ – 2 ಬಟ್ಟಲು, ಜೀರಿಗೆ – 2 ಚಮಚ, ಬಿಳಿ ಎಳ್ಳು – ಸ್ವಲ್ಪ, ಬೆಳ್ಳುಳ್ಳಿ – 5-6 ಎಸಳು, ಕಾಯಿತುರಿ – 1/2 ಬಟ್ಟಲು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಬೆಣ್ಣೆ – 1-4 ಬಟ್ಟಲು, ಇಂಗು – ಚಿಟಿಕೆ, ಎಣ್ಣೆ – ಕರಿಯಲು, ಖಾರದ ಪುಡಿ – 2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ತರಿಯಾದ ಕಡಲೆಕಾಯಿ ಬೀಜದ ಪುಡಿ – ಸ್ವಲ್ಪ, ಓಮ್ ಕಾಳು – ಸ್ವಲ್ಪ, ಮೆಣಸಿನ ಪುಡಿ – ಸ್ವಲ್ಪ.
ಮಾಡುವ ವಿಧಾನ :
ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಅಕ್ಕಿ ಹಿಟ್ಟು ಹಾಗೂ ಚಿರೋಟಿ ರವೆ ಹಾಕಿ ಚೆನ್ನಾಗಿ ಕೆಂಪಗೆ ಹುರಿದು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ಇದೇ ಬಾಣಲೆಯಲ್ಲಿ ತುರಿದ ಕಾಯಿ ತುರಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ. ಓಮ್ ಕಾಳು, ಜೀರಿಗೆ, ಕಾಳು ಮೆಣಸಿನ ಪುಡಿ ಹಾಕಿ ಬಿಸಿ ಮಾಡಿದ ಬೆಣ್ಣೆ ಹಾಕಿ ಇಂಗಿನ ಪುಡಿ, ತರಿಯಾದ ಕಡಲೆಕಾಯಿ ಬೀಜದ ಪುಡಿ, ಬೆಳ್ಳುಳ್ಳಿ ಪೇಸ್ಟ್, ಬಿಳಿ ಎಳ್ಳು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಎಲ್ಲವೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಸ್ವಲ್ಪ ನೀರು ಹಾಕಿ ಹದವಾಗಿ ಹಿಟ್ಟಿನಂತೆ ಕಲಸಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ ಅದಕ್ಕೆ ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು ನಂತರ ಕಲಸಿಟ್ಟುಕೊಂಡ ಕೋಡುಬಳೆ ಹಿಟ್ಟನ್ನು ಚಿಕ್ಕ ಚಿಕ್ಕ ಇಂಡೆಗಳನ್ನಾಗಿ ಮಾಡಿಕೊಂಡು ಕೈಯಿಗೆ ಎಣ್ಮೆ ಹಾಕಿ ಕೋಡುಬಳೆ ಆಕಾರ ಮಾಡಿಕೊಂಡು ಕಾದ ಎಣ್ಣೆಗೆ ಹಾಕಿ ಕೆಂಪಗೆ ಸುಟ್ಟರೆ. ರುಚಿಕರವಾದ ಖಾರ ಕೋಡುಬಳೆ ತಿನ್ನಲು ಸಿದ್ಧವಾಗುತ್ತದೆ.
 
 
ಅಕ್ಕಿ ಚಕ್ಕುಲಿ
ಬೇಕಾಗುವ ಸಾಮಾಗ್ರಿ:
ಅಕ್ಕಿ ಹುಡಿ- 340 ಗ್ರಾಂ, ಕಡಲೆ ಬೇಳೆ ಹುಡಿ -120 ಗ್ರಾಂ, ಎಳ್ಳು -1 ಟೀ ಚಮಚ, ಮೆಣಸಿನ ಹುಡಿ- 3 ಟೀ ಚಮಚ, ಇಂಗು- 1/2 ಟೇಬಲ್ ಚಮಚ, ಎಣ್ಣೆ -ಹುರಿಯಲು ಬೇಕಾಗುವಷ್ಟು, ಉಪ್ಪು- ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಅಕ್ಕಿ ಹುಡಿ, ಕಡಲೆ ಬೇಳೆ ಹುಡಿಯನ್ನು ಚೆನ್ನಾಗಿ ಕಲಸಿ, ಅದಕ್ಕೆ ಮೆಣಸಿನ ಹುಡಿ, ಇಂಗು ಮತ್ತು ಉಪ್ಪನ್ನು ಸೇರಿಸಿ. ಎಳ್ಳು ಕಾಳನ್ನು ತೊಳೆದು ಈ ಮಿಶ್ರಣದೊಂದಿಗೆ ಬೆರೆಸಿ. ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಮೃದುವಾಗಿ ಅಂಟು ಬರುವಂತೆ ಮಾಡಿ. ಸ್ವಲ್ಪ ಸ್ವಲ್ಪ ಹಿಟ್ಟನ್ನು ಚಕ್ಕುಲಿಯ ಎರಕದ ಅಚ್ಚು ಬಳಸಿ, ನಿಧಾನವಾಗಿ ಬಾಣಲೆಯಲ್ಲಿರುವ ಕುದಿಯುವ ಎಣ್ಣೆಗೆ ಹಾಕುತ್ತಿರಿ. ಚಕ್ಕುಲಿ ಕಂದು ಬಣ್ಣಕ್ಕೆ ತಿರುಗಿದ ನಂತರ ಹೊರತೆಗೆಯಿರಿ.

LEAVE A REPLY

Please enter your comment!
Please enter your name here