ಶ್ರೀಕೃಷ್ಣಾಷ್ಟಮಿ

0
524

ಬೆಂಗಳೂರು ಪ್ರತಿನಿಧಿ ವರದಿ
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಗೋಚಾತುರ್ಮಾಸ್ಯ ಕಾರ್ಯಕ್ರಮವು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ‘ಆನಂದದ ಯುಗ ಜಗಕವತರಿಸಲಿ! ಗೋವಿಂದ!’ ಎಂಬ ಹಿನ್ನೆಲೆಯಲ್ಲಿ ಆಚರಿತವಾಗುತ್ತಿದ್ದು, ಗೋಚಾತುರ್ಮಾಸ್ಯದ ಈ ಸುಸಂದರ್ಭದಲ್ಲಿ ಕೃಷ್ಣಾಷ್ಟಮಿಯ ಕಾರ್ಯಕ್ರಮವನ್ನು ವಿಶೇಷವಾಗಿ ವಿವಿಧ ಕಾರ್ಯಕ್ರಮ ವೈವಿಧ್ಯಗಳೋಂದಿಗೆ ಆಚರಿಸಲಾಯಿತು.
mata_astami2
 
mata_chaturmasya_astami2
ಮಾತೆಯರಿಂದ ಮೊಸರು ಕಡೆಯುವುದು, ಕೃಷ್ಣವೇಷದಾರಿ ಮುದ್ದು ಮಕ್ಕಳಿಗೆ ಬೆಣ್ಣೆಯನ್ನು ತಿನ್ನಿಸುವುದು, ರಾಧಾ – ಯಶೋಧ ಎಂಬ ವಿನೂತನ ಆಟ, ಕೋಲಾಟ ಸೇರಿದ ಭಕ್ತರ ಮನಸ್ಸಿಗೆ ಮುದನೀಡಿದರೆ, ಬಾಳೆಕೊನೆಯಿಂದ ಹಣ್ಣೀನ್ನು ಕೀಳುವುದು, ಮೊಸರು ಗಡಿಗೆ ಒಡೆಯುವುದು ಇತ್ಯಾದಿ ಕಾರ್ಯಕ್ರಮಗಳು ಬಾಲ ಕೃಷ್ಣನ ಲೀಲೆಯನ್ನು ನೆನಪಿಸಿತು. ಶ್ರೀಕೃಷ್ಣನ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ಶ್ರೀಕೃಷ್ಣನ ಜೀವನವನ್ನು ಪುನರ್ಮನನ ಮಾಡಿಕೊಟ್ಟಿತು.
 
mata_astami
 
ಸಭೆಯಲ್ಲಿ ದಿವ್ಯಸಾನ್ನಿಧ್ಯವಹಿಸಿದ್ದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಸಾಧನಾ ಪಂಚಕ ಪ್ರವಚನದ ದೃಶ್ಯಮುದ್ರಿಕೆ ಹಾಗೂ ಶ್ರೀಭಾರತೀ ಪ್ರಕಾಶನ ಹೊರತಂದಿರುವ ಡಾ. ರವಿ ಪಾಂಡವಪುರ ಅವರು ರಚಿಸಿದ ‘ಗವ್ಯಾಮೃತ’ ಎಂಬ ಪುಸ್ತಕವನ್ನುಲೋಕಾರ್ಪಣಗೊಳಿಸಿದರು. ಈ ಕೃತಿಯು ಶ್ರೀಮಠದ ಸಾಹಿತ್ಯಸುರಭಿ ವಿಭಾಗ ಕೊಡುಗೆಯಾಗಿದೆ. ಸಭೆಯಲ್ಲಿ ಖ್ಯಾತ ಗಾಯಕರಾದ ಗರ್ತೀಕೆರೆ ರಾಘಣ್ಣ ಮುಂತಾದವರು ಉಪಸ್ಥಿತರಿದ್ದರು.
mata_chaturmasya_astami1
ಕೃಷ್ಣಾಷ್ಟಮಿಯ ಪ್ರಯುಕ್ತ ರಾತ್ರಿ 9.00 ಗಂಟೆಯಿಂದ ವಿಶೇಷವಾಗಿ ಗೋವರ್ಧನ ಗಿರಿಧಾರಿ ಗೋಕಥಾ ನಡೆಯಲಿದ್ದು, ಆನಂತರ ಕೃಷ್ಣಜನನ ಸಮಯದಲ್ಲಿ ಕೃಷ್ಣಜನ್ಮೋತ್ಸವ ಕಾರ್ಯಕ್ರಮ ಸಂಪನ್ನವಾಗಲಿದ್ದು, ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ನಡೆಯಿತು.
mata_astami1
ಇಂದಿನ ಕಾರ್ಯಕ್ರಮ (26.08.2016):
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00: ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.00 :
ಗೋಸಂದೇಶ : ಉದಯಸಿಂಹ
ಲೋಕಾರ್ಪಣೆ : ಕೈಲಾಸ ತಂತ್ರ : ಪುಸ್ತಕ :
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ಉದಯಸಿಂಹ
ಸಂತ ಸಂದೇಶ : ಪರಮಪೂಜ್ಯ ಶ್ರೀ ಶಿವಪ್ರಭು ಸ್ವಾಮಿಗಳು, ವೀರಸಿಂಹಾಸ ಮಠ, ಚಾಮರಾಜನಗರ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಹಿಂದೂಸ್ತಾನಿ ಗಾಯನ – ಶೃತಿ ಬೋಡೆ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

LEAVE A REPLY

Please enter your comment!
Please enter your name here