ಶ್ರಮದಾನ

0
275

 
ಉಜಿರೆ ಪ್ರತಿನಿಧಿ ವರದಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಉಜಿರೆಯ ಎಸ್ ಎಂ ಎಂಕಾಲೇಜಿನ ಸಹಯೋಗದಲ್ಲಿ ನಡೆಯುತ್ತಿರುವ 5 ದಿನಗಳ ರಾಜ್ಯ ಮಟ್ಟದ `ರಾಷ್ಟ್ರೀಯ ಸೇವಾ ಯೋಜನೋತ್ಸವ’ ದ ಅಂಗವಾಗಿ ಮೂರನೇ ದಿನ ಸೋಮವಾರ ಬೆಳಿಗ್ಗೆ ಎನ್.ಎಸ್.ಎಸ್ ಸ್ವಯಂಸೇವಕರಿಂದ ಉಜಿರೆ ಆರ್ಬೊ ರೆಟಮ್ ನಲ್ಲಿ ಶ್ರಮದಾನ ನಡೆಯಿತು.
 
 
200ಕ್ಕೂ ಹೆಚ್ಚು ಸ್ವಯಂಸೇವಕರನ್ನು ಒಳಗೊಂಡ 5 ತಂಡಗಳು ಎಸ್.ಡಿ.ಎಮ್ ಕಾಲೇಜಿನ ಯೋಜನಾಧಿಕಾರಿಗಳಾದ ಪ್ರೊ.ಭಾನುಪ್ರಕಾಶ್ ಮತ್ತು ಪ್ರೊ.ಶಕುಂತಲ ಅವರ ಮಾರ್ಗದರ್ಶನದಲ್ಲಿ ಆರ್ಬೊ ರೆಟಮ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಇಂಗು ಗುಂಡಿತೋಡುವಿಕೆ, ಕಳೆ ಕೀಳುವ ಕೆಲಸಗಳನ್ನು ನಿರ್ವಹಿಸಿದವು. ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ರಾಜ್ಯದ ಹಲವು ವಿಶ್ವವಿದ್ಯಾನಿಲಯದ ಯೋಜನಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here