ಶೈಲಪುತ್ರಿ ದೇವಿ ಆರಾಧನೆ

0
1599

ನವರಾತ್ರಿಯ ವಿಶೇಷ ಲೇಖನ
ಇಂದಿನಿಂದ ನವರಾತ್ರಿ ಪ್ರಾರಂಭವಾಗಿದೆ. ಎಲ್ಲೆಲ್ಲೋ ನವರಾತ್ರಿಯ ಸಡಗರ, ಸಂಭ್ರಮ ಮನೆ ಮಾಡಿದೆ. ದೇವಿಯ 9 ಸ್ವರೂಪಗಳ ಆರಾಧನೆಯ ಪರ್ವ ದಿನವಾಗಿದೆ. ನವರಾತ್ರಿಯಲ್ಲಿ ನವದುರ್ಗೆಯರ ಪೂಜೆ ತುಂಬಾ ವಿಶೇಷವಾಗಿದೆ. ದುರ್ಗೆಯರ ಒಂಭತ್ತು ರೂಪವನ್ನು ನವರಾತ್ರಿಯ 9 ದಿನಗಳಲ್ಲಿ ಆಚರಣೆ ಮಾಡಲಾಗುತ್ತದೆ. ದೇವಿಯರಲ್ಲಿ ಒಬ್ಬಳು ಸೌಮ್ಯ, ಒಬ್ಬಳು ಸಾತ್ವಿಕ, ಒಬ್ಬಳುಭಯಂಕರಿ, ಮತ್ತೊಬ್ಬಳು ಮಹಾತಾಯಿಯಾಗಿದ್ಧಾಳೆ. ಒಬ್ಬೊಬ್ಬ ದೇವಿ ಪೂಜೆಯಿಂದ ಒಂದೊಂದು ಫಲ ದೊರಕುತ್ತದೆ. ಯೋಗಸಾಧನೆಗೆ ನವರಾತ್ರಿ ಪ್ರಶಸ್ತವಾದ ಸಮಯವಾಗಿದೆ.
 
shila-putri_vaarte
ನವದುರ್ಗೆಯರಲ್ಲಿ ‘ಶೈಲಪುತ್ರಿ’ ಯದ್ದು ಮೊದಲ ರೂಪವಾಗಿದೆ. ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸುತ್ತಾರೆ. ಈಕೆ ಹಿಮವಂತನ ಮಗಳಾದ್ದರಿಂದ ಶೈಲಪುತ್ರಿ ಎಂಬ ಹೆಸರು ಬಂದಿದೆ. ಈಕೆಯದ್ದು ಸಾಕ್ಷಾತ್ ಪಾರ್ವತಿದೇವಿಯ ಸ್ವರೂಪವಾಗಿದೆ. ಈಕೆ ಬಲಗೈಯಲ್ಲಿ ತ್ರಿಶೂಲ ಹಿಡಿದಿದ್ದಾಳೆ. ಎಡಗೈಯಲ್ಲಿ ಕಮಲ ಹೊಂದಿದ್ದಾಳೆ. ಶೈಲಪುತ್ರಿ ವೃಷಣವಾಹನೆ, ಚತುರ್ಭಜಧಾರಿಣಿಯಾಗಿದ್ದಾಳೆ. ಇವಳದ್ದು ಸರಳ ವ್ಯಕ್ತಿತ್ವ ಮತ್ತು ಸೌಮ್ಯ ರೂಪವಾಗಿದ್ದಾಳೆ.
 
 
ಈ ದಿನ ಬೂದಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇಲ್ಲಿ ಶೈಲ ಎಂದರೆ ಪರ್ವತ. ಇದರಿಂದ ಈ ದೇವಿಯು ಭಕ್ತಿ ಮತ್ತು ಪರ್ವದಂತೆ ದೃಢತೆಯ ಪ್ರತೀಕವಾಗಿದ್ದಾಳೆ.  ಪಾರ್ವತಿ ದೇವಿ ಶಿವನನ್ನು ಪಡೆಯಲು ಕಠೋರ ತಪಸ್ಸು ಮಾಡಿದ್ದಳು. ಈಕೆಯನ್ನು ಪರೀಕ್ಷೆ ಮಾಡಲು ಸಪ್ತ ಋಷಿಗಳು ಬಂದಿದ್ದರಂತೆ. ಆದರೆ ದೇವಿ ತನ್ನ ಸಂಕಲ್ಪದಂತೆ ಬೆಟ್ಟದಂತೆ ದೃಢವಾಗಿದ್ದಳು. ಶೈಲಪುತ್ರಿ ಶ್ಲೋಕ ಜಪಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈಕೆಯ ನಾಮಸ್ಮರಣೆ ಅತ್ಯಂತ ಶಕ್ತಿದಾಯಕವಾಗಿದೆ. ಈ ದೇವಿ ಕಠೋರ ಶಕ್ತಿಯನ್ನು ಕರುಣಿಸುತ್ತಾಳೆ. ಈಕೆ ದೇವತೆಗಳಿಗೆ ದುರ್ಗೆಯಾಗಿ ಅಭಯಹಸ್ತ ನೀಡಿದ್ದಾಳೆ. ಕೋಮಲ ಚಿತ್ತದವರು ಬೆಟ್ಟದಷ್ಟು ಕಲ್ಲಾಗುತ್ತಾರೆ. ಸಾಮಾನ್ಯ ವ್ಯಕ್ತಿಯೂ ಮಹಾಪುರುಷನಾಗುತ್ತಾನೆ.

ಶೈಲಪುತ್ರಿ ಪೂಜಾ ಮಂತ್ರ

ವಂದೇ ವಾಂಛಿತಲಾಭಾಯ
ಚಂದ್ರಾರ್ಧ ಕೃತಶೇಖರಾಮ್
ವೃಷಾರೂಡಾಂ ಶೂಲಧರಾಂ
ಶೈಲಪು ತ್ರೀಂ ಯಶಸ್ವಿನೀಮ್

LEAVE A REPLY

Please enter your comment!
Please enter your name here