ವರದಿ-ಚಿತ್ರ : ಅಶ್ವಿನಿ ಸ್ಟುಡಿಯೋ ಬದಿಯಡ್ಕ
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 2016-17ನೇ ಸಾಲಿನ ಶೈಕ್ಷಣಿಕ ವರ್ಷವು ಸೋಮವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾಯಿತು.
ವೇ.ಮೂ. ಗೋಪಾಲಕೃಷ್ಣ ಭಟ್ ಕೋಡಿಯಡ್ಕ ಅವರು ಗಣಪತಿ ಹೋಮವನ್ನು ಮಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ದೀಪ ಬೆಳಗಿಸಿದರು.
ಶಾಲಾ ಆಡಳಿತ ಮಂಡಳಿಯ ಜಯಪ್ರಕಾಶ ಪಜಿಲ, ರಾಜಗೋಪಾಲ ಚುಳ್ಳಿಕ್ಕಾನ, ಈಶ್ವರ ಭಟ್ ಹಳೆಮನೆ, ಇಂಜಿನಿಯರ್ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ವಿಷ್ಣುಶರ್ಮ ಚಾಲೆತ್ತಡ್ಕ ಹಾಗೂ ಮಕ್ಕಳ ಪಾಲಕರು, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯ ತನಕ ತರಗತಿಗಳು ನಡೆಯುತ್ತಿದೆ.