ಶೇ.10ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ

0
203

ಬೆಂಗಳೂರು ಪ್ರತಿನಿಧಿ ವರದಿ
ಶೇ. 10ರಷ್ಟು ಸಂಬಳ ಜಾಸ್ತಿ ಆಗುತ್ತೆ… ಈಗ ಕೆಲಸ ಮಾಡಿ ಎಂದು ಎಂದು ಸಿಎಂ ಸಿದ್ದರಾಮಯ್ಯ ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗಳಿಗೆ ಹೀಗೆ ಹೇಳಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
 
 
ಸಾರಿಗೆ ಮುಷ್ಕರ ಸಂಬಂಧ ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆ ಬಳಿ ಈ ಬಗ್ಗೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶೇ.10ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರಕ್ಕೆ ಸರ್ಕಾರ ಸಮ್ಮತಿಸಿದೆ. ಸರ್ಕಾರದ ನಿರ್ಧಾರಕ್ಕೆ ಸಮ್ಮತಿಸಿ ಕೆಲಸಕ್ಕೆ ಹಾಜರಾಗಲಿ. ಆಮೇಲೆ ಮುಂದಿನ ವಿಚಾರಗಳ ಬಗ್ಗೆ ಮಾತನಾಡೋಣ ಎಂದು ಸಿಎಂ ಆದೇಶಿಸಿದ್ದಾರೆ.
 
 
ಸಭೆಯಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, KSRTC ಎಂಡಿ ಡಾ. ರಾಜೇಂದ್ರಕುಮಾರ್ ಕಟಾರಿಯಾ ಸೇರಿ ಸಾರಿಗೆ ಇಲಾಖೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here