ಶೂನ್ಯ ಬಡ್ಡಿದರದಲ್ಲಿ 25 ಲಕ್ಷ ರೈತರಿಗೆ ಸಾಲ ನೀಡುವ ಗುರಿ

0
467

 
ವರದಿ: ಲೇಖಾ
ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 11 ಸಾವಿರ ಕೋಟಿ ರೂ. ಮೊತ್ತದ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಹೆಚ್. ಎಸ್. ಮಹದೇವಪ್ರಸಾದ್ ಅವರು ತಿಳಿಸಿದ್ದಾರೆ.
 
 
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವರು ಹಿಂದಿನ ಸರ್ಕಾರ 5 ವರ್ಷದಲ್ಲಿ 75 ಲಕ್ಷ ರೈತರಿಗೆ 25,011 ಕೋಟಿ ರೂ. ಸಾಲ ನೀಡಿದ್ದರೆ ನಮ್ಮ ಸರ್ಕಾರ ಬಂದ ಮೂರು ವರ್ಷಗಳಲ್ಲಿ ಸುಮಾರು 32,476 ಕೋಟಿ ರೂ ಸಾಲ ನೀಡಿದ್ದು, ಕಳೆದ ಸಾಲಿನಲ್ಲಿ 800 ಕೋಟಿ ರೂ. ಬಡ್ಡಿ ಬಾಬ್ತು ಹಣವನ್ನು ರೈತರಿಗೆ ನೀಡಲಾಗಿದೆ ಎಂದರು.
 
 
 
ದೇಶದಲ್ಲೇ ಕರ್ನಾಟಕ ಕಬ್ಬು ಬೆಳೆಗಾರರಿಗೆ ಹೆಚ್ಚು ಬಾಕಿ ಹಣ ಪಾವತಿಸಿದ ಮೊದಲ ರಾಜ್ಯವಾಗಿದೆ ಎಂದ ಮಹಾದೇವ ಪ್ರಸಾದ್ ಅವರು ಕಳೆದ ಮೂರು ವರ್ಷಗಳಲ್ಲಿ 193 ಕೋಟಿ ರೂ. ಮಾರ ಬಾಕಿ ಉಳಿಸಿಕೊಂಡಿದ್ದು, 2013 ರಿಂದ ರೈತರ ಹಣ ಬಾಕಿ ಉಳಿಸಿಕೊಂಡಿದ್ದ ಕಬ್ಬು ಕಾರ್ಖಾನೆಗಳು ಬಾಕಿ ಹಣ ಮರುಪಾವತಿಸಿದಲ್ಲಿ ರೋಡ್ ಟ್ಯಾಕ್ಸ್ ಮತ್ತು ಪರ್ಚೆಸ್ ಟ್ಯಾಕ್ಸ್ ವಿನಾಯಿತಿ ನೀಡುವುದಾಗಿ ಈ ಹಿಂದೆಯೇ ಸುತ್ತೋಲೆ ಹೊರಡಿಸಲಾಗಿತ್ತು. ಸುತ್ತೋಲೆ ಹೊರಡಿಡಿದ ನಂತರ ಬಹುತೇಕ ಕಬ್ಬು ಅರೆಯುವ ಕಾರ್ಖಾನೆಗಳು ರೈತರ ಬಾಕಿ ಹಣವನ್ನು ಪಾವತಿಸಿವೆ ಎಂದು ತಿಳಿಸಿದರು.
 
 
ಕಳೆದ ವರ್ಷ 376 ಲಕ್ಷ ಮೆಟ್ರಿಕ್ ಟನ್ ಕಬ್ಬು ರಾಜ್ಯದಲ್ಲಿ ಉತ್ಪಾದನೆಯಾಗಿತ್ತು. ಈ ವರ್ಷ ಅದು 300 ಲಕ್ಷ ಮೆಟ್ರಿಕ್ ಟನ್‍ಗೆ ಇಳಿಯುವ ಸಾಧ್ಯತೆ ಇದೆ ಎಂದ ಸಹಕಾರ ಸಚಿವರು 2015-16ನೇ ಸಾಲಿನಲ್ಲಿ 1226 ಕೋಟಿ ರೂ. ಬಾಕಿ ಹಣ ಇತ್ತು. ವಿನಾಯಿತಿ ನೀಡಿದ ಮೇಲೆ ಬಾಕಿ ಹಣದ ಮಾತ್ರ 86 ಕೋಟಿ ರೂ. ಗೆ ಇಳಿದಿದ್ದು , ಕಬ್ಬು ಕಾರ್ಖಾನೆಗಳಿಗೆ ವಿನಾಯಿತಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 335 ಕೋಟಿ ರೂ. ಹೊರೆ ಬಿದ್ದಿದೆ ಎಂದು ಮಾತನಾಡಿದರು.
 
 
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಇಲಾಖೆವತಿಯಿಂದ 795 ಕೋಟಿ ರೂ. ವೆಚ್ಚದಲ್ಲಿ ಗೋದಾಮುಗಳನ್ನು ನಿರ್ಮಿಸಲಾಗುತ್ತಿದ್ದು, ಈ ಸಂಬಂಧ ಈಗಾಗಲೇ 272 ಸ್ಥಳಗಳನ್ನು ಗುರುತಿಸಲಾಗಿದೆ ಎಂದ ಸಹಕಾರ ಸಚಿವರು ಗೋದಾಮುಗಳಲ್ಲಿ ತಮ್ಮ ಬೆಳೆಗಳನ್ನು ಇರುವ ರೈತರಿಗೆ ಶೇ 70 ರಷ್ಟು ಸಾಲ ಸೌಲಭ್ಯಗಳನ್ನು ಬ್ಯಾಂಕ್ ವತಿಯಿಂದ ಕೊಡಿಸಲು ಚಿಂತಿಸಲಾಗಿದ್ದು, ರೈತರು ತಮ್ಮ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಿದ ಮೇಲೆ ಸಾಲ ಪಡೆದ ಬ್ಯಾಂಕುಗಳಿಗೆ ಸಾಲ ಮರುಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here