ಉದ್ಯೋಗವಾರ್ತೆ

ಶುಶ್ರೂಷಣಾಧಿಕಾರಿ ಹುದ್ದೆಗಳು ಖಾಲಿ ಇದೆ

ಉದ್ಯೋಗ ವಾರ್ತೆ
ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಶುಶ್ರೂಷಣಾಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆಗಸ್ಟ್ 8 ರ ಅಪರಾಹ್ನ 3 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
 
 
ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಪ್ರತ್ಯೇಕವಾಗಿ ತರಬೇತಿ ನೀಡಿದ ಅನುಭವ ಇರಬೇಕು. ನಿವೃತ್ತಿ ಹೊಂದಿದ ಸಿಬ್ಬಂದಿಯವರಿಗೆ ಆದ್ಯತೆ ನೀಡಲಾಗುವುದು. ಹಿರಿಯ ಆರೋಗ್ಯ ಸಹಾಯಕಿ, ಜನರಲ್ ನರ್ಸಿಂಗ್, ಡಿಪಿಹೆಚ್ಎನ್ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.ತರಬೇತಿ ಬಗ್ಗೆ ಟಿ.ಓ ಟಿ ಹೊಂದಿದ ದಾಖಲೆಗಳನ್ನು ಲಗ್ತೀಕರಿಸುವುದು.
 
 
ಈ ತರಬೇತಿ ಕೇಂದ್ರಕ್ಕೆ ಸಂಬಂಧಪಟ್ಟಂತೆ ತರಬೇತಿಗಳಲ್ಲಿ ಬೋಧನಾ ಅನುಭವ ಹಾಗೂ ಪಡೆದ ಇನ್ನಿತರ ತರಬೇತಿಗಳ ಅನುಭವದ ಆಧಾರದಲ್ಲಿ ಪ್ರಾಧಾನ್ಯತೆ ನೀಡಲಾಗುವುದು.
ವಯಸ್ಸಿನಲ್ಲಿ 65 ವರ್ಷದೊಳಗಿರಬೇಕು, ಹುದ್ದೆಯು ತಾತ್ಕಾಲಿಕವಾಗಿದ್ದು, ದಿನಾಂಕ: 31/03/2017 ಅಥವಾ ಖಾಯಂ ಹುದ್ದೆ ಭರ್ತಿಯಾಗುವ ವರೆಗೆ ಯಾವುದು ಮೊದಲೋ ಆ ದಿನಾಂಕದವರೆಗೆ ಚಾಲ್ತಿಯಲ್ಲಿರುತ್ತದೆ. ಎಂದು ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್, ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.
ಶುಶ್ರೂಷಣಾಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ
ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಶುಶ್ರೂಷಣಾಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 08/08/2016ರ ಅಪರಾಹ್ನ 3-00 ಗಂಟೆಯೊಳಗೆ ಈ ಕೆಳಗೆ ತೋರಿಸಲಾದ ದಾಖಲೆಗಳನ್ನು ಸಲ್ಲಿಸಬೇಕು.
 
 
ಅರ್ಹತೆಗಳು
1. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಪ್ರತ್ಯೇಕವಾಗಿ ತರಬೇತಿ ನೀಡಿದ ಅನುಭವ ಇರಬೇಕು. ನಿವೃತ್ತಿ ಹೊಂದಿದ ಸಿಬ್ಬಂದಿಯವರಿಗೆ ಆದ್ಯತೆ ನೀಡಲಾಗುವುದು.
2. ಹಿರಿಯ ಆರೋಗ್ಯ ಸಹಾಯಕಿ, ಜನರಲ್ ನರ್ಸಿಂಗ್, ಡಿಪಿಹೆಚ್ಎನ್ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
3. ತರಬೇತಿ ಬಗ್ಗೆ ಟಿ.ಓ ಟಿ ಹೊಂದಿದ ದಾಖಲೆಗಳನ್ನು ಲಗ್ತೀಕರಿಸುವುದು.
4. ಈ ತರಬೇತಿ ಕೇಂದ್ರಕ್ಕೆ ಸಂಬಂಧಪಟ್ಟಂತೆ ತರಬೇತಿಗಳಲ್ಲಿ ಬೋಧನಾ ಅನುಭವ ಹಾಗೂ ಪಡೆದ ಇನ್ನಿತರ ತರಬೇತಿಗಳ ಅನುಭವದ ಆಧಾರದಲ್ಲಿ ಪ್ರಾಧಾನ್ಯತೆ ನೀಡಲಾಗುವುದು.
ಷರತ್ತುಗಳು:-
1. ವಯಸ್ಸಿನಲ್ಲಿ 65 ವರ್ಷದೊಳಗಿರಬೇಕು.
2. ಹುದ್ದೆಯು ತಾತ್ಕಾಲಿಕವಾಗಿದ್ದು, ದಿನಾಂಕ: 31/03/2017 ಅಥವಾ ಖಾಯಂ ಹುದ್ದೆ ಭರ್ತಿಯಾಗುವ ವರೆಗೆ ಯಾವುದು ಮೊದಲೋ ಆ ದಿನಾಂಕದವರೆಗೆ ಚಾಲ್ತಿಯಲ್ಲಿರುತ್ತದೆ.
ಮೇಲಿನ ಹುದ್ದೆಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಎಲ್ಲಾ ಅರ್ಹತೆಗಳನ್ನು ಹೊಂದಿದ ಸೂಕ್ತ ಅಭ್ಯರ್ಥಿಗೆ ಆದೇಶವನ್ನು ನೀಡಲಾಗುವುದು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here