ಶಿವರಾತ್ರಿ ಫಲಹಾರಕ್ಕಾಗಿ ಕೂಡಲೇ ಅಡುಗೆ ತಯಾರಿಸಿ…

0
786

ವಾರ್ತೆ ರೆಸಿಪಿ
ಇದೊಂದು ವ್ರತ, ಉಪವಾಸ, ಫಲಾಹರ ಹಾಗೂ ಜಾಗರಣೆಯ ಹಬ್ಬವಾಗಿದೆ. ಶಿವಭಕ್ತ ಬೇಡರ ಕಣ್ಣಪ್ಪನಿಗೂ ಶಿವರಾಥ್ರಿಗೂ ಸಂಬಂಧವಿದೆ. ಇಂದು ಶಿವ ದೇವಾಲಗಳಲ್ಲಿ ಇಡೀ ರಾತ್ರಿ ವಿಶೇಷ ಪೂಜೆಗಳು ನಡೆಯುತ್ತದೆ. ಹಲವರು ಮನೆಗಳಲ್ಲಿಯೂ ಜಾಗರಣೆ ಮಾಡುತ್ತಾರೆ.
ಶಿವರಾತ್ರಿಯ ಕಥೆ ಎಲ್ಲರಿಗೂ ಗೊತ್ತಿರುವಂತಹುದೇ ಆಗಿದೆ. ಬೇಡರ ಕಣ್ಣಪ್ಪನ ಭಕ್ತಿಗೆ ಮೆಚ್ಚಿದ ಶಿವನು ಅವನಿಗೆ ಮುಕ್ತಿ ನೀಡಿದವನು ಎಂಬ ಸಂಗತಿ ತಿಳಿದಿರುವಂತಹುದೇ ಅಲ್ಲವೇ? ಹಾಗೆಯೇ ಬೇಟೆಗಾರರು ತನ್ನ ಪತ್ನಿ ಹಾಗೂ ಮಕ್ಕಳ ಹಸಿವನ್ನು ನೀಗಿಸಲು ಬೇಟೆಯಾಡಲು ಬಂದನು. ಜಿಂಕೆಗಳನ್ನು ಬೇಟೆಯಾಡಲು ಹೊರಟಾಗ ಜಿಂಕೆಗಳನ್ನು ತಾವು ತಮ್ಮ ಮಕ್ಕಳು, ಮರಿಯನ್ನು ಕಂಡು ಬರುತ್ತೇವೆ, ತಮ್ಮನ್ನು ಬಿಟ್ಟು ಕಳುಹಿಸು ಎಂದು ಕೇಳಿಕೊಂಡಾಗ ಬೇಟಗಾರನು ಕರುಣಾಮಯಿಯಾಗಿ ಕಳುಹಿಸಿಕೊಟ್ಟನು. ಆದರೆ ರಾತ್ರಿಯೆಲ್ಲಾ ಮರದ ಕೊಂಬೆಯ ಮೇಲೆ ಕುಳಿತು ಕೈಗೆ ಸಿಕ್ಕ ಬಿಲ್ವ ಪತ್ರೆಗಳನ್ನು ಶಿವಲಿಂಗಕ್ಕೆ ಅರ್ಚನೆ ಮಾಡಿದ್ದರಿಂದ ಶಿವನು ಬೇಟೆಗಾರನ ಭಕ್ತಿಗೆ ಮೆಚ್ಚಿ ಸಕಲ ಸೌಭಾಗ್ಯಗಳನ್ನು ಕರುಣಿಸಿದನು. ಆ ದಿನವನ್ನು’ಶಿವರಾತ್ರಿ’ ಎಂದು ಕರೆಯಲಾಯಿತು.
 
kadale kosambari
ಕಡಲೆ ಕಾಯಿ ಉಸಲಿ:
ಬೇಕಾಗುವ ಸಾಮಾಗ್ರಿಗಳು:250 ಗ್ರಾಂ ಕಡಲೆಕಾಳು, 1/4ಭಾಗ ತೆಂಗಿನಕಾಯಿ, 50 ಗ್ರಾಂ ಈರುಳ್ಳಿ, 4 ಹಸಿಮೆಣಸಿನಕಾಯಿ ಬೇಕಾದರೆ ಕೊತ್ತಂಬರಿ ಸೊಪ್ಪು, ಉಪ್ಪು, ಒಗ್ಗರಣೆಗೆ ಸಾಸಿವೆ ಮತ್ತು ಎಣ್ಣೆ.
ತಯಾರಿಸುವ ವಿಧಾನ:
ಕಡಲೆಕಾಳನ್ನು ಬಿಸಿ ನೀರಿನಲ್ಲಿ ಹಾಕಿ ಬೇಯಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಮಾಡಿ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಅಮೇಲೆ ಬೆಂದ ಕಡಲೆಕಾಳು, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 
hayagriva
ಹಯಗ್ರೀವ :
ಬೇಕಾಗುವ ಪದಾರ್ಥಗಳು:
ಕಡಲೆಬೇಳೆ 1 ಕಪ್, ಬೆಲ್ಲ 11/2 ಕಪ್, ಶುಂಠಿ -ಅರ್ಧ ಇಂಚು, ಎಣ್ಣೆ – 1 ಚಮಚ, ಅರಿಶಿಣ – 1/2ಚಮಚ, ಚಿಟಿಕೆ ಉಪ್ಪು, ಗಸಗಸೆ 2ಟೇಬಲ್ ಚಮಚ, ಕೊಬ್ಬರಿ ತುರಿ ಸ್ವಲ್ಪ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಮತ್ತು ಪಿಸ್ತ(ಬೇಕಾದರೆ), ಲವಂಗ 5-6, ತುಪ್ಪ, ಏಲಕ್ಕಿ ಪುಡಿ
ತಯಾರಿಸುವ ವಿಧಾನ:
ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಬೇಯಲು ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಹಾಕಿ, ಎಣ್ಣೆ, ಅರಿಶಿಣ,ಚಿಟಿಕೆ ಉಪ್ಪು ಮತ್ತು ಶುಂಠಿ ಹಾಕಿ ಬೇಯಿಸಿಟ್ಟುಕೊಳ್ಳ ಬೇಕು. ತುಂಬಾ ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಂತೆ ಬೇಯಿಸಿ (ಅಂಚು ಒಡೆದು ಬೇಯೋದು ಅಂತರಲ್ಲಾ ಹಾಗೆ) ಅಕಸ್ಮಾತ್ ನೀರು ಜಾಸ್ತಿ ಆಯಿತು ಎನಿಸಿದರೆ ಬೇಳೆಯನ್ನು ಬಸಿದುಕೊಳ್ಳಿ. ಬೆಂದ ಮೇಲೆ ಶುಂಠಿಯನ್ನು ಹೊರಗೆ ತೆಗೆದು ಹಾಕಿ. ನಂತರ ಬೇರೆ ಪಾತ್ರೆಯಲ್ಲಿ ಕುಟ್ಟಿದ ಬೆಲ್ಲದ ಪುಡಿ ಮತ್ತು ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿ ಸಣ್ಣ ಪಾಕ ಬಂದ ನಂತರ ಅದಕ್ಕೆ ಬೇಯಿಸಿದ ಕಡಲೆಬೇಳೆಯನ್ನು ಹಾಕಿ ಬೆಲ್ಲ ಮತ್ತು ಬೇಳೆ ಚೆನ್ನಾಗಿ ಹೊಂದಿಕೊಳ್ಳುವವರೆಗೂ ತಿರುಗಿಸುತ್ತಿರಿ, ಕೈ ಬಿಡದೇ ತಿರುಗಿಸುತ್ತಾ ತಳ ಹತ್ತದಂತೆ ನೋಡಿಕೊಳ್ಳಿ. ಬೇಗ ತಳ ಹತ್ತುತ್ತದೆ. ನಂತರ ಅದಕ್ಕೆ ಒಣಕೊಬ್ಬರಿತುರಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಮತ್ತು ಲವಂಗವನ್ನು ಹಾಕಿ,ಬಾದಾಮಿ,ಪಿಸ್ತ ಹಾಕುವುದಾದರೆ ಅದನ್ನು ಹಾಕಿ. ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಗಸಗಸೆಯನ್ನು ಸೇರಿಸಿ ಮತ್ತೆ ಚೆನ್ನಾಗಿ ಬೆರೆಸಿ,ಇಳಿಸಿ. ಮೇಲೆ ಒಂದೆರಡು ಚಮಚ ತುಪ್ಪ ಹಾಕಿ. ಸವಿಸವಿಯಾದ,ರುಚಿರುಚಿಯಾದ ಹಯಗ್ರೀವ ಸಿದ್ದ.
 
 
lemon juice
ನಿಂಬೆ ಹಣ್ಣಿನ ಪಾನಕ:
ಬೇಕಾಗುವ ಸಾಮಾಗ್ರಿಗಳು:
250ಗ್ರಾಂ.ಸಕ್ಕರೆ, 4ನಿಂಬೆಹಣ್ಣು, ಏಲಕ್ಕಿ2, ನೀರು8-10ಲೀ. ಉಪ್ಪು ರುಚಿಗೆ
ತಯಾರಿಸುವ ವಿಧಾನ:
ಒಂದು ಸ್ಟೀಲ್ ಪಾತ್ರೆಯಲ್ಲಿ ನೀರು ಹಾಕಿ ನಿಂಬೆ ರಸವನ್ನು ಶೋಧಿಸಿ ಹಾಕಿ. ಅದಕ್ಕೆ ಸಕ್ಕರೆ, ಉಪ್ಪು ಹಾಗೂ ಏಲಕ್ಕಿ ಹಾಕಿ ಕಲಕಿ. ನಂತರ ಲೋಟಗಳಿಗೆ ಹಾಕಿ ಕುಡಿಯಲು ನೀಡಿ.

LEAVE A REPLY

Please enter your comment!
Please enter your name here