ಶಾಸನ ಶಾಸ್ತ್ರ ಡಿಪ್ಲೊಮಾ ತರಗತಿಗಳ ಪ್ರಾರಂಭ

0
687

ಬೆಂಗಳೂರು ಪ್ರತಿನಿಧಿ ವರದಿ
ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2016-17ನೇ ಸಾಲಿನ ಶಾಸನ ಶಾಸ್ತ್ರ ಡಿಪ್ಲೊಮಾ ತರಗತಿಗಳು 2017ನೇ ಫೆಬ್ರವರಿ 15ರಂದು ಪ್ರಾರಂಭವಾಗುತ್ತದೆ.
ಶಾಸನಗಳ ಲಿಪಿಗಳನ್ನು ಓದುವ ತರಬೇತಿ, ಶಾಸನಗಳ ಸಂಗ್ರಹವಿಧಾನ, ಅಧ್ಯಯನ, ಸಂಪ್ರಬಂಧ ರಚನೆ ಇತ್ಯಾದಿ ಮೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುತ್ತದೆ.
 
 
ಆಸಕ್ತರು ಶಾಸನ ಶಾಸ್ತ್ರ ಡಿಪ್ಲೊಮಾ ತರಗತಿಗಳ ನಿಯಮಾವಳಿ ಮತ್ತು ಅರ್ಜಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಮಳಿಗೆಯಿಂದ ರೂ.25 ಶುಲ್ಕವನ್ನು ಸಲ್ಲಿಸಿ ಜನವರಿ 19ರಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.15 ಆಗಿದೆ ಮತ್ತು ದಂಡಶುಲ್ಕ ರೂ.50 ಸಹಿತ ಫೆ.28. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ. ಚಿತ್ತಯ್ಯ ಪೂಜಾರ್, ಸಂಚಾಲರು, ಸಂಶೋಧನಾ ಕೇಂದ್ರ, ಕನ್ನಡ ಸಾಹಿತು ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18. ಇವರನ್ನು ದೂರವಾಣಿ ಸಂಖ್ಯೆ 080-26623584/98456-37247 ಮೂಲಕ ಸಂಪರ್ಕಿಸಬಹುದು.
 
 
 
ಕೋರ್ಸ್ ಅವಧಿಯು 9 ತಿಂಗಳಾಗಿದ್ದು, ಹಾಜರಾತಿ ಕಡ್ಡಾಯವಾಗಿರುತ್ತದೆ. ವಾರಕ್ಕೆ 4 ದಿನ ತರಗತಿಗಳು ನಡೆಯುತ್ತದೆ. ತರಗತಿಗಳು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ನಡೆಯುತ್ತದೆ. ತರಗತಿ ಸಮಯ ಸಂಜೆ 6ರಿಂದ

LEAVE A REPLY

Please enter your comment!
Please enter your name here