ಶಾಲೆಯಲ್ಲಿ ಬೆಂಕಿ: 11 ಸಾವು

0
548

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಬೆಂಕಿ ಆಕಸ್ಮಿಕದಲ್ಲಿ 11 ವಿದ್ಯಾರ್ಥಿನಿಯರು ಸಾವಿಗೀಡಾದ ಘಟನೆ ದಕ್ಷಿಣ ಟರ್ಕಿಯ ಅಡಾನದಲ್ಲಿರುವ ಶಾಲೆಯಲ್ಲಿ ನಡೆದಿದೆ. ಈ ದುರಂತದಲ್ಲಿ ಇತರ 22 ಮಂದಿ ತೀವ್ರ ಗಾಯಗೊಂಡಿದ್ದಾರೆ.
 
 
ವಿದ್ಯುತ್ ದೋಷದಿಂದಾಗಿ ಶಾಲೆಯ ಶಯನಗೃಹದಲ್ಲಿ ಬೆಂಕಿ ಸಂಭವಿಸಿದೆ ಎನ್ನಲಾಗಿದೆ. 11 ಶಾಲಾ ಬಾಲಕಿಯರು ಮತ್ತು ಶಿಕ್ಷಕಿಯೊಬ್ಬರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ.
 
 
ದಾರುಣ ದುರಂತದಿಂದ ಪಾರಾದ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here