ಶಾಲಾ ಸರ್ವಸಂಘಗಳ ಜಂಟಿ ಉದ್ಘಾಟನೆ

0
537

 
ವರದಿ-ಚಿತ್ರ: ಸುನೀಲ್ ಬೇಕಲ್
ಧರ್ಮಸ್ಥಳ ಜೂನ್ 25: ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ ಸಾಮಥ್ರ್ಯಗಳನ್ನಾಧರಿಸಿ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಪಠ್ಯಕ್ರಮಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ವಿವಿಧ ಸಂಘಗಳನ್ನು ಸ್ಥಾಪಿಸುವುದು ಅನಿವಾರ್ಯ ಹಾಗೂ ಅತ್ಯಗತ್ಯ. ಅಂತೆಯೇ ಶ್ರೀ. ಧ. ಮಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಅನೇಕ ಶಾಲಾಸಂಘಗಳ ಉದ್ಘಾಟನೆ ಕಾರ್ಯಕ್ರಮವು ನೆರವೇರಿತು. ಉದ್ಘಾಟಕರಾಗಿ ಶ್ರೀ ಧ.ಮಂ.ಕಾಲೇಜು ಉಜಿರೆಯ ಗಣಿತ ವಿಭಾಗದ ಶ್ರೀಯುತ ಪ್ರಕಾಶ್ ಪ್ರಭು ಇವರು ಆಗಮಿಸಿದ್ದರು.
 
 
ಕನಸು, ಹೊಂಗನಸು ಮತ್ತು ರೇಸ್ ಶಾಲಾ ಭಿತ್ತಿಪತ್ರಗಳ ಉದ್ಘಾಟನೆ ನೇರವೇರಿಸಿ, ಬಳಿಕ ಸಭಾಕಾರ್ಯಕ್ರಮದ ವೇಳೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರಹಸನದ ಮೂಲಕ ಅಭ್ಯಾಗತರನ್ನು ಸ್ವಾಗತಿಸಿ ವೇದಿಕೆಗೆ ಬರಮಾಡಿಕೊಂಡರು. ಅವರು ದೀಪ ಬೆಳಗಿಸಿ ಕಾರ್ಯಯೋಜನೆಗಳನ್ನು ಬಿಡುಗಡೆಗೊಳಿಸುವ ಮೂಲಕ ಉಳಿದ ಸಂಘಗಳಿಗೂ ಚಾಲನೆ ನೀಡಿದರು. ಉದ್ಘಾಟನಾ ಭಾಷಣದಲ್ಲಿ ಅವರು ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಗೆ ಅನುಗುಣವಾಗಿ ಸಂಘಗಳನ್ನು ಆರಿಸಿಕೊಂಡು ತಮ್ಮ ಸೂಕ್ತ ಪ್ರತಿಭೆಯನ್ನು ಬೆಳಗಿಸುವಂತೆ ಪ್ರೇರೇಪಿಸಿದರು ಹಾಗೂ ತಮ್ಮ ಮಧುರ ಗಾಯನದ ಮೂಲಕ ವಿದ್ಯಾರ್ಥಿಗಳನ್ನು ಮನರಂಜಿಸಿದರು.
 
 
ಸ್ವಾತಿ ಶಬರಾಯ ನಿರೂಪಿಸಲ್ಪಟ್ಟ ಸದರಿ ಕಾರ್ಯಕ್ರಮದಲ್ಲಿ ಕೃಪಾ ದಿನದ ಚಿಂತನವನ್ನು ಮಂಡಿಸಿ ಗುರುಚರಣ್ ಸರ್ವರನ್ನು ಸ್ವಾಗತಿಸಿದರು. ಶೋಧನ್ ವಂದಿಸಿದರು. ಕೃಪಾ ಎನ್ ಅಭ್ಯಾಗತರನ್ನು ಸಭಾಸದರಿಗೆ ಪರಿಚಯಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೆರವೇರಿದ ಸಾಂಸ್ಕ್ರತಿಕ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ.ವಿ ಇವರು ಹಾಗೂ ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಶಿಕ್ಷಕವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here