ಶಾಲಾ ರಸ್ತೆ ಶ್ರಮದಾನದ ಮೂಲಕ ದುರಸ್ತಿ

0
263

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಉದಯಗಿರಿ ಬಾಂಜತ್ತಡ್ಕ ಶಂಕರನಾರಾಯಣ ಎಲ್.ಪಿ. ಶಾಲೆಯ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚರಿಸಲು ಕಷ್ಟಕರವಾಗಿದೆ. ಇದನ್ನು ಮನಗಂಡು ಸ್ಥಳೀಯ ಯುವಕರ ಸಂಘಟನೆಯಾದ ಭಗತ್ ಸಿಂಗ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ಬಿನ ಸದಸ್ಯರು ಶ್ರಮದಾನ ಮಾಡುವುದರ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿರುತ್ತಾರೆ.
 
 
 
ಇದುವರೆಗೆ ಡಾಮರೀಕರಣವನ್ನು ಕಾಣದ ಈ ರಸ್ತೆಯನ್ನು ಡಾಮರೀಕರಣಗೊಳಿಸಬೇಕಾಗಿ ಕ್ಲಬ್ಬಿನ ಸದಸ್ಯರು ಆಗ್ರಹಪಡಿಸಿರುತ್ತಾರೆ. ಕ್ಲಬ್ಬಿನ ಕಾರ್ಯದರ್ಶಿ ವಸಂತ ಕುಮಾರ್, ರವಿ ಕೈಲಂಕಜೆ, ಭಾಸ್ಕರ, ಚಂದ್ರ ಕೈಲಂಕಜೆ, ರವಿಕ್ರಾಸ್ತ ಕೊಟ್ರುಂಜೆ, ಕೃಷ್ಣ ಬಾಂಜತ್ತಡ್ಕ ಮೊದಲಾದವರು ನೇತೃತ್ವವನ್ನು ವಹಿಸಿದ್ದರು.

LEAVE A REPLY

Please enter your comment!
Please enter your name here