ಶಾಲಾ ಮಂತ್ರಿಮಂಡಲ ರಚನೆ

0
1071

 
ವರದಿ-ಚಿತ್ರ: ಸುನೀಲ್ ಬೇಕಲ್
ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ,ಧರ್ಮಸ್ಥಳದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಗುಪ್ತ ಮತದಾನದ ಮೂಲಕ ಜೂನ್4ರಂದುಚುನಾವಣೆ ನಡೆದು 2016-17ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲ ಜೂನ್11 ರಂದು ಅಸ್ತಿತ್ವಕ್ಕೆ ಬಂದಿತು.
 
 
ಶಾಲಾ ಮುಖ್ಯಮಂತ್ರಿಯಾಗಿಗೌತಮ್ (10ನೇ) ಮತ್ತುಶಾಲಾ ಉಪಮುಖ್ಯಮಂತ್ರಿಯಾಗಿ ಅನಿಕೇತನ್( 9ನೇ) ಅಧಿಕಾರ ಸ್ವೀಕರಿಸಿದರು. ವಿರೋಧ ಪಕ್ಷದ ನಾಯಕಿಯಾಗಿ ಪೂರ್ಣಿಮಾ(9ನೇ) ಆಯ್ಕೆಯಾದರು.
 
 
ಈ ಪ್ರಯುಕ್ತ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಜಿರೆಯಎಸ್.ಡಿ.ಎಂ( ಸಿ.ಬಿ.ಎಸ್.ಇ) ಶಾಲೆಯ ಸಹಶಿಕ್ಷಕಿ ಸವಿತಾ ಇವರು ಆಗಮಿಸಿದ್ದರು. ಅವರು ವಿದ್ಯಾರ್ಥಿ ಸಚಿವ ಸಂಪುಟದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿ ಬಳಿಕ ನಾಯಕನಾದವನು ಮೊದಲು ತಾನು ತನ್ನ ಕಾರ್ಯದಲ್ಲಿ ಬದ್ಧತೆಯನ್ನು ಪಡೆದಿರಬೇಕು ಹಾಗೂ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದರು.
 
 
ಸಭಾಕಾರ್ಯಕ್ರಮದ ಬಳಿಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವಂತಹ ಪ್ರೌಢಶಾಲಾ ವಿಭಾಗದ ಗಾನಸುಧಾ ತಂಡದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿರುವ ಗಾನ ಲಹರಿ ತಂಡದ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಭಜನಾ ಕಾರ್ಯಕ್ರಮ ಮೂಡಿಬಂದಿತು.
 
 
 
9ನೇ ತರಗತಿಯ ಸುಪ್ರೀತಾ ಇವರು ಪಿಟೀಲು ವಾದನದ ಮೂಲಕ ನುಡಿಸಿದ ರಾಷ್ಟ್ರಗೀತೆಯು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಅನ್ವಿತಾ ನಿರೂಪಿಸಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ.ವಿರವರು ಅತಿಥಿಗಳನ್ನು ಸ್ವಾಗತಿಸಿ ಸಭಾಸದರಿಗೆ ಪರಿಚಯಿಸಿದರು. ಸಾನಿಧ್ಯ ಧನ್ಯವಾದ ಸಮರ್ಪಿಸಿದರು. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಶಿಕ್ಷಕವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here