ಶಾಲಾರಂಭ ಸದ್ಯಕ್ಕೆ ಬೇಡ – ಹೆತ್ತವರ ಒಕ್ಕೊರಲ ಅಭಿಪ್ರಾಯ

1
1366


ವಾರ್ತೆ ಅಭಿಯಾನ ಭಾಗ ೧

ಹರೀಶ್‌ ಕೆ.ಆದೂರು.

ಲಾಕ್‌ ಡೌನ್ ೪.೦…ಜಾರಿಯಲ್ಲಿದೆ. ಜೊತೆ ಜೊತೆಗೆ ಕೊರೊನಾ ಭೀತಿ ಎದೆಯೊಳಗೆ ಬೆಚ್ಚಗೆ ಕೂತಿದೆ. ಲಾಕ್‌ ಡೌನ್‌ ಜಾರಿಯಲ್ಲಿದೆಯಾದರೂ ಹಲವು ವಿಚಾರಗಳಿಗೆ ವಿನಾಯ್ತಿಯನ್ನು ಸರಕಾರ ಘೋಷಿಸಿದೆ. ಇದರಿಂದಾಗಿ ಬಹುತೇಕ ವ್ಯವಸ್ಥೆಗಳು ತಮ್ಮ ಸೇವೆಯನ್ನು ಪುನರಾರಂಭಿಸಿವೆ. ಇದೀಗ ಸರಕಾರಿ ಬಸ್‌ ಸಂಚಾರವೂ ಆರಂಭಗೊಂಡಿದ್ದು ಜೂನ್‌ ೧ರಿಂದ ರೈಲು ಯಾನವೂ ಆರಂಭಗೊಳ್ಳಲಿದೆ. ಏತನ್ಮಧ್ಯೆ ಸರಕಾರ ಮುಂದೂಡಿದ್ದ ಎಸ್.ಎಸ್.ಎಲ್.ಸಿ ಹಾಗೂ ಉಳಿಕೆಯಾಗಿದ್ದ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿ ಸಿದ್ದತೆಯನ್ನು ಕೈಗೊಂಡಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ,ಪದವಿ ಪೂರ್ವ ಶಿಕ್ಷಣ ಆರಂಭದ ವಿಚಾರ ಎಲ್ಲರ ಮುಂದೆ ಪ್ರಶ್ನೆಯಾಗಿ ಕಾಡತೊಡಗಿದೆ.ವರ್ಷಂಪ್ರತಿ ಮೇ ಕೊನೆಯ ವಾರದಲ್ಲಿ ಮಾಮೂಲಿಯಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗಗಳ ಶಾಲಾರಂಭ ಭರ್ಜರಿಯಾಗಿಯೇ ನಡೆಯುತ್ತಿತ್ತು. ಇದೀಗ ಕೊರೊನಾ ಸಂಕಟದಿಂದಾಗಿ ʻಶಾಲಾರಂಭʼ ಪ್ರಶ್ನೆಯಾಗಿ ಉಳಿದುಕೊಂಡಿದೆ. ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಹೆತ್ತವರು ಹಿಂಜರಿಯುತ್ತಿದ್ದಾರೆ. ಶಾಲೆಯ ಫೀಸ್‌ ಬೇಕಾದರೆ ತುಂಬುವೆವು ಆದರೆ ಮಕ್ಕಳನ್ನು ಮಾತ್ರ ಈ ಭೀತಿಯ ನಡುವೆ ಶಾಲೆಗೆ ಕಳುಹಿಸೆವು ಎಂದು ಖಡಕ್‌ ಆಗಿಯೇ ಹೇಳತೊಡಗಿದ್ದಾರೆ. ಸರಕಾರ ಶಾಲಾರಂಭದ ವಿಚಾರದಲ್ಲಿ ಇನ್ನಷ್ಟು ಮತ್ತಷ್ಟು ಚಿಂತಿಸಬೇಕೆಂಬುದು ಪ್ರಜ್ಞಾವಂತರ ಅಭಿಪ್ರಾಯ. ಏನೇ ಆದರೂ ಅವಸರದಲ್ಲಿ ಶಾಲೆ ಆರಂಭಿಸುವುದು ಬೇಡವೇ ಬೇಡ ಎಂಬ ಒಕ್ಕೊರಲ ಅಭಿಪ್ರಾಯ ವಿದ್ಯಾರ್ಥಿಗಳ ಹೆತ್ತವರದ್ದು. ಸರಕಾರ, ಶಿಕ್ಷಣ ಇಲಾಖೆ, ಈ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಲೇ ಬೇಕು. ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿಯದೆ ಸ್ವಂತ ನಿರ್ಧಾರ ಕೈಗಳ್ಳಬೇಕಾಗಿದೆ. ಪುಟಾಣಿ ಮಕ್ಕಳ ಬಾಳಲ್ಲಿ ಬೆಳಕು ಮೂಡುವಂತಹ ವ್ಯವಸ್ಥೆಯನ್ನು ಮಾಡುವತ್ತ ಚಿಂತಿಸಬೇಕು. ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪರಸ್ಪರ ಮುಟ್ಟದೆ ಇರುವಂತಹುದು, ಸ್ವಚ್ಛತೆ ಕಾಪಾಡುವುದು ಹೇಳಿದಷ್ಟು ಸುಲಭದ ವಿಷಯವಲ್ಲ. ಪುಟಾಣಿ ಮಕ್ಕಳಂತೂ ಒಬ್ಬರನ್ನೊಬ್ಬರು ಬಿಟ್ಟು ಕೂರುವವರಲ್ಲ. ಹಂಚಿ ತಿನ್ನದೆ ಇರುವವರೂ ಅಲ್ಲ… ಕೈ ಕೈ ಹಿಡಿದು ಆಡುವ ಎಳೆಯ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿದಷ್ಟೂ ಸಾಲದು. ಒಂದು ಮಗುವಿಗೆ ಬರುವ ಸೋಂಕು ಇಡೀ ತರಗತಿ, ತನ್ಮೂಲಕ ಶಾಲೆಯನ್ನಾವರಿಸುವುದಷ್ಟೇ ಅಲ್ಲ ಸಾಮುದಾಯಿಕ ರೋಗ ಭೀತಿಗೆ ಕಾರಣವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಶಾಲಾರಂಭದ ಪ್ರಕ್ರಿಯೆಯ ಬಗ್ಗೆ ಖಂಡಿತವಾಗಿಯೂ ಶಿಕ್ಷಣ ಇಲಾಖೆ ಮತ್ತೆ ಮತ್ತೆ ಚಿಂತೆ ಮಾಡುವ ಅವಶ್ಯಕತೆಯಿದೆ.

ವಾರ್ತೆ.ಕಾಂ ಈ ಬಗ್ಗೆ ಹೆತ್ತವರ ಅಭಿಪ್ರಾಯ ಸಂಗ್ರಹ ಮಾಡಿದೆ. ಅಭಿಪ್ರಾಯದ ಯಥಾ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಗೆ, ಸರಕಾರಕ್ಕೆ ನೀಡುವ ಕಾರ್ಯ ವಾರ್ತೆ.ಕಾಂ ನಿಂದ ನಡೆಯಲಿದೆ. ಅಭಿಪ್ರಾಯ ಸಂಗ್ರಹದಲ್ಲಿ ವ್ಯಕ್ತವಾದ ವಿಚಾರಗಳನ್ನು ಇದೀಗ ಪ್ರಕಟಿಸುತ್ತಿದ್ದೇವೆ. ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಅವಕಾಶವಿದೆ. ಶಾಲಾರಂಭದ ಕುರಿತಾದ ನಿಮ್ಮ ಅಭಿಪ್ರಾಯಗಳನ್ನು ವಾರ್ತೆ.ಕಾಂ ವಾಟ್ಸ್‌ ಆಪ್‌ ನಂಬರ್‌ ೯೪೮೩೪ ೫೫೯೨೨ಗೆ ವಾಟ್ಸ್‌ ಆಪ್‌ ಮೂಲಕ ಮಾತ್ರ ಕಳುಹಿಸಿ.

ಹೆತ್ತವರ ಅಭಿಪ್ರಾಯಗಳು ಹೀಗಿವೆ ನೋಡಿ…

Advertisement

“ಶಾಲೆಗಳನ್ನು ಶುರುಮಾಡುವುದು ಸಮಂಜಸವಲ್ಲ. ಆದಷ್ಟು ಇ- ಮಾಧ್ಯಮದ ಮೂಲಕ ಹಳ್ಳಿ ಹಳ್ಳಿಗಳ ಮೂಲೆಯನ್ನೂ ತಲುಪುವಂತೆ ಮಾಡಲು ಸರ್ಕಾರಕ್ಕೆ ಸದಾವಕಾಶ.”

ಕೆ.ಎಂ.ಆರ್.‌ ಕುಗ್ವೆ, ಸಾಗರ/ಬೆಂಗಳೂರು.

“ಈ ಬಗ್ಗೆ ಪಾಲಕರು ಚಿಂತಿಸಬೇಕು.ಆದರೂ ಜುಲೈ ವರೆಗೆ ಕಾಯುವುದು ಒಳ್ಳೆಯದು.”

-ಶಂಕರ್‌ ಭಟ್‌, ಬಾಲ್ಯ, ವೇಣೂರು, ದ.ಕ.

ಯಕ್ಷ ಪ್ರಶ್ನೆ:”ಶಾಲೆಗಳು ಈಗ ತೆರೆದರೆ ಅನುಕೂಲವೇ ಅನನು ಕೂಲವೇ ಎಂಬುದೇ ಜಿಜ್ಞಾಸೆ. ಭವಿಷ್ಯದ ನಿಟ್ಟಿನಲ್ಲಿ ಯೋಚಿಸಿದರೆ ವಿದ್ಯಾರ್ಥಿಗಳು ವಿದ್ಯಾ ವಂಚಿತರಾಗುವ ವಿದ್ಯಮಾನ ವೇದ್ಯವಲ್ಲ.ಆದರೆ ಪರಿಸ್ಥಿತಿ ಯ ಅವಲೋಕನ ಮಾಡುವಾಗ ಶಾಲಾರಂಭದಿಂದಾಗಿ ತೊಂದರೆಗಳುಂಟಾದರೆ ಭಾವಿಸಿದ ಭವಿಷ್ಯವು ನಿರ್ನಾಮವಾದರೂ ಅಚ್ಚರಿಯಲ್ಲ. ಎಲ್ಲಿ ವರೆಗೆ ಹಿರಿಯರೆನಿಸಿದ ಜನರು ತಮ್ಮ ತಮ್ಮ ರಕ್ಷಣೆಗೆ ಮಹತ್ವ ಕೊಡದೆ ಅಜಾಗರೂಕರಾಗಿ ಇರುತ್ತಾರೋ ಅಲ್ಲಿ ತನಕ ಅಪಾಯ ತಪ್ಪಿದ್ದಲ್ಲ.

ಆದ ಕಾರಣ ಪ್ರಾಯಃ ಶಾಲೆ ಪ್ರಾರಂಭ ಮಾಡಿದರೆ ದೊಡ್ಡವರೇ ಸೂಜಿಕಲ್ಲಾಗುವ ಸಾಧ್ಯತೆ ಇಲ್ಲದಿಲ್ಲ.ಶಾಲೆ ಆರಂಭ ಮಾಡದಿದ್ದರೂ ಇದು ಅಸಂಭವವಲ್ಲ.ಕನಿಷ್ಠ ಪಕ್ಷ ಚಿಕ್ಕ ಮಕ್ಕಳಾದರೂ ಸೌಖ್ಯ ವಾಗಿ ಮನೆಯಲ್ಲೇ ಇರ ಬಹುದು. ಆದ ಕಾರಣ ಅಂಕಿ ಅಂಶ ಪ್ರಕಾರ ಕೊರೋನಾ ದಾಳಿ ಇಳಿಮುಖವಾಗಲು ಕಾಯೋಣ‌.

ಅಷ್ಟರಲ್ಲಿ ಲಸಿಕೆ ಬಂದರೂ ಬರ ಬಹುದು.ಎಲ್ಲರಿಗೂ ಕೊಟ್ಟರಾಯಿತು. ಜವಾಬ್ದಾರಿ ಅರಿತ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ಆರಂಭ ಮಾಡಿದರೆ ಪರವಾಗಿಲ್ಲ.ಯಾಕೆಂದರೆ ಅವರ ಪರಿವೆ ಅವರಿಗೆ ಇರಿಸಿಕೊಳ್ಳುವ ಹರಯವದು.ಅಧಿಕ ಪ್ರಸಂಗ ಮಾಡಿದರೆ ಅನುಭವಿಸುತ್ತಾರೆ.
ಆದ ಕಾರಣ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಯ ಆರಂಭ ಈಗ ಬೇಡ ಅನಿಸುತ್ತದೆ.

ಯಕ್ಷ ಪ್ರಶ್ನೆ :”ಶಾಲೆಗಳು ಈಗ ತೆರೆದರೆ ಅನುಕೂಲವೇ ಅನನು ಕೂಲವೇ ಎಂಬುದೇ ಜಿಜ್ಞಾಸೆ. ಭವಿಷ್ಯದ ನಿಟ್ಟಿನಲ್ಲಿ ಯೋಚಿಸಿದರೆ ವಿದ್ಯಾರ್ಥಿಗಳು ವಿದ್ಯಾ ವಂಚಿತರಾಗುವ ವಿದ್ಯಮಾನ ವೇದ್ಯವಲ್ಲ.ಆದರೆ ಪರಿಸ್ಥಿತಿ ಯ ಅವಲೋಕನ ಮಾಡುವಾಗ ಶಾಲಾರಂಭದಿಂದಾಗಿ ತೊಂದರೆಗಳುಂಟಾದರೆ ಭಾವಿಸಿದ ಭವಿಷ್ಯವು ನಿರ್ನಾಮವಾದರೂ ಅಚ್ಚರಿಯಲ್ಲ. ಎಲ್ಲಿ ವರೆಗೆ ಹಿರಿಯರೆನಿಸಿದ ಜನರು ತಮ್ಮ ತಮ್ಮ ರಕ್ಷಣೆಗೆ ಮಹತ್ವ ಕೊಡದೆ ಅಜಾಗರೂಕರಾಗಿ ಇರುತ್ತಾರೋ ಅಲ್ಲಿ ತನಕ ಅಪಾಯ ತಪ್ಪಿದ್ದಲ್ಲ.

ಆದ ಕಾರಣ ಪ್ರಾಯಃ ಶಾಲೆ ಪ್ರಾರಂಭ ಮಾಡಿದರೆ ದೊಡ್ಡವರೇ ಸೂಜಿಕಲ್ಲಾಗುವ ಸಾಧ್ಯತೆ ಇಲ್ಲದಿಲ್ಲ.ಶಾಲೆ ಆರಂಭ ಮಾಡದಿದ್ದರೂ ಇದು ಅಸಂಭವವಲ್ಲ.ಕನಿಷ್ಠ ಪಕ್ಷ ಚಿಕ್ಕ ಮಕ್ಕಳಾದರೂ ಸೌಖ್ಯ ವಾಗಿ ಮನೆಯಲ್ಲೇ ಇರ ಬಹುದು. ಆದ ಕಾರಣ ಅಂಕಿ ಅಂಶ ಪ್ರಕಾರ ಕೊರೋನಾ ದಾಳಿ ಇಳಿಮುಖವಾಗಲು ಕಾಯೋಣ‌.

ಅಷ್ಟರಲ್ಲಿ ಲಸಿಕೆ ಬಂದರೂ ಬರ ಬಹುದು.ಎಲ್ಲರಿಗೂ ಕೊಟ್ಟರಾಯಿತು.
ಜವಾಬ್ದಾರಿ ಅರಿತ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ಆರಂಭ ಮಾಡಿದರೆ ಪರವಾಗಿಲ್ಲ.ಯಾಕೆಂದರೆ ಅವರ ಪರಿವೆ ಅವರಿಗೆ ಇರಿಸಿಕೊಳ್ಳುವ ಹರಯವದು.ಅಧಿಕ ಪ್ರಸಂಗ ಮಾಡಿದರೆ ಅನುಭವಿಸುತ್ತಾರೆ. ಆದ ಕಾರಣ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಯ ಆರಂಭ ಈಗ ಬೇಡ ಅನಿಸುತ್ತದೆ.”

-ಡಾ.ಸುರೇಶ್ ನೆಗಳಗುಳಿ, ಸಾಹಿತಿಗಳು, ವೈದ್ಯರು,ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ
ಮಂಗಳೂರು
.

“ಶಾಲೆಗಳನ್ನು ತೆರೆಯಲು ಅವಸರ ಬೇಡ. COVID19 ಖಾಯಿಲೆಯ ಪರಿಪೂರ್ಣ ಸ್ವರೂಪದ ಅಂದಾಜು ಇನ್ನೂ ಸರಿಯಾಗಿ ಸಿಕ್ಕಿಲ್ಲ. ಮಕ್ಕಳನ್ನು, ವೃದ್ಧರನ್ನು ರಕ್ಷಿಸುವುದು ಆದ್ಯತೆ ಈಗ.”

-‌ ಡಾಕ್ಟರ್ ಪ್ರಸನ್ನ ಕಾಕುಂಜೆ, ಎಂ. ಡಿ. (ಆಯು)
ಕಾಕುಂಜೆ ಆಯುರ್ವೇದ ಆರೋಗ್ಯ ಧಾಮ, ಜಿ.ವಿ.ಪೈ ಆಸ್ಪತ್ರೆ,
ಮೂಡುಬಿದಿರೆ.

” ಖಂಡಿತವಾಗಿಯೂ ಈಗ ಶಾಲಾರಂಭ ಬೇಡವೇ ಬೇಡ. ಸೆಪ್ಟಂಬರ್‌ ತನಕವಾದರೂ ಮುಂದೂಡುವುದು ಒಳಿತು.”
-ಕೃಪಾ ಎಸ್‌, ವಿಟ್ಲ, ದ.ಕ.

“ದಯವಿಟ್ಟು ತರಾತುರಿಯಲ್ಲಿ ಶಾಲೆಗಳನ್ನು ತೆರೆಯಬೇಡಿ. ಸ್ವಲ್ಪ ತಡವಾದರೂ ತೊಂದರೆ ಇಲ್ಲ. ಈಗಾಗಳೇ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ತಡವಾಗಿ ಪ್ರಾರಂಭಿಸುವುದರೊಂದಿಗೆ ಈ ವರ್ಷ ಮಾತ್ರ ಪಠ್ಯ ಪುಸ್ತಕದ ಪಾಠಗಳನ್ನು ಕಡಿತಗೊಳಿಸಿ, ಸರಕಾರದ ಅತೀ ಅಗತ್ಯದ ರಜೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನದಲ್ಲಿ(ಆದಿತ್ಯವಾರ ಮದ್ಯಾಹ್ನ ದವರೆಗೆ ) ತರಗತಿ ನಡೆಸುವುದರೊಂದಿಗೆ ಶಿಕ್ಷಕರ ರಕ್ಷಕರ ಸಂಪೂರ್ಣ ಸಹಕಾರದೊಂದಿಗೆ ಮತ್ತೆ ಶಾಲೆಗಳನ್ನು ಪುನರಾರಂಭಿಸಬಹುದು.”

ಮುಹಮ್ಮದ್ ನಾಸಿರ್ ಬೊಳ್ಳಾಯಿ, ಸಜೀಪ ಮೂಡ. ಬಂಟ್ವಾಳ.

“ವಾರ್ತೆ. ಕಾಂ ನ ಮುಖ್ಯಸ್ಥರಾದ ಹರೀಶ್ ಆದೂರ್ ಅವರಿಗೆ ಪದ್ಮಶ್ರೀ ಮಾಡುವ ಪ್ರಣಾಮ ಗಳು .ಜೂನ್ ತಿಂಗಳ ಲ್ಲಿ ಎಲ್..ಕೆ.ಜಿಯಿಂದ 7. ನೇ ತರಗತಿ ಮಕ್ಕಳಿಗೆ ಶಾಲೆ ಆರಂಭವಾಗುದಕ್ಕೆ ನನ್ನ ವಿರೋಧವಿದೆ . ಏಕೆಂದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುದರಿಂದ ಬೇಡ ಎಂದು ನನ್ನ ಅಭಿಪ್ರಾಯ. ಹಾಗು ಸರಕಾರ ಶಾಲೆ ಮಾಡಲೇ ಬೇಕಾದ ಪಕ್ಷದಲ್ಲಿ ಮಕ್ಕಳಿಗೆ ಮಾಸ್ಕ ಧರಿಸಿ ಸ್ವಚ್ಚತೆಯ ಮಾಹಿತಿ ಕೊಟ್ಟು ಪ್ರತಿ ಶಾಲೆಗೆ Sanitizer ನ್ನು ಒದಗಿಸುವ ಕೆಲಸ ಮಾಡಲೇ ಬೇಕು. ಹಾಗು ಆರೋಗ್ಯದ ಕಾಳಜಿಗೆ ಪ್ರತೀ ಶಾಲೆಗೆ ವೈದ್ಯರನ್ನು ನೇಮಿಸ ಬೇಕು. ಹಾಗಿದ್ದರೆ ಮಾತ್ರ ಶಾಲೆ ಪ್ರಾರಂಭವಾಗಲಿ ಇಲ್ಲವಾದರೆ ಖಂಡಿತಾ ಶಾಲೆ ಪ್ರಾರಂಭಿಸುವುದು ಬೇಡ. ಇದು ನನ್ನ ಅಭಿಪ್ರಾಯ.”

ಪದ್ಮಶ್ರೀ ಭಟ್ ನಿಡ್ಡೋಡಿ, ಪತ್ರಕರ್ತೆ.

“ಈಗಿನ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ತುಂಬಾ ಆತಂಕದ ವಿಷಯ …ದಯವಿಟ್ಟು ಆಗಸ್ಟ್ ನಂತರ ಶಾಲೆಯನ್ನು ಪ್ರಾರಂಭಿಸಿದರೆ ಒಳ್ಳೆಯದು… ಇಡೀ ದಿನ ಸಣ್ಣ ಮಕ್ಕಳು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಕಷ್ಟ… ದಯವಿಟ್ಟು ಸ್ವಲ್ಪ ದಿನ ಆದ ಮೇಲೆ ತರಗತಿಗಳನ್ನು ಸ್ಟಾರ್ಟ್ ಮಾಡುವುದು ಉತ್ತಮ.

ಸುಧಾಕರ ಡಿ ಪೂಜಾರಿ ಪಣಪಿಲ‌, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ
ಸ ಹಿ ಪ್ರಾಥಮಿಕ ಶಾಲೆ ಅಳಿಯೂರು.

“ಕೊರೊನಾ ಆರ್ಭಟ ಇನ್ನೂ ಮುಂದುವರಿದಿರುವಾಗ ಶಾಲೆ ಆರಂಭಿಸಿದರೆ ಕಷ್ಟವೆ. ಜೂನ್ ಕೊನೆಯ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯೂ ಇರುವುದರಿಂದ ಜುಲೈಯಲ್ಲಿ ಆರಂಭಿಸಬಹುದು. ಅಕ್ಟೋಬರ್ ರಜೆ ಕ್ಯಾನ್ಸಲ್ ಮಾಡಬಹುದು. ಇದು ಸಲಹೆಯಷ್ಟೆ.”
-ಮಹೇಶ್‌ ಪಟ್ಟಾಜೆ, ಪತ್ರಕರ್ತ

“ಇದು ಯೋಗ್ಯ ಸಮಯವೇ ಅಲ್ಲ. ಸಾಮುದಾಯಿಕ ರೋಗ ಭೀತಿಗೆ ಇದು ನಾಂದಿಯಾಗುವ ಸಾಧ್ಯತೆಯಿದೆ. ಆಗಸ್ಟ್‌ ಮೊದಲ ವಾರದಲ್ಲಿ ಆರಂಭವಾದರೆ ಸಾಕು.”
-ಕಿರಣ್‌ ಕುಮಾರ್‌, ಮೂಡುಬಿದಿರೆ/ಮೈಸೂರು.

“ಲಾಕ್‌ ಡೌನ್‌ ಸಡಿಲಿಕೆಯ ನಂತರ ಕೊರೊನಾ ರೋಗ ಭೀತಿ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಶಾಲಾರಂಭ ಸೂಕ್ತವಲ್ಲ. ಶಾಲೆಯಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಕಷ್ಟಸಾಧ್ಯ. ಇಷ್ಟು ದಿನ ಕೊರೊನಾ ವಿರುದ್ಧ ಸಮರ ಸಾರಿ ಕೊನೆಯ ಹಂತದಲ್ಲಿ ಆಯುಧ ಕೆಳಗಿಟ್ಟು ಶರಣಾದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಶಾಲಾರಂಭ ಮುಂದೂಡುವುದು ಉತ್ತಮ”

-ಅಕ್ಷಯ್‌

“ನನ್ನ ಅಭಿಪ್ರಾಯ ಕೋರೋನ ರೋಗದ ಹಾವಳಿ ಜಾಸ್ತಿ ಇರುವುದರಿಂದ ಇಷ್ಟು ಬೇಗ ಶಾಲೆಗಳನ್ನು ತೆರೆಯುವುದು ಬೇಡ .”

-ಸುಶಾಂತ್ ಕರ್ಕೇರ ಮಾರೂರು .

ಚಿತ್ರಗಳು: ಸಾಂದರ್ಭಿಕ, ಅಂತರ್ಜಾಲ ಕೃಪೆ

1 COMMENT

  1. Makkalu safe agi maneyalli erali .shala aramba ega beda .makkalu mask hakalu oppuva chance thumba kadime .jivakintha doddadu yavudu ella.saryada nirdara thegedu kolluvudu olledu .makkala jivada jothe chellata beda .

LEAVE A REPLY

Please enter your comment!
Please enter your name here