ಶಾಲಾರಂಭ ಸದ್ಯಕ್ಕೆ ಬೇಡ – ಹೆತ್ತವರ ಒಕ್ಕೊರಲ ಅಭಿಪ್ರಾಯ

0
1745


ವಾರ್ತೆ ಅಭಿಯಾನ ಭಾಗ ೩

ಹರೀಶ್‌ ಕೆ.ಆದೂರು.

ರಾಜ್ಯದಲ್ಲಿ ಅಕ್ಷರಶಃ ಕೊರೊನಾ ರುದ್ರ ತಾಂಡವವಾಡುತ್ತಿದೆ. ಏತನ್ಮಧ್ಯೆ ಶಿಕ್ಷಣ ಇಲಾಖೆ ಶಾಲಾರಂಭಕ್ಕೆ ಸಿದ್ಧತೆ ಕೈಗೊಳ್ಳುತ್ತಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಭೀತಿಯಲ್ಲಿದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆ ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ ಕ್ರೋಢೀಕರಿಸಿ, ವಸ್ತು ಸ್ಥಿತಿಯನ್ನು ಸರಕಾರಕ್ಕೆ ಸಂಬಂಧಪಟ್ಟ ಇಲಾಖೆಗೆ ತಲುಪಿಸುವ ನಿಟ್ಟಿನಲ್ಲಿ ವಾರ್ತೆ.ಕಾಂ ಅಭಿಯಾನವೊಂದನ್ನು ಕೈಗೆತ್ತಿಕೊಂಡಿದೆ. ಶಾಲಾರಂಭದ ವಿಚಾರದಲ್ಲಿ ಸಾಕಷ್ಟು ಅಭಿಪ್ರಾಯಗಳು ಕ್ರೋಢೀಕರಣಗೊಂಡಿದ್ದು ಕಳೆದೆರಡು ಸಂಚಿಕೆಗಳಲ್ಲಿ ಅವು ಪ್ರಕಟಗೊಂಡಿವೆ. ಇದೀಗ ಇನ್ನೊಂದಷ್ಟು ಮಾಹಿತಿಗಳ ಜೊತೆ ಅಭಿಪ್ರಾಯ ತಿಳಿಸುತ್ತಿದ್ದೇವೆ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಶಾಲಾರಂಭ ಬೇಕೇ ಬೇಡವೇ ಎಂಬ ವಿಚಾರದಲ್ಲಿ ಹೆತ್ತವರ ದೂರವಾಣಿ ಕರೆಗಳು ಬರುತ್ತಿವೆ.ವಾಟ್ಸ್‌ ಆಪ್‌ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೆತ್ತವರು ತಮ್ಮ ಮಕ್ಕಳನ್ನು ಸದ್ಯದ ಮಟ್ಟಿಗಂತೂ ಶಾಲೆಗೆ ಕಳುಹಿಸುವ ವಿಚಾರದಲ್ಲಿ ಇಲ್ಲವೇ ಇಲ್ಲ. ಅನೇಕ ಮಂದಿ ಶಿಕ್ಷಕ, ಶಿಕ್ಷಕಿಯರು ಶಾಲಾರಂಭವನ್ನು ವಿಳಂಬ ಮಾಡುವುದೇ ಉತ್ತಮ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ಎಂಬ ಪೆಡಂಭೂತ ಅಕ್ಷರಶಃ ಜನ ಜೀವನವನ್ನೇ ಅಲುಗಾಡಿಸುತ್ತಿದೆ… ಶಿಕ್ಷಣ ಇಲಾಖೆ ಗ್ರಾಮೀಣ ಭಾಗಗಳ ಶಾಲೆ( ಸರಕಾರಿ/ಖಾಸಗೀ)ಯನ್ನು ಖುದ್ದು ಅವಲೋಕಿಸಿ, ಅಲ್ಲಿನ ಸಾಧ್ಯತೆಗಳ ಸ್ಪಷ್ಟ ಅನುಭವ ಪಡೆದು ಶಾಲಾರಂಭದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದು ಉತ್ತಮ.ಎ.ಸಿ. ಕೊಠಡಿಯೊಳಗೆ ಕುಳಿತು, ಹೈಟೆಕ್‌ ಸಿಟಿಗಳಲ್ಲಿದ್ದ ವ್ಯವಸ್ಥೆಯನ್ನು ಪರಿಗಣಿಸಿ ಶಾಲಾರಂಭಕ್ಕೆ ಮುನ್ನುಡಿ ಬರೆಯುವುದು ಸಮಂಜಸವಲ್ಲ. ಸಣ್ಣ ಸಣ್ಣ ಹಳ್ಳಿಗಳಲ್ಲಿ, ತಾಲೂಕು ಕೇಂದ್ರಗಳಲ್ಲಿರುವ ಶಾಲೆಗಳ ಸ್ಥಿತಿಗತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಇದು ವಾರ್ತೆ.ಕಾಂ ನ ಆಶಯವೂ ಹೌದು.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಸರಕಾರೀ ಶಾಲೆಗಳನ್ನು ಕೊರೊನಾ ಕ್ವಾರಂಟೈನ್‌ಗಳನ್ನಾಡಿ ಮಾಡಲಾಗಿದೆ. ಕೆಲವೊಂದು ಇಂತಹ ಕ್ವಾರಂಟೈನ್‌ ನಲ್ಲಿ ದಾಖಲಾಗಿರುವವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ರೋಗಿಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಹೀಗೆಲ್ಲಾ ಇರುವಾಗ ಇಂತಹ ಕ್ವಾರಂಟೈನ್‌ ಕೇಂದ್ರಗಳಾಗಿ ಪರಿವರ್ತೆಯಾಗಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಒಂದೊಮ್ಮೆ ಈಗ ಶಾಲಾ ಕಾಲೇಜುಗಳನ್ನು ಇಲಾಖೆ ಪ್ರಾರಂಭ ಮಾಡಿದ್ದೇ ಆದಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರೇ ಸಿದ್ಧರಿಲ್ಲ ಎಂಬ ಮಾಹಿತಿಯೊಂದು ಪೋಷಕರ ವೇದಿಕೆ ನಡೆಸಿದ ಸಮೀಕ್ಷೆಯಲ್ಲೂ ಹೊರಬಿದ್ದಿದೆ. ಈ ಮಾಹಿತಿಯ ಪ್ರಕಾರ ಈಗಲೇ ಶಾಲೆ ತೆರೆದರೆ ೯೨ಶೇಕಡಾ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸಿಲ್ಲ.

Advertisement
ಸಾಂದರ್ಬಿಕ ಚಿತ್ರ ಅಂತರ್ಜಾಲ ಕೃಪೆ

“ದಯವಿಟ್ಟು ಶಾಲೆಗಳ ಆರಂಭದ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳಬೇಡಿ. ಈ ನಿರ್ಧಾರ ಮಕ್ಕಳ ಮತ್ತು ಮನೆಯವರ ಜೀವದೊಂದಿಗೆ ಚೆಲ್ಲಾಟವಾಡುವಂತಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಕ್ಕಳಿಂದ ಅಸಾಧ್ಯ. ಕೊರೊನಾ ಮಹಾಮಾರಿ ಇಡೀ ಸಮುದಾಯವನ್ನು ತಲುಪಿದಂತಾಗುವುದರಲ್ಲಿ ಎರಡು ಮಾತಿಲ್ಲ. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಚಿಂತಿಸಲಿ.”
-ಶಶಿಧರ್‌ ದುಬೈ

“ಸದ್ಯಕ್ಕೆ ಶಾಲಾ ಆರಂಭ ಬೇಡವೇ ಬೇಡ ಎನ್ನುತ್ತಾರೆ ಚಿತ್ರಕಲಾ ಶಿಕ್ಷಕ, ಚಲನಚಿತ್ರ ನಿರ್ದೇಶಕ ಥಾಮಸ್‌ ಎಂ.ಎಂ. ಇದಕ್ಕೆ ಅವರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ಅವುಗಳೆಂದರೆ, ೧. ಕೊರೊನಾ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ೨. ಎಲ್ಲವೂ ತಿಳಿದಿರುವ ಹಿರಿಯರೇ ಸರಿಯಾಗಿ ಮಾಸ್ಕ್‌ ಹಾಗುವುದಿಲ್ಲ…ಇನ್ನು ಪೂರ್ಣಾವಧೀ ಮಕ್ಕಳು ಮಾಸ್ಕ್‌ ಧರಿಸುವಂತೆ ಒತ್ತಡ ಹೇರಲು ಸಾಧ್ಯವೇ?, ೩.ಮಕ್ಕಳನ್ನು ನಿಯಂತ್ರಣದಲ್ಲಿ ಇಡುವುದು ಸುಲಭದ ಕೆಲಸ ಅಲ್ಲ, ೪. ಮಕ್ಕಳಗೆ ರೋಗ ಶೀಘ್ರ ಹರಡುವ ಸಾಧ್ಯತೆಯಿದೆ, ೫. ಮಕ್ಕಳಿಂದ ರೋಗ ಸಾಮುದಾಯಿಕವಾಗಿ ಹರಡುವ ಸಾಧ್ಯತೆಗಳಿವೆ. ಒಂದೊಂದು ತರಗತಿಗಳಲ್ಲೂ ೪೦ಕ್ಕೂ ಅಧಿಕ ಮಕ್ಕಳಿದ್ದಾರೆ, ಇಡೀ ಶಾಲೆಯನ್ನು ಅವಲೋಕಿಸಿದರೆ ಎಷ್ಟು ಮಕ್ಕಳಿರಬಹುದು…ಅವರಿಂದ ಸಮಾಜಕ್ಕೆ ರೋಗ ಹರಡುವ ಭೀತಿ. ೬. ಇನ್ನು ಶಾಲಾ ಬಸ್ಸುಗಳಲ್ಲಿ ಲೆಕ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೇರಿ ತರವು ಕಾರ್ಯ ಆಗುತ್ತಿದೆ ಈ ಕಾರಣಕ್ಕಾಗಿ ಆತುರದ ನಿರ್ಧಾರ ಮಾಡಿ ಶಾಲೆ ಆರಂಭ ಬೇಡವೇ ಬೇಡ. ರೋಗಕ್ಕೆ ಸೂಕ್ತ ಲಸಿಕೆ ಲಭ್ಯವಾದ ನಂತರವೇ ಶಾಲೆ ಆರಂಭವಾದರೆ ಒಳಿತು.

LEAVE A REPLY

Please enter your comment!
Please enter your name here