ಶಾಲಾರಂಭ ಸದ್ಯಕ್ಕೆ ಬೇಡ – ಹೆತ್ತವರ ಒಕ್ಕೊರಲ ಅಭಿಪ್ರಾಯ

0
1302


ವಾರ್ತೆ ಅಭಿಯಾನ ಭಾಗ ೨

ಹರೀಶ್‌ ಕೆ.ಆದೂರು.

“ಮೊಟ್ಟಮೊದಲನೆಯದಾಗಿ ಈ ಅಭಿಯಾನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ವಾರ್ತೆ.ಕಾಂ ಕೃತಜ್ಞತೆ ಸಲ್ಲಿಸುತ್ತದೆ. ಅಭೂತಪೂರ್ವವಾಗಿ ಅಭಿಪ್ರಾಯ ಹಂಚಿಕೊಂಡಿದ್ದೀರಿ.ಅಭಿನಂದನೆಗಳು”


ಹೌದು.ವಾರ್ತೆ.ಕಾಂ ಕೊರೊನಾ ಭೀತಿಯ ಹಿನ್ನಲೆಯಲ್ಲಿ ಶಾಲಾರಂಭದ ವಿಚಾರದಲ್ಲಿ ಧ್ವನಿಯೆತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಿರಂತರ ಹೆತ್ತವರ ದೂರವಾಣಿ ಕರೆಗಳು ಬರುತ್ತಿವೆ.ವಾಟ್ಸ್‌ ಆಪ್‌ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೆತ್ತವರು ತಮ್ಮ ಮಕ್ಕಳನ್ನು ಸದ್ಯದ ಮಟ್ಟಿಗಂತೂ ಶಾಲೆಗೆ ಕಳುಹಿಸುವ ವಿಚಾರದಲ್ಲಿ ಇಲ್ಲವೇ ಇಲ್ಲ. ಅನೇಕ ಮಂದಿ ಶಿಕ್ಷಕ, ಶಿಕ್ಷಕಿಯರು ಶಾಲಾರಂಭವನ್ನು ವಿಳಂಬ ಮಾಡುವುದೇ ಉತ್ತಮ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ಎಂಬ ಪೆಡಂಭೂತ ಅಕ್ಷರಶಃ ಜನ ಜೀವನವನ್ನೇ ಅಲುಗಾಡಿಸುತ್ತಿದೆ…

“ನನ್‌ ಅಭಿಪ್ರಾಯವೂ ಶಾಲೆ ಈಗ ಬೇಡ. ಜೀವಕ್ಕಿಂತ ಎರಡು ಅಥವಾ ನಾಲ್ಕು ತಿಂಗಳ ಪಾಠ ದೊಡ್ಡದಲ್ಲ”

Advertisement

-ವೆಂಕಟ ಕೃಷ್ಣ ಎಂ.ಎನ್.‌

“ಕೊರೊನಾ ಸಮಸ್ಯೆ ಕಡಿಮೆ ಆಗುವ ತನಕ ಎಷ್ಟು ಸಮಯ ಆದ್ರೂ ಚಿಂತಿಲ್ಲ…ಶಾಲೆ ಆರಂಭ ಬೇಡವೇ ಬೇಡ. ಮಕ್ಕಳ ಈ ಹಂತದ ಆರೋಗ್ಯ ಬೆಳವಣಿಗೆ ತುಂಬಾ ಮುಖ್ಯ. ಕೊರೊನಾ ಮಾರಿಯಿಂದ ಆರೋಗ್ಯವೂ ಇಲ್ಲ. ಭವಿಷ್ಯವೂ ಇಲ್ಲ ಎಂಬಂತಾಗಬಹುದು.”

-ಪ್ರಭಾ ಜಿ ಭಟ್‌

“ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಗಾಗಿ ಸರಕಾರ ಶಾಲಾಕಾಲೇಜುಗಳನ್ನು ಪುನರಾರಂಭಿಸುವುದಾದಲ್ಲಿ‌ ಮುಂದೆ ಅದಕ್ಕೆ ಭೀಕರವಾದ ಸಮಸ್ಯೆ ಎದುರಾಗಲಿದೆ. ಕೋವಿದ್ -19 ಕ್ಕೆ ಪರಿಣಾಮಕಾರಿ ತಡೆ (ಔಷಧಿ) ದೊರಕುವ ತನಕ ಶಾಲಾಕಾಲೇಜುಗಳನ್ನು ಪುನರಾರಂಭಿಸುವುದನ್ನು ವಿರೋಧಿಸಲೇ ಬೇಕಿದೆ.ಆದರೂ ಕೆಲವೊಂದು ಪಾಲಕರು ಶಾಲಾಕಾಲೇಜುಗಳ ಪುನರಾರಂಭಕ್ಕೆ ಆಗ್ರಹಿಸುತ್ತಿರುವುದು ಗಮನಕ್ಕೆ ಬಂದಾಗ ಖೇದವುಂಟಾಗುತ್ತಿದೆ. ವಾತ್ಸಲ್ಯ ವಿರಹಿತ ಮಕ್ಕಳ ಪೋಷಕರೆಂದು ಅಂತಹವರನ್ನು ವರ್ಗೀಕರಿಸಿದರೆ ತಪ್ಪಾಗಲಾರದು.ಆ ವರ್ಗಕ್ಕೆ ಮಕ್ಕಳ ಆರೋಗ್ಯ, ಪ್ರಾಣಗಳಿಗಿಂತ ಮುಖ್ಯ ಮಕ್ಕಳನ್ನು ಆದಷ್ಟೂ ಬೇಗ ದುಡಿಯುವ ಯಂತ್ರಗಳನ್ನಾಗಿ ತಯಾರಿಸುವ ತುರಾತುರಿ ಎದ್ದು ಕಾಣುತ್ತಲಿದೆ.ಧಿಕ್ಕಾರವಿರಲಿ ಅಂತಹಾ ನೀಚಾತಿನೀಚ ಮನೋಸ್ಥಿತಿಗಳಿಗೆ.”
-ಎಲ್.ಬಿ.ಪೆರ್ನಾಜೆ

“ಸರಿಯಾಗಿ ಬರೆದಿದ್ದೀರಿ. ಮಕ್ಕಳು ಸರಿಯಾಗಿ ಮಾತಾಡೋದಕ್ಕೆ ಮೊದಲೇ ಅವರ ಬಾಲ್ಯವನ್ನು ಕಸಿದು ಶಲೆಗೆ ಹಾಕುವ ಮಾತಾ ಪಿತೃಗಳು.
ರಜೆ ಬಂದರೆ ಆ ಕ್ಲಾಸ್ ಈ ಕ್ಲಾಸ್ ಎಂದು ಅವರ ಮೇಲೆ ಮತ್ತೊಂದಿಷ್ಟು ಹೊರೆ ಹೇಳಿದರೆ ಕಾಲ ಬದಲಿದೆ ನಿಮ್ಮ ಕಾಲ ಅಲ್ಲ ಎಂಬ ಮಾತು.
ಕಾಲ ಬದಲಿಲ್ಲ ನೀವು ಬದಲಿದ್ದೀರಾ.ಹಿಂದಿನವರು ಒಂಬತ್ತೂ ಹತ್ತು ಮಕ್ಕಳಿದ್ದರೂ ಅವರಿಂದ ಇತ್ಲಾಗಿ ಅಪೇಕ್ಷಿಸುತ್ತಿದ್ದುದು ಕಡಮೆ ಅವರು ಸ್ವಂತ ಕಾಲಲ್ಲಿ ನಿಲ್ಲಲು ಕಲಿಯ ಬೇಕೆನ್ನುತ್ತಿದ್ದರು.ಇಂತಾ ವೃತ್ತಿ ಯೇ ಆಗ ಬೇಕೆಂಬ ವಿಪರೀತ ಹಠ ಇರಲಿಲ್ಲ.
ಆದರೆ ಇಂದು ಒಂದೇ ಮಗುವಿನಿಂದ ಹತ್ತು ಮಕ್ಕಳಿಂದ ಪಡೆಯ ಬೇಕಾದ್ದನ್ನು ಅಪೇಕ್ಷಿಸುತ್ತಿದ್ದಾರೆ. ಈಗ ತಮ್ಮ ಮಕ್ಕಳ ಜೀವದಲ್ಲೇ ಆಡಲು ಪ್ರಾರಂಭಿಸಿದ್ದಾರೆಂದರೆ ಧಿಕ್ಕಾರ ಆ ಮಾತಾ ಪಿತೃಗಳಿಗೆ.”
-ಕೃಷ್ಣ ಮೋಹನ್‌ ಭಟ್

“ಶಾಲಾರಂಭಕ್ಕೆ ಅವಸರ ಮಾಡುವುದು ಸರಿಯಲ್ಲ…ಕೊರೊನಾ ಭೀತಿಯಲ್ಲಿ ಮಕ್ಕಳನ್ನು ಕಳುಹಿಸುವುದು ಅಸಾಧ್ಯ. ನಮಗೆ ನಮ್ಮ ಮಕ್ಕಳು ಅವರ ಆರೋಗ್ಯ, ಭವಿಷ್ಯವೇ ಅತಿಮುಖ್ಯ…”
-ರಾಜೇಶ್ವರೀ ಜಿ.ಭಟ್‌, ವೇಣೂರು

“ಕೋವಿಡ್ 19 ಕಾಯಿಲೆಯು ಸಾಂಕ್ರಾಮಿಕವಾಗಿದ್ದು, ನಿಯಂತ್ರಣ ಮಾಡಲು ಹರಸಾಹಸ ಮಾಡುತ್ತಿರುವಾಗ ಶಾಲೆಯು ಆರಂಭವಾದರೆ ಇನ್ನಷ್ಟು ಮಕ್ಕಳಿಗೆ ಕಾಯಿಲೆ ಹರಡುವ ಸಾಧ್ಯತೆ ಅಧಿಕವಾಗಿದೆ. ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇರುವುದು ಅಲ್ಲದೆ ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳುವುದು ಇತ್ಯಾದಿಗಳು ಮಕ್ಕಳಿಂದ ನಿರೀಕ್ಷಿಸುವುವುದು ಸಾಧ್ಯವಿಲ್ಲದ ಮಾತು. ಹಾಗಾಗಿ ಸದ್ಯಕ್ಕೆ ಶಾಲೆಯನ್ನು ಪ್ರಾರಂಭಿಸುವುದು ಬೇಡ ..”
-ಸುರೇಶ್‌ ಮಾರ್ನಾಡ್‌

“ಶಾಲಾರಂಭ ಸದ್ಯಕ್ಕಂತೂ ಬೇಡ. ಪ್ರತಿಯೊಬ್ಬ ಪೋಷಕರೂ ಸರಕಾರಿ ಸುತ್ತೋಲೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಗೌರವಿಸುತ್ತಾರೆಂಬುದು ನನ್ನ ಭಾವನೆ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪರಿಕಲ್ಪನೆಯಲ್ಲಿರುವವರು ಇಂದಿನವರು. ವರ್ಷವೊಂದು ನಷ್ಟವಾದರೂ ಚಿಂತಿಲ್ಲ…ಮಕ್ಕಳಿದ್ದರೆ ತಾನೇ ಭವಿಷ್ಯ ಎಂಬುದಷ್ಟೇ ನಮ್ಮ ನಿರ್ಧಾರ. ಖಾಸಗೀ ಶಿಕ್ಷಣ ಸಂಸ್ಥೆ, ಅಲ್ಲಿನ ಅಧ್ಯಾಪಕರ ವೇತನಕ್ಕೆ ತೊಂದರೆಯಾಗಬಹುದು ಎಂಬುದು ಸತ್ಯ. ಆದರೆ ಮಕ್ಕಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. “
-ಪೂರ್ಣಿಮಾ ಶಿವಕುಮಾರ್‌, ಶಿಕ್ಷಕಿ, ತುಮುಕೂರು.

ಚಿತ್ರಕೃಪೆ: ಅಂತರ್ಜಾಲ, ಸಾಂದರ್ಭಿಕ ಚಿತ್ರಗಳು.

LEAVE A REPLY

Please enter your comment!
Please enter your name here