ಶಾರದೋತ್ಸವಕ್ಕೆ ಭರದ ಸಿದ್ಧತೆ

0
150

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಕೇರಳ ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ ಇದರ ವತಿಯಿಂದ ಒಂಭತ್ತನೇ ವರ್ಷದ ಶಾರದೋತ್ಸವ ಈ ತಿಂಗಳ 10 ಸೋಮವಾರ ಮತ್ತು 11ಮಂಗಳವಾರದಂದು ಜರಗಲಿದ್ದು ಭರದ ಸಿದ್ಧತೆಗಳು ನಡೆಯಿತ್ತಿವೆ. ಬದಿಯಡ್ಕ ಗುರುಸದನದಲ್ಲಿ 10ರಂದು ಬೆಳಿಗ್ಗೆ 6.30ಕ್ಕೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ, 8ರಿಂದ ಭಜನೆ, 10 ಗಂಟೆಗೆ ಮುದ್ದು ನಾಯ್ಕ ಕುಂಟಾಲುಮೂಲೆ ಅವರಿಂದ ಧ್ವಜಾರೋಹಣ, 10.15ಕ್ಕೆ ಆಯುಧ ಪೂಜೆ ನಡೆಯಲಿದೆ.
 
 
 
10.30ರಿಂದ ಸಭಾಕಾರ್ಯಕ್ರಮ, ಅಭಿನಂದನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜಗೋಪಾಲ ಎ.ಕೆ ಅವರ ಅಧ್ಯಕ್ಷತೆಯಲ್ಲಿ ಶೋಭಾಗೋಪಾಲನ್ ಉದ್ಘಾಟಿಸಿಸುವರು.
 
 
ಜಿಲ್ಲಾ ಪಂಚಾಯತ್ ಪುಣಚ ಕ್ಷೇತ್ರದ ಸದಸ್ಯೆ ಜಯಶ್ರೀ ಕೋಡಂದೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜನಪ್ರತಿನಿಧಿಗಳಾದ ಪುಷ್ಪಾ ಆಮೆಕ್ಕಳ, ಯಶೋಧ, ಪ್ರೇಮ, ಶಶಿಕಲ, ಪುಷ್ಪಾ, ಚಂದ್ರಾವತಿ, ನಿರ್ಮಲ, ಐತ್ತಪ್ಪ, ಎಂ.ಸಿ. ಮಾಧವನ್, ಅನೂಪ್, ಶಾರದಾ, ವನಜಾ, ಐತ್ತು, ವಸಂತಿ, ಯಾದವ್ ಕುಮಾರ್, ರೇವತಿ ಮೊದಲಾದವರಿಗೆ ಅಭಿನಂದನೆ ನೀಡಲಾಗುವುದು. ಬ್ಲೋಕ್ ಪಂಚಾಯತ್ ಮಾಜಿ ಸದಸ್ಯೆ ರತ್ನಾವತಿ, ಮರಾಟಿ ಸಂರಕ್ಷಣಾ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣನಾಯ್ಕ ಬದಿಯಡ್ಕ, ಚಂದ್ರಶೇಖರ ಮಾಸ್ಟರ್ ಏತಡ್ಕ ಶುಭಹಾರೈಸಲಿರುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ 2ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ಸಂಜೆ 4ರಿಂದ ಯಕ್ಷಗಾನ ಕೂಟ. 6.30ರಿಂದ ನಾಟ್ಯಾರ್ಚನೆ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ.
 
 
11ರಂದು ಬೆಳಗ್ಗೆ 7 ಘಂಟೆಗೆ ಮಹಾಪೂಜೆ, 8ರಿಂದ ಭಜನೆ, 9.30ಕ್ಕೆ ವಿದ್ಯಾರಂಭ, 11 ಘಂಟೆಗೆ ಸಮಾರೋಪ ಸಮಾರಂಭ ಜರಗಲಿದೆ. ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಈಶ್ವರ ಮಾಸ್ಟರ್ ಪೆರಡಾಲ ಅಧ್ಯಕ್ಷತೆ ವಹಿಸಲಿರುವರು. ಶಂಕರ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಪ್ರಗತಿಪರ ಕೃಷಿಕ ಎಂ.ಟಿ. ಚನಿಯಪ್ಪ ಮಡಿಕೇರಿ ಮತ್ತು ಕೇರಳ ಸರಕಾರದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ವಿಜೇತೆ ಚಂದ್ರಾವತಿ ಅವರನ್ನು ಸನ್ಮಾನಿಸಲಾಗುವುದು. ಡಾ| ಕೇಶವ ನಾಯ್ಕ ಖಂಡಿಗೆ ಧಾರ್ಮಿಕ ಭಾಷಣ ಮಾಡಲಿರುವರು. ಸುಂದರ ನಾಯ್ಕ ಕನಕಪ್ಪಾಡಿ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಿಸಲಿರುವರು.
 
 
ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1ಘಂಟೆಯಿಂದ ಪ್ರಸಾದ ಭೋಜನ, ಅಪರಾಹ್ನ 2.30ರಿಂದ ಶಾರದಾ ದೇವಿಯ ಶೋಭಾಯಾತ್ರೆ ಆರಂಭವಾಗಲಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಶಾರದೋತ್ಸವ ಸಮಿತಿ ಪದಾಧಿಕಾರಿಗಳಾದ ರಾಜಗೋಪಾಲ ಎ.ಕೆ., ಸುಬ್ರಹ್ಮಣ್ಯ ಬದಿಯಡ್ಕ, ಚಕ್ರೇಶ್ವರ ಆರ್, ಪ್ರಧಾನ ಸಂಚಾಲಕ ಜಯರಾಮ ನಾಯ್ಕ ಕುಂಟಾಲುಮೂಲೆ ಸಹಿತ ಸದಸ್ಯರು ವಿನಂತಿಸಿದ್ದಾರೆ

LEAVE A REPLY

Please enter your comment!
Please enter your name here