ಶಾಯಿ ಬಳಕೆಗೆ ಆಕ್ಷೇಪ

0
200

ರಾಷ್ಟ್ರೀಯ ಪ್ರತಿನಿಧಿ ವರದಿ
ಹಣ ವಿನಿಮಯಕ್ಕೆ ಶಾಯಿ ಬಳಕೆಗೆ ಆಯೋಗದಿಂದ ಆಕ್ಷೇಪ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಕ್ರಮಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಪತ್ರ ಬರೆದಿದೆ.
 
 
 
ಮುಂಬರುವ ದಿನಗಳಲ್ಲಿ 5 ರಾಜ್ಯಗಳಲ್ಲಿ ಚುನಾವಣೆ ಇದೆ. ಈಗ ಬ್ಯಾಂಕ್ ಗಳಲ್ಲಿ ನೋಟು ವಿನಿಮಯಕ್ಕೆ ಶಾಯಿ ಹಚ್ಚಿದರೆ ಮುಂದೆ ಚುನಾವಣೆ ವೇಳೆ ಕಷ್ಟವಾಗುತ್ತದೆ. ಅಳಿಸಲಾಗದ ಶಾಯಿ ಬಳಸುವುದರಿಂದ ಚುನಾವಣಾ ವೇಳೆ ಜನರ ಕೈ ಬೆರಳಿಗೆ ಶಾಯಿ ಹಚ್ಚಲು ತೊಂದರೆಯಾಗುತ್ತದೆ. ಆದ್ದರಿಂದ ಅಳಿಸಲಾಗದ ಶಾಯಿ ಬಳಸದಿರುವಂತೆ ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಮನವಿ ಮಾಡಿದೆ.

LEAVE A REPLY

Please enter your comment!
Please enter your name here