ರಾಷ್ಟ್ರೀಯ ಪ್ರತಿನಿಧಿ ವರದಿ
ಶಶಿಕಲಾ ನಟರಾಜನ್ ಅವರ ತಮಿಳುನಾಡು ಸಿಎಂ ಕನಸು ಭಗ್ನವಾಗಿದೆ. ಶಶಿಕಲಾ ನಟರಾಜನ್ ವಿರುದ್ಧದ ಆರೋಪ ಸಾಬೀತಾಗಿದೆ. ವಿ.ಕೆ.ಶಶಿಕಲಾ ದೋಷಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಶಶಿಕಲಾ ವಿರುದ್ಧ ಆದಾಯ ಮೀರಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಶಶಿಕಲಾ ಅಪರಾಧಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಬ್ಬರು ನ್ಯಾಯಮೂರ್ತಿಗಳ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾ.ಪಿನಾಕಿ ಚಂದ್ರ ಘೋಷ್ ಮತ್ತು ನ್ಯಾ.ಅಮಿತಾಬ್ ರಾಯ್ ಪೀಠ ತೀರ್ಪು ನೀಡಿದೆ. ಬೆಂಗಳೂರು ವಿಶೇಷ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
4 ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿ ರೂ. ದಂಡವನ್ನು ವಿಧಿಸಿದ ಸುಪ್ರೀಂ ಕೋರ್ಟ್ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿದೆ.
ಶಶಿಕಲಾ ನಟರಾಜನ್ ಇನ್ನೂ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಇದರಿಂದ ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರಿಗೆ ನಿರಾಳವಾಗಿದೆ.