ಶಶಿಕಲಾಗೆ ಸಾಮಾನ್ಯ ಕೈದಿಗಳ ಆಹಾರ

0
186

ನಮ್ಮ ಪ್ರತಿನಿಧಿ ವರದಿ
ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶಶಿಕಲಾ ನಟರಾಜನ್ ಗೆ ಸಾಮಾನ್ಯ ಕೈದಿಗಳಿಗೆ ನೀಡುವಂತೆ ಉಪಹಾರ ನೀಡಲಾಗಿದೆ.
 
 
ಜೈಲಿನ ಸಿಬ್ಬಂದಿ ವಿ.ಕೆ ಶಶಿಕಲಾಗೆ ತಿನ್ನಲು ಪುಳಿಯೊಗರೆ ನೀಡಿದ್ದಾರೆ. ನಿನ್ನೆ ರಾತ್ರಿ ಊಟ ಮಾಡದ್ದೇ ಇದ್ದರು. ಇಳವರಸಿ ಒತ್ತಾಯದಂತೆ ಮಜ್ಜಿಗೆ ಅನ್ನ ತಿಂದಿದ್ದರು. ಇಂದು ಮುಂಜಾನೆ ಶಶಿಕಲಾಗೆ ತಮಿಳು, ಆಂಗ್ಲ ಪೇಪರ್ ಪೂರೈಕೆ ಮಾಡಲಾಗಿದೆ.
 
 
 
ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಶಶಿಕಲಾ ನಟರಾಜನ್ ಬೆಂಗಳೂರಿನ ಜೈಲಿನಲ್ಲಿ ಇನ್ನು ಮುಂದೆ ಕೈದಿ ಸಂಖ್ಯೆ 9934. ಜೈಲು ಸೇರಿದ ಶಶಿಕಲಾಗೆ ಕೈದಿ ಸಂಖ್ಯೆಯನ್ನೂ ನೀಡಲಾಗಿದೆ. ಇನ್ನು ಮತ್ತೊಬ್ಬ ದೋಷಿ ಇಳವರಸಿಗೆ 9935 ಮತ್ತು ಸುಧಾಕರ್ ಗೆ 9936 ಸಂಖ್ಯೆ ವಿತರಿಸಲಾಗಿದೆ.

LEAVE A REPLY

Please enter your comment!
Please enter your name here