ಶಶಿಕಲಾಗೆ ಟೋಪಿ, ಪನ್ನೀರ್ ಗೆ ವಿದ್ಯುತ್ ಕಂಬ

0
320

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಚುನಾವಣಾ ಆಯೋಗ ಎಐಎಡಿಎಂಕೆ ಪಕ್ಷದ ಚಿನ್ಹೆಯನ್ನು ಹಿಂದಕ್ಕೆ ಪಡೆದಿದ್ದು, ಆರ್.ಕೆ.ನಗರ ಉಪ ಚುನಾವಣೆಗಾಗಿ ಶಶಿಕಲಾ ಬಣಕ್ಕೆ ಟೋಪಿ ಮತ್ತು ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬದ ಚಿನ್ಹೆಯನ್ನು ಗುರುತಾಗಿ ನೀಡಿದೆ.
 
 
 
ಎಐಎಡಿಎಂಕೆ ಪಕ್ಷದ ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡಲಾಗಿದೆ. ಶಶಿಕಲಾ ಬಣಕ್ಕೆ ‘ಹ್ಯಾಟ್’ (ಟೋಪಿ) ಚಿತ್ರವನ್ನು ಚಿಹ್ನೆಯಾಗಿ ಬಳಸಲು ಮತ್ತು ಎಐಎಡಿಎಂಕೆ (ಅಮ್ಮ) ಹೆಸರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
 
 
 
ಓ ಪನ್ನೀರ ಸೆಲ್ವಂ ಬಣಕ್ಕೆ ‘ವಿದ್ಯುತ್ ಕಂಬ’ ವನ್ನು ಚುನಾವಣಾ ಚಿಹ್ನೆಯಾಗಿ ಮತ್ತು ಎಐಎಡಿಎಂಕೆ (ಪುರುಚ್ಚಿತಲೈವಿ ಅಮ್ಮ) ಹೆಸರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
 
 
 
ಬುಧವಾರ ರಾತ್ರಿ ಚುನಾವಣಾ ಆಯೋಗ ಉಭಯ ಬಣಗಳಿಗೂ ಪತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿತ್ತು. ಗುರುವಾರ ಉಭಯ ಬಣಗಳ ಆಯ್ಕೆಗಳನ್ನು ಪರಿಶೀಲಿಸಿದ ಆಯೋಗ ಅಂತಿಮ ಅನುಮತಿ ನೀಡಿದೆ.

LEAVE A REPLY

Please enter your comment!
Please enter your name here