ಶಪಥಪರ್ವ ಸಮಾವೇಶಕ್ಕೆ ಹವ್ಯಕ ಮಹಾಸಭಾ ಬೆಂಬಲ

0
215

ನಮ್ಮ ಪ್ರತಿನಿಧಿ ವರದಿ
ಶ್ರೀಶಂಕರಾಚಾರ್ಯ ಸ್ಥಾಪಿತವಾದ, ಏಕಮೇವ ಅವಿಚ್ಛಿನ್ನ ಪರಂಪರೆಯನ್ನು ಹೊಂದಿರುವ ಶ್ರೀರಾಮಚಂದ್ರಾಪುರಮಠವು ಸಾವಿರಾರು ವರ್ಷಗಳಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾಬರುತ್ತಿದ್ದು, ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಧರ್ಮಸಂರಕ್ಷಣೆಯ ಜೊತೆಗೆ ಗೋಸಂರಕ್ಷಣೆ, ವಿದ್ಯಾಸಹಾಯ, ವಿದ್ಯಾದಾನ, ಆರ್ತಸಹಾಯ ಮುಂತಾದ ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಂಡಿದೆ.
 
 
 
ನ್ಯಾಯ-ಧರ್ಮದ ಪಥದಲ್ಲಿ ಶ್ರೀರಾಮಚಂದ್ರಾಪುರಮಠವಿದ್ದು, ಸಮರ್ಥವಾದ ಆಡಳಿತ ವ್ಯವಸ್ಥೆಯನ್ನೂ ಹೊಂದಿದೆ. ಇಂತಹ ಧಾರ್ಮಿಕ ಶ್ರದ್ಧಾಕೇಂದ್ರದ ಮೇಲೆ ಸರ್ಕಾರವು ಅನಗತ್ಯವಾಗಿ ಹಸ್ತಕ್ಷೇಪಕ್ಕೆ ಮುಂದಾಗಿರುವುದು ಹವ್ಯಕ ಸಮಾಜ ಸೇರಿದಂತೆ ಲಕ್ಷಾಂತರ ಜನರ ಮನಸ್ಸಿಗೆ ಘಾಸಿಯನ್ನುಂಟುಮಾಡಿದೆ. ಶ್ರೀಮಠದ ಮೇಲಾಗುತ್ತಿರುವ ಇಂತಹಾ ಆಕ್ರಮಣಗಳನ್ನು, ಅನ್ಯಾಯವನ್ನು ವಿರೋಧಿಸಿ ಅಕ್ಟೋಬರ 8 ಶನಿವಾರ ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ “ಶಪಥಪರ್ವ” ಸಮಾವೇಶ ನಡೆಯಲಿದ್ದು, ಮೌನ ಪ್ರತಿಭಟನೆ ಹಾಗೂ ಉಪವಾಸದ ಮೂಲಕ ಮಠದ ಮೇಲಾಗುತ್ತಿರುವ ಅನಾಚಾರವನ್ನು ಪ್ರತಿಭಟಿಸಲಾಗುವುದು.
 
 
“ಶಪಥಪರ್ವ” ಸಮಾವೇಶಕ್ಕೆ ಶ್ರೀ ಅಖಿಲ ಹವ್ಯಕ ಮಹಾಸಭಾದ ಸಂಪೂರ್ಣ ಬೆಂಬಲವಿದ್ದು, ಧಾರ್ಮಿಕ ಶ್ರದ್ಧಾಕೇಂದ್ರದ ಮೇಲಾಗುತ್ತಿರುವ ಅನ್ಯಾಯವನ್ನು “ಶಪಥಪರ್ವ” ಸಮಾವೇಶದಲ್ಲಿ ಭಾಗವಹಿಸುವುದರ ಮೂಲಕ ಜನತೆ ತೀವ್ರ ಪ್ರತಿರೋಧ ವ್ಯಕ್ತಪಡಿಸಬೇಕೆಂದು ಕೋರಿಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here