ಶತಮಾನದ ನಂತರ ಬಾಹುಬಲಿಗೆ ಮಜ್ಜನ

0
274

ಮೂಡಬಿದಿರೆ ಪ್ರತಿನಿಧಿ ವರದಿ
ಇತಿಹಾಸ ಪ್ರಸಿದ್ದ ಮೂಡಬಿದಿರೆ ಸಾವಿರ ಕಂಬದ ಬಸದಿಯೊಳಗಿರುವ ಮುನ್ನೂರು ಕಿಲೋ ತೂಕದ ರಜತಬಾಹುಬಲಿ ವಿಗ್ರಹಕ್ಕೆ ಬಸದಿಯ ಅಂಗಣದಲ್ಲಿ ಅತ್ಯಪೂರ್ವ ಮಜ್ಜನಕಾರ್ಯ ನಡೆಯಿತು. ಮೂಡಬಿದಿರೆ ಜೈನಮಠಾಧೀಶ ಭಟ್ಟಾರಕ ಚಾರುಕೀರ್ತಿ  ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ದಿವಂಗತ ಆದಿರಾಜರ ಕನಸಿನಂತೆ ಅವರ ಮಕ್ಕಳಾದ ನಾಗೇಂದ್ರ ಕುಮಾರ್, ಶೈಲೇಂದ್ರ ಕುಮಾರ್, ಪುತ್ರಿಯರು, ಕುಟುಂಬಸ್ಥರು ಈ ಸೇವೆಯಲ್ಲಿ ಪಾಲ್ಗೊಂಡರು. 54ಕಲಶಗಳ ಜಲಾಭಿಷೇಕದ ಬಳಿಕ, ಎಳನೀರು,ಕಬ್ಬಿನ ಹಾಲು, ಹಾಲು, ನವಧಾನ್ಯ, ದನದತುಪ್ಪ, ಅರಶಿನ,ಕೇಸರಿ, ಚತುಷ್ಕೋನ ಕಲಶಾಭಿಷೇಕಗಳು ನಡೆದವು. ಕೊನೆಗೆ ಅಷ್ಟಗಂಧ ಅಭಿಷೇಕ, ಮಹಾಮಂಗಳಾರತಿ ನಡೆದವು.
 

LEAVE A REPLY

Please enter your comment!
Please enter your name here