ಶಕ್ತಿ ಪ್ರದರ್ಶನಕ್ಕೆ ಮುಂದಾದ ಈಶ್ವರಪ್ಪ

0
437

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕರ ಭಿನ್ನಮತ ಭುಗಿಲೆದ್ದಿದೆ. ಕುರುಬ ಸಮುದಾಯ ಸಂಘಟನೆಗೆ ಕೆ ಎಸ್ ಈಶ್ವರಪ್ಪ ತಂತ್ರ ರೂಪಿಸಿದ್ದಾರೆ.
 
 
ಬಿಜೆಪಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಕೆ.ಎಸ್. ಈಶ್ವರಪ್ಪ ರಣತಂತ್ರ ರೂಪಿಸಿದ್ದಾರೆ. ಅಹಿಂದ ನಾಯಕರ ಜತೆ ಈಶ್ವರಪ್ಪ ಸಮಾಲೋಚನೆ ನಡೆಸಿದ್ದಾರೆ. ಇದಕ್ಕಾಗಿ ಈಶ್ವರಪ್ಪ ಬೆಂಗಳೂರಿನ ಕಬ್ಬನ್ ಪಾರ್ಕ್ ಸೆಕ್ರೆಟರಿಯೇಟ್ ಕ್ಲಬ್ ನಲ್ಲಿ ಸಭೆ ನಡೆಸಿದ್ದಾರೆ.
 
ಈಶ್ವರಪ್ಪ ಕುರುಬ ಸಮುದಾಯ ಸಂಘಟನೆಗೆ ಮುಂದಾಗಿದ್ದಾರೆ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರೆಗೇಡ್’ ಎಂಬ ಸಂಘಟನೆ ಹುಟ್ಟುಹಾಕಿ, ಅದರ ಬಲವರ್ಧನೆ ಚಿಂತಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಕೆ ಎಸ್ ಈಶ್ವರಪ್ಪ ಕಡೆಗಣನೆ ಹಿನ್ನೆಲೆಯಲ್ಲಿ ಹೊಸಂಘಟನೆ ಬಲವರ್ಧನೆಗೆ ಈಶ್ವರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ. ಅಹಿಂದ ನಾಯಕ ಮುಕುಡಪ್ಪ ಸೇರಿ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here